UN networks
ಉಳ್ಳಾಲ: ರಾಜ್ಯ ಸರಕಾರದ ಧ್ವೇಷದ ಮತ್ತು ರಾಜಕೀಯ ಪ್ರೇರಿತವಾದ ತೀರ್ಮಾನದಿಂದ ಸ್ಪಷ್ಟವಾದ ಅನುದಾನ ನೀಡದೆ ಮಂಚಿಲ – ಮಾರ್ಗತಲೆ -ಕುದ್ರು ಪ್ರದೇಶದ ಹಿನ್ನೀರಿನ ಪ್ರದೇಶದಲ್ಲಿ ದೊಡ್ಡ ಮಟ್ಟದ ಕಾಮಗಾರಿ ನಡೆಸಲು ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದರೆ ಈ ಪ್ರದೇಶವನ್ನು ಸಂಪೂರ್ಣ ಅಭಿವೃದ್ಧಿ ಪಡಿಸಲಾಗುವುದು ಎಂದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.
ಉಳ್ಳಾಲ ನಗರಸಭಾ ವ್ಯಾಪ್ತಿಯ 14ನೇ ವಾರ್ಡ್ನ ಮಂಚಿಲ ಮಾರ್ಗತಲೆ ಕುದ್ರ ಪ್ರದೇಶದಲ್ಲಿ ಸಣ್ಣ ನೀರಾವರಿ ಮತ್ತ ಜಲ ಸಂಪನ್ಮೂಲ ಇಲಾಖೆಯಿಂದ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಹಿನ್ನೀರಿನ ಬದಿಯಾದ ಕಾರಣ ಇಲ್ಲಿ ಸರಿಯಾದ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಎರಡೂ ಕಡೆ ಬದಿ ಕಟ್ಟಿ ರಸ್ತೆ ನಿರ್ಮಾಣ ಮಾಡಲು ದೊಡ್ಡ ಮಟ್ಟದ ಅನುದಾನದ ಆಗತ್ಯವಿದೆ, ಆದರೆ ಈ ಕ್ಷೇತ್ರಕ್ಕೆ ರಾಜ್ಯ ಸರಕಾರ ಸರಿಯಾದ ಅನುದಾನ ನೀಡದೆ ದೊಡ್ಡ ಮಟ್ಟದ ಕಾಮಗಾರಿ ನಡೆಸಲಾಗಿಲ್ಲ. ಈ ಹಿನ್ನಲೆಯಲ್ಲಿ ಸಣ್ಣ ಮಟ್ಟದ ಕಾಮಗಾರಿಗಳನ್ನು ಈ ಬಾರಿ ನಡೆಸಿ ಮುಂದಿನ ದಿನಗಳಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಭಟ್ನಗರ, ನಗರಸಭಾ ಉಪಾಧ್ಯಕ್ಷ ಆಯ್ಯುಬ್ ಮಂಚಿಲ, ಸ್ಥಾಯಿ ಸಮಿತಿ ಅಧ್ಯಕ್ಷೆ ವೀಣಾ ಡಿ.ಸೋಜಾ, ಸದಸ್ಯರಾದ ಅಝೀಝ್, ಮಹಮ್ಮದ್ ನವಾಝ್, ಹಿರಿಯರಾದ ಅಬ್ಬಾಸ್ ಮಾರ್ಗತಲೆ, ಅರುಣ್ ಡಿ.ಸೋಜಾ, ಲಾಯ್ಡ್ ಡಿ.ಸೋಜಾ, ಇಬ್ರಾಹಿಂ ಮಾರ್ಗತಲೆ, ಇಬ್ರಾಹಿಂ ಕುದ್ರು ಉಪಸ್ಥಿತರಿದ್ದರು.


