UN networks
ಉಳ್ಳಾಲ: ಹೊಸಕರಿಯ ಯೂತ್ ಫೌಂಡೇಷನ್ ಹಾಗೂ ಇಸ್ಲಾಹಿ ಎಜ್ಯುಕೇಷನ್ ಟ್ರಸ್ಟ್ ಜಂಟಿ ಆಶ್ರಯದಲ್ಲಿ ಜ.22 ರಂದು ಎಲ್ಲಾ ಧರ್ಮೀಯರು ಜೊತೆಯಾಗಿ ಸೌಹಾರ್ದಯುತವಾಗಿ ಉಳ್ಳಾಲದ ಇಸ್ಲಾಹಿ ಮಹಿಳಾ ಸಂಯುಕ್ತ ಪದವಿಪೂರ್ವ ಕಾಲೇಜು ಮತ್ತು ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆ ಹೌಸಿಂಗ್ ಕಾಲನಿ ಹೊಸಕರಿಯದಲ್ಲಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಘಟಕದ ಕಾರ್ಯಕಾರಿಣಿ ಸದಸ್ಯ ಫಝಲ್ ಅಸೈಗೋಳಿ ತಿಳಿಸಿದರು.
ತೊಕ್ಕೊಟ್ಟುವಿನ ಉಳ್ಳಾಲ ಪ್ರೆಸ್ ಕ್ಲಬ್ ನಲ್ಲಿ ಇಂದು ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳಿಗ್ಗೆ 10ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಯು.ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಿ.ಎಂ ಫಾರೂಕ್, ಐವನ್ ಡಿಸೋಜ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಕೆಪಿಸಿಸಿ ಪ್ರ.ಕಾ ಇನಾಂiÀiತ್ ಆಲಿ, ಮಂಗಳೂರು ಪೊಲೀಸ್ ಕಮೀಷನರ್ ಯನ್ ಶಶಿಕುಮಾರ್ ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜಾತಿ, ಮತ, ಧರ್ಮ ಬೇಧ ಎಲ್ಲವನ್ನೂ ಬಿಟ್ಟು ರಕ್ತದಾನದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಅಲ್ಪಸಂಖ್ಯಾತ ಘಟಕವೂ ಸಂಪೂರ್ಣ ಬೆಂಬಲವನ್ನು ನೀಡಿದ್ದು, ಉಳ್ಳಾಲದ ಹಲವು ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘಟನೆಗಳು ಜತೆಗಿದ್ದುಕೊಂಡು ಕಾರ್ಯಕ್ರಮ ನಡೆಯಲಿದೆ. ಫಾದರ್ ಮುಲ್ಲರ್ಸ್ ಆಸ್ಪತ್ರೆ ಕಂಕನಾಡಿ, ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಶಿಬಿರದಲ್ಲಿ ಕೈಜೋಡಿಸಿದೆ ಎಂದರು.
ಹೊಸಕರಿಯ ಯೂತ್ ಫೌಂಡೇಷನ್ ಅಧ್ಯಕ್ಷ ಸಾದಿಕ್ ಉಳ್ಳಾಲ್ ಮಾತನಾಡಿ, 2018, ಸೆ.25ರಂದು ಇಂದಿನ ದಾನ ನಾಳಿನ ವರದಾನ ಧ್ಯೇಯವಾಕ್ಯದೊಂದಿಗೆ ಫೌಂಡೇಷನ್ ಸ್ಥಾಪನೆಯಾಗಿದೆ. 2020ರಲ್ಲಿ ನೋಂದಣಿಗೊಂಡು 24 ಸದಸ್ಯರಿದ್ದ ಸಂಘಟನೆ ಇಂದು 160 ಸದಸ್ಯರನ್ನು ಒಳಗೊಂಡಿದೆ. ವಸತಿ ನಿರ್ಮಾಣಕ್ಕೆ ಸಹಾಯ, ನಿರ್ಗತಿಕರಿಗೆ ಆಸ್ಪತ್ರೆಯಲಿ ಸಹಾಯ, ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಆಂಬ್ಯುಲೆನ್ಸ್ ಶುಲ್ಕ ಪಾವತಿ, ಬಡ ಹೆಣ್ಮಕ್ಕಳ ಮದುವೆ ಖರ್ಚು, ಮೊದಲಾದ ಸಮಾಜಮುಖಿ ಕಾರ್ಯಗಳಲ್ಲಿ ಸಂಘಟನೆ ತೊಡಗಿಸಿಕೊಂಡಿದೆ.
ಸುದ್ಧಿಗೋಷ್ಠಿಯಲ್ಲಿ ಉಳ್ಳಾಲ ನಗರಸಭೆ ಸದಸ್ಯ ಅಬ್ದುಲ್ ಜಬ್ಬಾರ್, ಇಸ್ಲಾಹಿ ಎಜ್ಯುಕೇಷನ್ ಟ್ರಸ್ಟ್ ಅಧ್ಯಕ್ಷ ಜಿ.ಅಬ್ದುಲ್ ರಝಾಕ್, ಅಶ್ರಫ್ ಕೂಲಿಂಕ್ ಉಪಸ್ಥಿತರಿದ್ದರು.


