UN NEWS NETWORKS
ಉಳ್ಳಾಲ: ಶಿಲನ್ಯಾಸ ನಡೆಸಿದರೂ ರಸ್ತೆ ಹಾಗೂ ಕಟ್ಟಡವನ್ನು ನಿರ್ಮಿಸದ ಪಕ್ಷ ಬಿಜೆಪಿಯಲ್ಲ, ಉದ್ಘಾಟನೆಗೊಳಿಸುವ ಕಾಮಗಾರಿಗಳಿಗೆ ಮಾತ್ರ ಬಿಜೆಪಿ ಕೈ ಹಾಕುತ್ತದೆ. ಅದರಂತೆ ಸಾರ್ವಜನಿಕರಿಗೆ ಅನುಕೂಲವಾಗುವ ಉದ್ದೇಶದಿಂದ ಹೈಮಾಸ್ಟ್ ದೀಪವನ್ನು ನಿರ್ಮಿಸಲಾಗಿದೆ ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದ್ದಾರೆ.


ಅವರು ಬೀರಿ ಜಂಕ್ಷನ್ ನಲ್ಲಿ ನಿರ್ಮಿಸಲಾದ ಹೈಮಾಸ್ಟ್ ದೀಪವನ್ನು ಲೋಕಾರ್ಪಣಗೊಳಿಸಿ ಮಾತನಾಡಿದರು.
ಬಜರಂಗದಳ-ವಿ.ಹಿA.ಪದ ಉಳ್ಳಾಲ ಪ್ರಖಂಡದ ಜವಾಬ್ದಾರಿ ವಹಿಸಿಕೊಂಡ ಅರ್ಜುನ್ ಮಾಡೂರು ಅವರು ದೂರವಾಣಿ ಕರೆ ಮಾಡಿದ ೨೪ ಗಂಟೆಯೊಳಗೆ ಸ್ಪಂಧಿಸಲಾಗಿದೆ. ಕತ್ತಲೆಯಲ್ಲಿದ್ದ ಜಂಕ್ಷನ್ ಗೆ ಹೈಮಾಸ್ಟ್ ದೀಪವನ್ನು ಅಳವಡಿಸಿ ಬೆಳಕಾಗಿಸಲಾಗಿದೆ. ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಹಾಗೂ ಸಮಾಜ ಕಲ್ಯಾಣ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಕ್ಷೇತ್ರ ವ್ಯಾಪ್ತಿಗೆ ರೂ.೩೦ ಕೋಟಿಗೂ ಅಧಿಕ ಅನುದಾನವನ್ನು ಒದಗಿಸಿಕೊಟ್ಟಿದ್ದಾರೆ. ಹಂತಹAತವಾಗಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ ಎಂದರು.
ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ಬೋಳಿಯಾರ್, ಕಾರ್ಯದರ್ಶಿಗಳಾದ ಸತೀಶ್ ಕುಂಪಲ ಹಾಗೂ ಜಯಶ್ರೀ ಕರ್ಕೇರ, ರಾಜ್ಯ ಅಲೆಮಾರಿ ಅರೆ ಅಲೆಮಾರಿ ನಿಗಮದ ನಿಕಟಪೂರ್ವ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಧನಲಕ್ಷ್ಮೀ ಗಟ್ಟಿ, ಮಂಡಲ ಕಾರ್ಯದರ್ಶಿಗಳಾದ ನವೀನ್ ಪಾದಲ್ಪಾಡಿ ಹಾಗೂ ಹೇಮಂತ್ ಶೆಟ್ಟಿ, ಮಂಡಲ ಉಪಾಧ್ಯಕ್ಷ ಯಶವಂತ ಅಮೀನ್, ರವಿಶಂಕರ್ ಸೋಮೇಶ್ವರ, ಉಳ್ಳಾಲ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಆನಂದ್ ಶೆಟ್ಟಿ, ಮಂಜನಾಡಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಮುನ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷೆ ಗಾಯತ್ರಿ ಕಿಶೋರ್, ಕೊಣಾಜೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಶೆಟ್ಟಿ ಕುರ್ನಾಡ್, ಇರಾ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸುರೇಶ್ ದೇರಾಜೆ, ಪುದು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಗಣೇಶ್ ಸುವರ್ಣ, ಕೋಟೆಕಾರ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುಜಿತ್ ಮಾಡೂರು, ಹಿರಿಯರು ಹಾಗೂ ವಿವಿಧ ನಾಯಕರು ಮತ್ತು ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.


