
UN NEWS NETWORKS
ಉಳ್ಳಾಲ: ತಲಪಾಡಿ ಗ್ರಾಮ ಪಂಚಾಯತ್ನ 2022-23ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಫೆ. 22ರಂದು ಬೆಳಗ್ಗೆ 10.30ಕ್ಕೆ ತಲಪಾಡಿ ಗ್ರಾಮ ಪಂಚಾಯತ್ ವಠಾರದ ಎ.ಪಿ.ಜೆ. ಅಬ್ದುಲ್ ಕಲಾಂ ಸಭಾ ಭವನದಲ್ಲಿ ನಡೆಯಲಿದೆ.
ಗ್ರಾಮ ಸಭೆಗೆ ಪೂರ್ವಭಾವಿಯಾಗಿ ಫೆ. 13ರಂದು 1ನೇ ವಾರ್ಡ್ ಸಭೆ ಬೆಳಗ್ಗೆ 11 ಗಂಟೆಗೆ ತಲಪಾಡಿ ಗ್ರಾಮಸೌಧ ಕಟ್ಟಡದಲ್ಲಿ, 2ನೇ ವಾರ್ಡ್ ಸಭೆ ಮಧ್ಯಾಹ್ನ 2.30ಕ್ಕೆ ಫಲಾಹ್ಶಾಲಾ ಬಳಿಯ ಅಂಗನವಾಡಿ ಕೇಂದ್ರದಲ್ಲಿ , 3ನೇ ವಾರ್ಡ್ ಸಭೆ ಸಂಜೆ 4.00 ಗಂಟೆಗೆ ಪೂಮಣ್ಣು 1ನೇ ಕ್ರಾಸ್ ಬಳಿ ನಡೆಯಲಿದೆ. ಫೆ. 14ರಂದು 4ನೇ ವಾರ್ಡ್ ಸಭೆ ಸಂಜೆ 4.00ಕ್ಕೆ ಪೂಮಣ್ಣು ಮಸೀದಿ ಬಳಿ, ಬೆಳಗ್ಗೆ 11ಕ್ಕೆ 5ನೇ ವಾರ್ಡ್ ಸಭೆ ಜನತಾ ಕ್ವಾರ್ಟಸ್ ಶ್ರೀರಾಮ ಭಜನಾ ಮಂದಿರದ ಬಳಿಯ ಅಂಗನವಾಡಿ ಕೇಂದ್ರದಲ್ಲಿ , 9ನೇ ವಾರ್ಡ್ ಸಭೆ 2.00ಗಂಟೆಗೆ ದೇವಿಪುರ ಅಂಗನವಾಡಿ ಕೇಂದ್ರದಲ್ಲಿ ನಡೆಯಲಿದೆ. ಫೆ. 15ರಂದು ಬೆಳಗ್ಗೆ 10ಕ್ಕೆ 6ನ ವಾರ್ಡ್ ಸಭೆ ನಾರ್ಲ ಪಡೀಲ್ ಅಂಗನವಾಡಿ ಕೇಂದ್ರದಲ್ಲಿ 7ನೇ ವಾರ್ಡ್ ಸಭೆ ಬೆಳಗ್ಗೆ 11ಕ್ಕೆ ದೇವಿನಗರ ಅಂಗನವಾಡಿ ಕೇಂದ್ರದಲ್ಲಿ, 8ನೇ ವಾರ್ಡ್ ಸಭೆ ಮಧ್ಯಾಹ್ನ 12ಕ್ಕೆ ದ.ಕ.ಜಿ. ಪಂ, ಕಿ. ಪ್ರಾ. ಶಾಲೆ ಪಿಲಿಕೂರು ಇಲ್ಲಿ ನಡೆಯಲಿದೆ ಎಂದು ಗ್ರಾಮ ಪಂಚಾಯತ್ ಪ್ರಕಟನೆ ತಿಳಿಸಿದೆ.


