UN networks
ಉಳ್ಳಾಲ: ತೊಕ್ಕೊಟ್ಟು ಹಾಗೂ ಉಳ್ಳಾಲ ಹಿಂದೂ ರುದ್ರ ಭೂಮಿಯ ಸಿಲಿಕಾನ್ ಕಳವುಗೈದಿರುವ ಘಟನೆ ನಡೆದಿದ್ದು, ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ.17 ರ ಮಧ್ಯರಾತ್ರಿ ಉಳ್ಳಾಲ ಹಿಂದೂ ರುದ್ರಭೂಮಿಯ 13 ಸಿಲಿಕಾನ್ ಹಾಗೂ ಅದರ ಮರುದಿನ ನ.18 ರ ರಾತ್ರಿ ಚೆಂಬುಗುಡ್ಡೆ ಹಿಂದೂ ರುದ್ರಭೂಮಿಯ 9 ಸಿಲಿಕಾನ್ ಅನ್ನು ಕಳ್ಳರು ಕಳವು ನಡೆಸಿದ್ದಾರೆ. ಒಂದು ಸಿಲಿಕಾನ್ ಗೆ ತಲಾ ರೂ.9,000 ಮೌಲ್ಯ ಇದ್ದು, ಲಕ್ಷಕ್ಕೂ ಅಧಿಕ ಬೆಲೆಯ ಸಿಲಿಲಾನ್ ಕಳವು ನಡೆಸಲಾಗಿದೆ.
ಸಿಲಿಕಾನ್ ಅಂದರೆ: ಹೆಣ ಸುಡುವಾಗ ಅನುಕೂಲವಾಗುವಂತೆ ಕಟ್ಟಿಗೆಗಳ ಕೆಳಗಡೆ ಇರುವಂತಹ ಸಿಲಿಕಾನ್ ಪ್ಲೇಟ್. ತಾಪಮಾನ ಉಳಿಸುವ ಸಲುವಾಗಿ ಪ್ಲೇಟ್ ಇಡಲಾಗುತ್ತದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


