UN NEWS NETWORKS
ಉಳ್ಳಾಲ: ಅಸ್ಪೃಷ್ಯತೆ ದೇವ ನಿರ್ಮಿತ ಪದ್ದತಿಯಲ್ಲ, ವ್ಯವಹಾರಕ್ಕಾಗಿ ಸೃಷ್ಟಿಸಿದ ಹೊಸ ರೂಪ. ಮೂಲ ಜನಾಂಗದ ಋಣದಲ್ಲಿ ನಾವಿದ್ದು ಪೂರ್ಣಕುಂಭದೊಂದಿಗೆ ಸ್ವಾಗತಿಸುವ ದಿನಗಳು ಶೀಘ್ರ ಬರಲಿದೆ ಎಂದು ಚಿತ್ರ ನಿರ್ಮಾಪಕ ತಮ್ಮಣ್ಣ ಶೆಟ್ಟಿ ಅಭಿಪ್ರಾಯಪಟ್ಟರು.

ಉಳ್ಳಾಲ ಕಾಪಿಕಾಡು ಗಾಂಧಿನಗರದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಶಿಲಾಮಯ ಶ್ರೀ ಬಬ್ಬುಸ್ವಾಮಿ ದೈವಸ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ತುಳುನಾಡಿನಲ್ಲಿ ಬೇರೆ ಬೇರೆ ಕಥೆಗಳು ಸೃಷ್ಟಿಯಾಗಿದ್ದರೂ ಭೂಲೋಕದಲ್ಲಿ ನಾಗರಿಕತೆ ಸೃಷ್ಟಿಯಾದಾಗ ತುಳುನಾಡಿನ ಮೂಲಜನಾಂಗ ಜೀವನ, ಸಂಸ್ಕೃತಿ ಜನನ-ಮರಣಗಳ ಸಂವಿದಾನ ಬರೆದಿದ್ದಾರೆ. ಗ್ರಾಮ ದೇವರ ಅನುಮತಿಯಿಲ್ಲದೆ ಎಲ್ಲೋ ಇರುವ ದೈವ, ದೇವರನ್ನು ಹುಡುಕುವುದರಿಂದ ಯಾ ಯಾವುದೇ ಪ್ರಯೋಜನವಿಲ್ಲ. ಬಬ್ಬುಸ್ವಾಮಿಗೆ ಚಿನ್ನ, ಬೆಳ್ಳಿಗಿಂತ ಮನೆಯಲ್ಲೇ ಆಗುವ ಸಿಯಾಳದಂಥ ವಸ್ತುಗಳು ಇಷ್ಟ ಎಂದು ತಿಳಿಸಿದರು.
ಮನೆಯಲ್ಲೇ ಇರುವ ವಸ್ತುಗಳು ಬಳಸಿ ದೈವಾರಾಧನೆ ನಡೆಸಬೇಕಿರುವುದರಿಂದ ದೈವಾರಾಧನೆ ತುಂಬಾ ಸರಳ. ದೈವ- ದೇವಸ್ಥಾನ ನಿರ್ಮಿಸಿ ಬಣ್ಣ ಉಳಿಯುವುದು, ಚಪ್ಪರ ಹಾಕಿ ಸುಂದರಗೊಳಿಸುವುದಕ್ಕೆ ಮಾತ್ರ ಸೀಮಿತ ಆಗಬಾರದು. ದೈವ-ದೇವರುಗಳ ವಿಚಾರ, ಧಾರ್ಮಿಕ ಕಟ್ಟುಪಾಡುಗಳು ಕೇವಲ ಇಂದಿನ ತಲೆಮಾರಿಗೆ ಸೀಮಿತಗೊಳಿಸದೆ ಮುಂದಿನ ಜನಾಂಗಕ್ಕೂ ಅರಿವು ಮೂಡಿಸುವ ಕೆಲಸ ನಡೆಯಬೇಕು ಎಂದರು.
ಮಂಗಳೂರು ಕ್ಷೇತ್ರ ಶಾಸಕ ಯು.ಟಿ ಖಾದರ್, ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಶ್ರೀ ಉಮಾಮಹೇಶ್ವರಿ ದೇವಸ್ಥಾನದ ಅಧ್ಯಕ್ಷ ಎ.ಜೆ.ಶೇಖರ್, ಉಳ್ಳಾಲ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ್, ಕಚ್ಚೂರು ಶ್ರೀ ಕ್ಷೇತ್ರ ಅಧ್ಯಕ್ಷ ಶಿವಪ್ಪ ನಂತೂರು, ಸಿವಿಲ್ ಇಂಜಿನಿಯರ್ ರಾಜೇಶ್ ಕಣ್ಣೂರು, ಉದ್ಯಮಿ ನವೀನ್ ಕುಂದರ್, ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಅಧ್ಯಕ್ಷ ವಿಠಲ ಶ್ರಿಯಾನ್, ಚಾರ್ಟೆಡ್ ಎಕೌಂಟೆಂಟ್ ಸುರೇಶ್, ಉದ್ಯಮಿ ರವೀಂದ್ರ ಶೆಟ್ಟಿ, ಬಬ್ಬುಸ್ವಾಮಿ ದೈವಸ್ಥಾನದ ನಿಕಟಪೂರ್ವ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಉಳ್ಳಾಲ ನಗರಸಭೆಯ ಸದಸ್ಯ ಬಾಝಿಲ್ ಡಿಸೋಜ, ಮಾಜಿ ಅಧ್ಯಕ್ಷೆ ಗಿರಿಜಾ ಬಾಯಿ, ಮಾಜಿ ಸದಸ್ಯ ದಿನೇಶ್ ರೈ, ಉದ್ಯಮಿ ಪ್ರಕಾಶ್, ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಅಧ್ಯಕ್ಷ ಚಂದ್ರಹಾಸ ಕುತ್ತಾರ್, ವಿವೇಕಾನಂದ ಶೆಣೈ, ಸತೀಶ್, ಹರಿಶ್ಚಂದ್ರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚೆನ್ನಕೇಶವ, ಅಣ್ಣಯ್ಯ ಗುರಿಕಾರ, ಕಾರ್ಪೊರೇಟರ್ ಅನಿಲ್, ದಮಯಂತಿ ಕಾಪಿಕಾಡ್, ಸಬ್ ರಿಜಿಸ್ಟ್ರರ್ ಸಂತೋಷ್, ಅಣ್ಣಯ್ಯ, ಟಿ.ಹೊನ್ನಯ್ಯ ಗುರಿಕಾರ ಮೊದಲಾದವರು ಉಪಸ್ಥಿತರಿದ್ದರು.
ಸಂದೀಪ್ ಉಳ್ಳಾಲ್ ಸ್ವಾಗತಿಸಿದರು. ಕೆ.ಕೆ.ಪೇಜಾವರ ಕಾರ್ಯಕ್ರಮ ನಿರೂಪಿಸಿದರು.


