ಉಳ್ಳಾಲ: ಅಭಿವೃದ್ಧಿಯೇ ಬಿಜೆಪಿಯ ಮಂತ್ರಮೂಲ. ಮಂಗಳೂರು ಕ್ಷೇತ್ರದ ಉದ್ದಗಲಕ್ಕೂ ಪಕ್ಷ ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ನಡೆಸಕೊಂಡು ಬರುತ್ತಿದೆ ಎಂದು ಜಿಲ್ಲಾ ಬಿಜೆಪಿ ಕರ‍್ಯದರ್ಶಿ ಸತೀಶ್ ಕುಂಪಲ ಹೇಳಿದರು.


ಅವರು ಕಾಪಿಕಾಡು ಅಂಬಿಕಾರೋಡಿನಲ್ಲಿರುವ ಗಟ್ಟಿ ಸಮಾಜ ಭವನದ ಎದುರುಗಡೆ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ನಿರ್ಮಾಣವಾದ ಹೈಮಾಸ್ಟ್ ದೀಪವನ್ನು ಉದ್ಘಾಟಿಸಿ ಮಾತನಾಡಿದರು.
ಗಟ್ಟಿ ಸಮಾಜದ ಅಧ್ಯಕ್ಷ ದಯಾನಂದ ಗಟ್ಟಿ ಪಿಲಿಕೂರು ಮಾತನಾಡಿ, ಈ ಭಾಗದಲ್ಲಿ ಹೈಮಾಸ್ಟ್ ದೀಪದ ಅವಶ್ಯಕತೆ ಹೆಚ್ಚಿತ್ತು. ಈ ಕುರಿತು ಸಮಾಜ ಬಾಂಧವರಿAದ ಆಗಾಗ್ಗ ಪ್ರಸ್ತಾಪ ಬರುತಿತ್ತು. ಇದನ್ನು ಕ್ಷೇತ್ರದ ಬಿಜೆಪಿ ಮುಖಂಡರುಗಳಿಗೆ ಮನವರಿಕೆ ಮಾಡಿದಂತೆ, ವಿಧಾನಪರಿಷತ್ ಸದಸ್ಯರ ಅನುದಾನದಿಂದ ಒದಗಿಸಿಕೊಡಲಾಗಿರುವ ಕೃತಜ್ಞತಾಪೂರ್ವ ಎಂದರು.
ಈ ವೇಳೆ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಕಾರ್ಯದರ್ಶಿಗಳಾದ ಸತೀಶ್ ಕುಂಪಲ ಹಾಗೂ ಜಯಶ್ರೀ ಕರ್ಕೇರ, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷಿ÷್ಮ ಗಟ್ಟಿ, ಮಂಡಲ ಕಾರ್ಯದರ್ಶಿಗಳಾದ ನವೀನ್ ಪಾದಲ್ಪಾಡಿ ಹಾಗೂ ಹೇಮಂತ್ ಶೆಟ್ಟಿ, ಗಟ್ಟಿ ಸಮಾಜದ ಕರ‍್ಯದರ್ಶಿ ದಯಾನಂದ ಗಟ್ಟಿ ಪಿಲಾರ್ , ಜತೆ ಕರ‍್ಯದರ್ಶಿ ಪದ್ಮನಾಭ ಗಟ್ಟಿ ಬಜಿಲಕೇರಿ, ಜಯರಾಮ ಗಟ್ಟಿ, ಗುರಿಕಾರ ಕೃಷ್ಣಪ್ಪ ಗಟ್ಟಿ , ಬಿಜೆಪಿ ಮಂಡಲ ಉಪಾಧ್ಯಕ್ಷ ಯಶವಂತ ಅಮೀನ್, ರವಿಶಂಕರ್ ಸೋಮೇಶ್ವರ, ಉಳ್ಳಾಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಆನಂದ್ ಶೆಟ್ಟಿ, ಮಂಜನಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಮುನ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಗಾಯತ್ರಿ ಕಿಶೋರ್, ಕೊಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಶೆಟ್ಟಿ ಕುರ್ನಾಡ್, ಇರಾ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ದೇರಾಜೆ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ, ಕೋಟೆಕಾರ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಜಿತ್ ಮಾಡೂರು, ಹಿರಿಯರು ಹಾಗೂ ವಿವಿಧ ನಾಯಕರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.


