UN networks
ಉಳ್ಳಾಲ : ವಕ್ಫ್ ಮಂಡಳಿಯು ಫೆ.25ರಂದು ಉಳ್ಳಾಲ ಜಮಾಅತ್ ಮತ್ತು ಉಳ್ಳಾಲ ದರ್ಗಾ ಆಡಳಿತ ಸಮಿತಿಗೆ ನಡೆಸುವ ಚುನಾವಣೆ ‘ವಕ್ಫ್ ‘ಕಾಯಿದೆ ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಸೈಯದ್ ಮದನಿ ಸೇವಾ ಸಮಿತಿ ತಿಳಿಸಿದೆ.
ಈ ಮೂಲಕ ಉಳ್ಳಾಲ ಜಮಾಅತ್ ನ ಪರಂಪರೆಗೆ ಚ್ಯುತಿ ತಂದಂತಾಗಿದೆ. ಆದ್ದರಿಂದ ಈ ಕ್ರಮವನ್ನು ಉಳ್ಳಾಲ ದರ್ಗಾ ಸಮಿತಿ ಸಂಬಂಧ ಪಟ್ಟವರ ಗಮನ ಸೆಳೆಯ ಬೇಕು. ಅಕ್ರಮ -ಅನ್ಯಾಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗಬೇಕಿದೆ. ವಕ್ಫ್ ನಿಯಮ ಚಾಪ್ಟರ್ -6 ರಲ್ಲಿ, ಜಮಾಅತ್ ನ ಆಡಳಿತ ಸಮಿತಿಯನ್ನು ರಚನೆ ಮಾಡುವ ಅಧಿಕಾರ ಪ್ರಸ್ತುತದಲ್ಲಿ ರುವ ಆಡಳಿತ ಸಮಿತಿಯದ್ದಾಗಿದೆ ಎಂದು ಹೇಳುತ್ತವೆ. ಈ ಆಯ್ಕೆ ಸೂಚನೆ -ಅನುಮೋದನೆಯ ಮೂಲಕ ನಡೆಸಲು ಅಸಾಧ್ಯ ಎಂದು ಕಂಡು ಬಂದಲ್ಲಿ ಮಾತ್ರ ಚುನಾವಣೆ ನಡೆಸ ಬಹುದು ಎಂದೂ ವಕ್ಫ್ ಕಾಯಿದೆ ಹೇಳುತ್ತದೆ. ಈಗ ವಕ್ಫ್ ಇಲಾಖೆ ನಡೆಸಲು ಉದ್ದೇಶಿಸಿರುವ ಚುನಾವಣೆ ಪ್ರಕ್ರಿಯೆ ವಕ್ಫ್ ಕಾನೂನನ್ನು ಉಲ್ಲಂಘಿಸಿರುವುದನ್ನು ಸಾಬೀತು ಪಡಿಸುತ್ತವೆ. ಪ್ರಸಕ್ತ ಉಳ್ಳಾಲ ಜಮಾಅತ್ ನ ಮುಸ್ಲಿಂ ಜನಸಂಖ್ಯೆಗೆ ಅನುಗುಣವಾಗಿಯೂ ಈ ಚುನಾವಣೆ ನಡೆಸಲ್ಪಡುತ್ತಿಲ್ಲ, ಉಳ್ಳಾಲ ಜಮಾಅತ್ ನಲ್ಲಿ ಸುಮಾರು 26,000 ಕ್ಕಿಂತ ಅಧಿಕ ಮುಸ್ಲಿಂ ಪುರುಷರು ವಾಸವಾಗಿದ್ದಾರೆ. ಚುನಾವಣೆ ನಡೆಯುವ ಕುರಿತು ಜಮಾಅತ್ ನಿವಾಸಿಗಳಿಗೆ ಅಗತ್ಯ ಮಾಹಿತಿ ನೀಡದೆ, ಕೇವಲ ಮೂರು ಸಾವಿರದಷ್ಟು ಮತದಾರರನ್ನು. ಗುರುತಿಸಿ ಕೊಂಡು ನಡೆಸುವ ಚುನಾವಣೆ ದುರುದ್ದೇಶದಿಂದ ಕೂಡಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಉಳ್ಳಾಲ ದರ್ಗಾ ಆಡಳಿತ ಸಮಿತಿ ಕೂಡಲೇ ಈ ಚುನಾವಣೆಯನ್ನು ಬಹಿಷ್ಕರಿಸಿ, ಉಳ್ಳಾಲ ದರ್ಗಾದ ಪರಂಪರೆಯಂತೆ ನೂತನ ಸಮಿತಿಯ ರಚನೆಯನ್ನು ಮಾಡ ಬೇಕು ಎಂದು ಸೈಯದ್ ಮದನಿ ಸೇವಾ ಸಮಿತಿ ಅಧ್ಯಕ್ಷ ಉಮರ್ ಅಬ್ದುಲ್ ಖಾದರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


