UN networks
ಪಾವೂರು: ಪಾವೂರು ಗ್ರಾಮಕ್ಕೆ ಸರಕಾರಿ ಬಸ್ , ಗ್ರಾಮದ ಹಲವೆಡೆ ತೆಂಗಿನ ಮರಗಳಿಗೆ ಬಾಧಿಸಿರುವ ಸೋಂಕು ವಿಚಾರವಾಗಿ ತಹಶೀಲ್ದಾರರ ಗಮನ ಸೆಳೆದ ಪಾವೂರು ಗ್ರಾಮಸ್ಥರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ತಕ್ಷಣ ಕ್ರಮಕ್ಕೆ ಆಗ್ರಹಿಸಿದರು.
ಪಾವೂರು ಗ್ರಾಮಪಂಚಾಯತಿಯ ಸಭಾಭವನದಲ್ಲಿ ಇಂದು ವಿವಿಧ ಇಲಾಖೆಯ ಅಧಿಕಾರಿಗಳ ಜೊತೆ ಸೋಮವಾರ ನಡೆದ ಉಳ್ಳಾಲ ತಾಲೂಕು ತಹಶಿಲ್ದಾರರ ಗ್ರಾಮವಾಸ್ತವ್ಯದಲ್ಲಿ ಪ್ರತಿಕ್ರಿಯಿಸಿದರು.



ಪಾವೂರು ಗ್ರಾಮಕ್ಕೆ ಸರಕಾರಿ ಬಸ್ಸು ಬೇಕೆಂಬ ಮನವಿಯನ್ನು ಗ್ರಾಮಸ್ಥರಾದ ಅಬ್ದುಲ್ ಬಶೀರ್ ಒತ್ತಾಯಿಸಿದರು. ಪಾವೂರು ಗ್ರಾಮಕ್ಕೆ ಸರಕಾರಿ ಬಸ್ಸಿಗಾಗಿ ಕಳೆದ ಹತ್ತು ವರ್ಷಗಳಿಂದ ಮನವಿಯನ್ನು ಸಂಬಂಧಪಟ್ಟ ಪಂಚಾಯಿತಿ ಹಾಗೂ ಆರ್ ಟಿ ಓ ಗೆ ನೀಡುತ್ತಲೇ ಇದ್ದೇವೆ .ಆದರೆ ಇದುವರೆಗೆ ಇದಕ್ಕೆ ಯಾವುದೇ ರೀತಿಯಾದ ಪ್ರತಿಕ್ರಿಯೆ ಸಿಕ್ಕಿಲ್ಲ. ಪ್ರತಿ ಸಲ ಮನವಿಯನ್ನು ಕೊಟ್ಟಾಗ ಬಸ್ಸು ಬರುತ್ತದೆ ಎಂಬ ಭರವಸೆಯನ್ನು ಮಾತ್ರ ನೀಡುತ್ತಿದ್ದಾರೆ, ಹೊರತು ಇದುವರೆಗೂ ಬಸ್ಸಿನ ಭಾಗ್ಯ ಗ್ರಾಮಸ್ಥರಿಗೆ ಸಿಕ್ಕಿಲ್ಲ. ಸಭೆಯಲ್ಲಿ ಉಪಸ್ಥಿತರಿರಬೇಕಿದ್ದ ಅರ್ ಟಿ ಓ ಅಧಿಕಾರಿಗಳು ಗೈರುಹಾಜರಾಗಿದ್ದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರಿಗೆ ಪ್ರತಿಕ್ರಿಯಿಸಿದ ತಹಶಿಲ್ದಾರರು ಈ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಮನವಿಯನ್ನು ಇನ್ನೊಮ್ಮೆ ಕೊಡಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು ಎಂಬ ಭರವಸೆಯನ್ನು ನೀಡಿದರು.
ತೆಂಗಿನಮರಗಳ ಬುಡದಲ್ಲಿ ಹುಳಗಳು ಉತ್ಪತ್ತಿಯಾಗುವ ಮೂಲಕ ಮರಗಳು ತುಂಡಾಗಿ ಬೀಳುತ್ತಿದೆ. ಇದರಿಂದ ಕಳವಳಗೊಂಡಿದ್ದು ಇದ್ದು ಒಂದು ಮರದಿಂದ ಇನ್ನೊಂದು ಮರಕ್ಕೆ ಹರಡುತ್ತಿದೆ. ಇದರಿಂದ ಈಗಾಗಲೇ ಮೂರು ಮರಗಳನ್ನು ಕಳೆದುಕೊಂಡಿದ್ದೇನೆ. ಇದೊಂದು ವಿಚಿತ್ರ ವಾದ ಕಾಯಿಲೆಯಾಗಿದ್ದು ಈ ರೀತಿಯಾದ ರೋಗವನ್ನು ಇದೇ ಮೊದಲು ನೋಡುತ್ತಿರುವುದು ಗ್ರಾಮಸ್ಥರೊಬ್ಬರ ಪ್ರಶ್ನೆಗೆ ಉತ್ತರಿಸಿದ ಕೃಷಿ ಅಧಿಕಾರಿ ಇದು ಬುಡಕ್ಕೆ ಬರುವ ಕೆಂಪು ಮೂತಿ ಹೆಸರಿನ ರೋಗವಾಗಿದ್ದು ಸರ್ವೇ ಸಾಮಾನ್ಯವಾಗಿದೆ. ಬುಡವನ್ನು ಅಗೆದು ಕ್ಲೋರೋ ಪೈರಿಪಾಸ್ ಔಷಧಿಯನ್ನು ಸಿಂಪಡಿಸುವ ಮೂಲಕ ರೋಗವನ್ನು ತಡೆಗಟ್ಟಬಹುದು ಎಂದು ಹೇಳಿದರು.
ವಿವಿಧ ವೇತನದ ಮಂಜೂರಾತಿ ಆದೇಶದ ಪ್ರತಿಯನ್ನು ಫಲಾನುಭವಿಗಳಿಗೆ ವಿತರಿಸಲಾಯಿತು. ತಹಶೀಲ್ದಾರರು ಕಂಬ್ಲಪದವು ಎಂಬಲ್ಲಿ ಡಿ ಸಿ ಮನ್ನಾ ಜಮೀನು ಅಳತೆ ಮಾಡಲು ಭೂ ಮಾಪಕರಿಗೆ ಸೂಚಿಸಿದರು. ಇನೋಳಿ ಕಂಬ್ಲಪದವು ಎಂಬಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಅಕ್ಷರ ನಗರದಲ್ಲಿ ಮನೆ ನಿವೇಶನಕ್ಕೆ ಕಾದಿರಿಸಿದ ಜಮೀನಿನ ಸ್ಥಳ ತನಿಖೆ ನಡೆಸಿದರು. ಹರೇಕಳದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಣೆಕಟ್ಟುವಿನಿಂದಾಗಿ ನೀರಿನ ಮಟ್ಟ ಏರಿಕೆಯಾಗಿ ಇಲ್ಲಿನ ಮನೆ ಹಾಗೂ ಕೃಷಿಗಳು ಹಾನಿಯಾಗುವ ಸ್ಥಿತಿ ಉಂಟಾಗಿದೆ ಎಂದು ಪಾವೂರು ಉಳಿಯ ನಿವಾಸಿಗಳು ದೂರು ನೀಡಿದ್ದು ಈ ಬಗ್ಗೆ ತಹಶೀಲ್ದಾರರು ಸ್ಥಳ ಪರಿಶೀಲನೆ ನಡೆಸಿದರು. ಹಾಗೂ ವಿವಿಧ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಬಂದ ಮನವಿಯನ್ನು ಸ್ವೀಕರಿಸಿ ಸ್ಥಳದಲ್ಲಿ ಪರಿಹಾರವನ್ನು ಸೂಚಿಸಿದರು. ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸಂಬಂದಿಸಿದಂತೆ ತೋಟಗಾರಿಕೆ ಇಲಾಖೆ 2, ಸಣ್ಣ ನೀರಾವರಿ ಇಲಾಖೆ 1, ಪಂಚಾಯತ್ ರಾಜ್ ಇಲಾಖೆ 2, ಮೋಜಣಿ ಇಲಾಖೆ 3 ಹಾಗೂ ಕಂದಾಯ ಇಲಾಖೆ 13, ಒಟ್ಟು 21 ಅರ್ಜಿಗಳು ಸ್ವೀಕೃತವಾಗಿರುತ್ತದೆ. ಅದರಲ್ಲಿ 13 ಅರ್ಜಿಗಳು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಕಮರುನ್ನೀಸ, ಉಪಾಧ್ಯಕ್ಷ ಅನ್ಸಾರ್, ಕಂದಾಯ ನಿರೀಕ್ಷಕರಾದ ಮಂಜುನಾಥ ಕೆ ಹೆಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಆರೋಗ್ಯ ಇಲಾಖೆಯಿಂದ ಬೋಳಿಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನೀತಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂಗನವಾಡಿ ಮೇಲ್ವಿಚಾರಕಿ ಶಾಲಿನಿ, ಅರಣ್ಯ ಇಲಾಖೆ ವತಿಯಿಂದ ಉಪವಲಯ ಅರಣ್ಯಾಧಿಕಾರಿ ಮಹಾಬಲ, ಕೃಷಿ ಇಲಾಖೆ ವತಿಯಿಂದ ಸಹಾಯಕ ಕೃಷಿ ಅಧಿಕಾರಿಯವರಾದ ಮುರಳೀಧರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ತಮ್ಮ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕರಾದ ಕಿರಣ್ ಕುಮಾರ್, ಆಹಾರ ನಿರೀಕ್ಷಕ ಕೆ ಪ್ರಮೋದ್ ಕುಮಾರ್, ಗ್ರಾಮಕರಣಿಕರಾದ ನಯನ, ರೇಷ್ಮಾ, ಸಂತೋಷ್ ರವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹಮ್ಮದ್ ಇಸ್ಮಾಯಿಲ್ ಸ್ವಾಗತಿಸಿದರು.
ಗ್ರಾಮಕರಣಿಕರಾದ ನವ್ಯ ಎಸ್ ಎನ್ ರಾವ್ ರವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


