UN networks
ಕೊಣಾಜೆ : ಸಿದ್ಧರಾಮಯ್ಯ ಉಳ್ಳಾಲದಲ್ಲಿ ನಿಂತರೂ ಅವರನ್ನು ಸೋಲಿಸುವ ಎಲ್ಲಾ ರಣತಂತ್ರಗಾರಿಕೆ ಮಂಗಳೂರು ಕ್ಷೇತ್ರದ ಬಿಜೆಪಿ ನಡೆಸುತ್ತದೆ ಎಂದು ದಿ ಮೈಸೂರ್ ಇಲೆಕ್ಟಿçಕಲ್ಸ್ ನಿಗಮದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ.
ನಡುಪದವು ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ
ಸದ್ಯ ಸಿದ್ಧರಾಮಯ್ಯನವರಿಗೆ ಎಲ್ಲಿಯೂ ನೆಲೆಯಿಲ್ಲ, ಉಳ್ಳಾಲದಲ್ಲಿ ನಿಲ್ಲಿಸುವುದಿದ್ದರೆ ಬಿಜೆಪಿಗೆ ಅವರು ಎದುರಾಳಿಯಲ್ಲ. ಅವರನ್ನು ಸೋಲಿಸುವುದು ಶತಸಿದ್ದ. ಪಿಎಫ್ ಐ ಬ್ಯಾನ್ ನಡೆದ ನಂತರ ಎಸ್ ಡಿಪಿಐ ಗ್ರಾಮಾಂತರ ಭಾಗದಲ್ಲಿ ಶಕ್ತಿಯುತವಾಗಿದೆ. ಕಾಂಗ್ರೆಸ್ ಜತೆಗೆ ಪೈಪೋಟಿಯಿಲ್ಲ, ಮಂಗಳೂರು ಕ್ಷೇತ್ರದಲ್ಲಿ ಎಸ್ ಡಿಪಿಐ ಜತೆಗೆ ನೇರ ಪೈಪೋಟಿ ನಡೆಯಲಿದೆ. ಯಾರೇ ಅಭ್ಯರ್ಥಿಯಾದರೂ ಅವರನ್ನು ಗೆಲ್ಲಿಸುವ ಕೆಲಸ ಸಮಸ್ತ ಬಿಜೆಪಿ ಕರ‍್ಯಕರ್ತರಿಂದ ಆಗಲಿದೆ. ಕಸ್ತೂರಿ ಪಂಜ ಹಿರಿಯ ನಾಯಕಿ ಅವರು ನಿಂತರೂ ನಾವೇ ಖರ್ಚು ಮಾಡಿ ಗೆಲ್ಲಿಸುತ್ತೇವೆ.
ಸುದ್ಧಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಕರ‍್ಯದರ್ಶಿ ಸತೀಶ್ ಕುಂಪಲ, ಬಿಜೆಪಿ ಮಂಡಲ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಕ್ಷೇತ್ರ ಪ್ರ.ಕರ‍್ಯದರ್ಶಿಗಳಾದ ನವೀನ್ ಪಾದಲ್ಪಾಡಿ, ಹೇಮಂತ್ ಶೆಟ್ಟಿ ದೇರಳಕಟ್ಟೆ ಇದ್ದರು.




