UN NEWS NETWORKS
ಉಳ್ಳಾಲ: ಬ್ಯಾರಿಗಳು ಶ್ರಮಜೀವಿಗಳಾಗಿದ್ದು, ಸ್ವಾಭಿಮಾನದಿಂದ ಬಹುತ್ವವನ್ನು ಗೌರವಿಸಿ ಬದುಕುತ್ತಾರೆಯೇ ವಿನಃ, ಜೀತದಾಳುಗಳಾಗಿ ಬದುಕುವುದಿಲ್ಲ ಎಂದು ಕಣಚೂರು ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಹಾಜಿ ಯು.ಕೆ. ಮೋನು ಕಣಚೂರು ಹೇಳಿದರು.


ಮಂಗಳೂರಿನ ದೇರಳಕಟ್ಟೆಯ ಕಣಚೂರು ಕ್ಯಾಂಪಸ್‌ನಲ್ಲಿ ‘ಮೇಲ್ತೆನೆ’ (ಬ್ಯಾರಿ ಬರಹಗಾರು ಮತ್ತು ಕಲಾವಿದರ ಒಕ್ಕೂಟ) ಶನಿವಾರ ಹಮ್ಮಿಕೊಂಡಿದ್ದ ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. ೨೫ರಷ್ಟಿರುವ ಬ್ಯಾರಿಗಳು ಈ ನೆಲದ ಅಭಿವೃದ್ಧಿ ಮತ್ತು ಸಹಬಾಳ್ವೆಗಾಗಿ ನೀಡಿರುವ ಕೊಡುಗೆ ಅಪಾರ. ತಮ್ಮದೇ ಆದ ಹಿಂದುಳಿವಿಕೆಯಿAದ ಶಿಕ್ಷಣ ವಂಚಿತರಾಗಿದ್ದ ಬ್ಯಾರಿ ಸಮುದಾಯ ಇಂದು ಎಚ್ಚೆತ್ತುಕೊಂಡು ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿರುವುದು ಅವರ ದಕ್ಷತೆಗೆ ಸಾಕ್ಷಿ” ಎಂದು ಕಣಚೂರು ಮೋನು ಉಲ್ಲೇಖಿಸಿದರು.
ಸಮ್ಮೇಳನಾಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್ ಮಾತನಾಡಿ ಮೂರು ದಶಕಗಳ ಹಿಂದೆ ಬ್ಯಾರಿ ಒಂದು ಅಳಿಯುತ್ತಿರುವ ಭಾಷೆ ಎಂದು ಪರಿಗಣಿಸುವ ಹಂತ ತಲುಪಿತ್ತು. ಆಗ ಎಚ್ಚೆತ್ತ ಬ್ಯಾರಿ ಸಮುದಾಯದ ನೇತಾರರು, ಸಾಹಿತಿಗಳು, ಕಲಾವಿದರು ರಾಜ್ಯಾದ್ಯಂತ ವಿವಿಧ ಸಂಘಟನೆಗಳನ್ನು ಕಟ್ಟಿಕೊಂಡು ಬ್ಯಾರಿ ಆಂದೋಲನವನ್ನು ಪ್ರಾರಂಭಿಸಿದರು. ಅನೇಕ ಸಮ್ಮೇಳನಗಳು ನಡೆದವು. ಹಳ್ಳಿ ಹಳ್ಳಿಗಳಲ್ಲಿ ಬ್ಯಾರಿ ಕವಿಗೋಷ್ಠಿ ಮೊಳಗಿದವು. ನೂರಾರು ಬ್ಯಾರಿ ಕೃತಿಗಳು ಪ್ರಕಟಗೊಂಡವು ಬ್ಯಾರಿ ಪತ್ರಿಕೆಯೂ ಪ್ರಾರಂಭವಾಯಿತು. ಇದನ್ನು ಗುರುತಿಸಿದ ಕರ್ನಾಟಕ ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನೂ ಸ್ಥಾಪಿಸಿತು. ಇಂದು ಬ್ಯಾರಿ ಭಾಷೆ ಅಽಕೃತವಾದ ಗೌರವಕ್ಕೆ ಪಾತ್ರವಾಗಿದೆ. ಈ ಆಂದೋಲನ ನಿಲ್ಲಬಾರದು, ಸದಾ ಮುಂದುವರಿಯಬೇಕು’ ಎಂದು ಆಶಿಸಿದರು.
ಪದ್ಮಶ್ರೀ ಹರೇಕಳ ಹಾಜಬ್ಬ, ಜೆಡಿಎಸ್ ನಾಯಕ ನಾಟೆಕಲ್ ಅಬೂಬಕರ್, ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಉಳ್ಳಾಲ್, ದೇರಳಕಟ್ಟೆ ಬದ್ರಿಯಾ ಮಸೀದಿಯ ಅಧ್ಯಕ್ಷ ಅಬೂಬಕರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಅಝೀಝ್ ಮಲಾರ್, ಕೆಪಿಸಿಸಿ ಕೋ-ಆರ್ಡಿನೇಟರ್ ಫಾರೂಕ್ ಉಳ್ಳಾಲ್, ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯೆ ಆಯಿಶಾ ಡಿ. ಅಬ್ಬಾಸ್, ಉದ್ಯಮಿ ಡಾ| ಕೆ.ಎಂ.ಮುನೀರ್ ಬಾವಾ, ಕಣಚೂರು ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಬಿ.ಎಂ., ಕುನಿಲ್ ಪಬ್ಲಿಕ್ ಸ್ಕೂಲ್ ಉಪಾಧ್ಯಕ್ಷ ಪಿ.ಎಸ್. ಮೊಯ್ದಿನ್ ಕುಂಞÂ, ಪಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಇನೋಳಿ, ಯೂಸುಫ್ ವಖ್ತಾರ್, ಡಿ.ಐ. ಅಬೂಬಕರ್ ಕೈರಂಗಳ, ಯೂಸುಫ್ ಬಾವಾ ಬೆಲ್ಮ ಹಾಗೂ ಅಬೂಸಾಲಿಹ್, ಸಿದ್ಧಿಕ್ ತಲಪಾಡಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ಸಮ್ಮೇಳನಾಧ್ಯಕ್ಷರನ್ನು ದಪ್ಪುಬ್ಯಾರಿ ಕಲಾತಂಡದ ಮೆರವಣಿಗೆಯಲ್ಲಿ ಸಭಾಂಗಣಕ್ಕೆ ಕರೆತರಲಾಯಿತು. ಅಶೀರುದ್ದೀನ್ ಆಲಿಯಾ ಸಾರ್ತಬೈಲ್ ಸಂಪಾದಕತ್ವದ ‘ಮೇಲ್ತೆನೆ ಬುಲೆಟಿನ್’ ಅನ್ನು ಸಮ್ಮೇಳನ ಸ್ವಾಗತ ಸಮಿತಿಯ ಉಪಾಧ್ಯಕ್ಷ ಅಬ್ಬಾಸ್ ಉಚ್ಚಿಲ್ ಬಿಡುಗಡೆಗೊಳಿಸಿದರು.
ಸ್ವಾಗತ ಸಮಿತಿ ಅಧಯಕ್ಷ ನಝೀರ್ ಉಳ್ಳಾಲ್ ಸ್ವಾಗತಿಸಿದರು. ಹಂಝ ಮಲಾರ್ ಮತ್ತು ಮಂಗಳೂರು ರಿಯಾಝ್ ಕಾರ್ಯಕ್ರಮ ನಿರ್ವಹಿಸಿದರು. ನಾಸಿರ್ ಸಾಮನಿಗೆ ವಂದಿಸಿದರು.


