UN NEWS NETWORKS
ಉಳ್ಳಾಲ: ಭಾರತೀಯ ಜನತಾ ಪಾರ್ಟಿ ಮಂಗಳೂರು ಮಂಡಲದ ವತಿಯಿಂದ ಉಳ್ಳಾಲ ನಗರಸಭೆಯಲ್ಲಿನ ಅವ್ಯವಹಾರ, ಕರ್ತವ್ಯಲೋಪ ನಿ ಸೋರಿಕೆ ಹಾಗೂ ಕಾಮಗಾರಿಯಲಿ ತಾರತಮ್ಯ ಧೋರಣೆಯ ವಿಚಾರದಲ್ಲಿ, ತನಿಖೆ ನಡೆಸುವ ಬಗ್ಗೆ ಮುಖ್ಯಾಽಕಾರಿ ವಿದ್ಯಾ ಕಾಳೆ ಯವರಿಗೆ ನಗರಸಭಾ ಬಿಜೆಪಿ ಸದಸ್ಯರು ಮತ್ತು ನಾಮ ನಿರ್ದೇಶಕ ಸದಸ್ಯರಿಂದ ಮನವಿಯನ್ನು ನೀಡಲಾಯಿತು.

ಉಳ್ಳಾಲ ನಗರಸಭೆಯು ಹಗರಣಗಳ ತಾಣವಾಗಿದ್ದು, ಎಲ್ಲಾ ಚಟುವಟಿಕೆಗಳಲ್ಲಿ, ಅವ್ಯವಹಾರ ತುಂಬಿ ಹೋಗಿರುತ್ತದೆ, ಅದರೊಂದಿಗೆ ಸಮರ್ಪಕ ಲೆಕ್ಕ ಪತ್ರ ನಿರ್ವಹಣೆಯಿಲದೇ, ಅಧಿಕಾರಿಗಳ ಕರ್ತವ್ಯಲೋಪದಿಂದ ನಿಧಿ ವ್ಯಾಪಕವಾಗಿ ಸೋರಿಕೆಯಾಗಿದೆ, ಮನೆ ನಂಬ್ರ ಹಾಗೂ ವ್ಯಾಪಾರ ಲೈಸನ್ಸ್ ಕಟ್ಟಡ ಪರವಾನಿಗೆ ನೀಡುವಲ್ಲಿ, ಬಹಳಷ್ಟು ಭ್ರಷ್ಟಚಾರವಾಗಿದ್ದು ನಕಲಿ ರಶೀದಿ ಪುಸ್ತಕಗಳ ಬಳಕೆಯಾಗಿರುವ ಬಗ್ಗೆ ಹಾಗೂ ಹಿಂದಿನ ಪೌರಾಯುಕ್ತರ ಸೀಲು ಹಾಗೂ ಸಹಿಯನ್ನು ಫೋರ್ಜರಿ ಮಾಡಿ ದುರುಪಯೋಗ ಮಾಡಿರುವ ಗುಮಾನಿ ಇದೆ ಎಂದು ಆಡಳಿತ ಪಕ್ಷದ ಸದಸ್ಯರೋರ್ವರು ಆರೋಪ ಮಾಡಿರುತ್ತಾರೆ, ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಬಗ್ಗೆ, ಆಡಳಿತ ಪಕ್ಷದವರು ತಾರತಮ್ಮ ಧೋರಣೆ ಅನುಸರಿಸುತ್ತಿದ್ದು, ಸಾರ್ವಜನಿಕರು ನಗರಸಭೆಯ ಆಡಳಿತದಿಂದ ಬಹಳ ರೋಸಿ ಹೋಗಿದ್ದಾರೆ. ಕಟ್ಟಡ ತೆರಿಗೆ ಆಸ್ತಿ ತೆರಿಗೆ ಸಂಗ್ರಹದಲ್ಲಿ, ಸಂಪೂರ್ಣ ವಿಫಲತೆ ಕಾಣುತ್ತಿದೆ, ಸಮರ್ಪಕ ಕಸ ನಿರ್ವಹಣೆಯಾಗದ ಕಾರಣ ನಾಗರಿಕರು ತೊಂದರೆಗೀಡಾಗಿದ್ದಾರೆ.
ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಪ್ರತಿ ಪಕ್ಷದ ಸದಸ್ಯರು ಕೇಳಿದ ಯಾವುದೇ ಪ್ರಶ್ನೆಗಳಿಗೆ ಸಮಜಾಯಿಷಿಕೆ ಉತ್ತರ ನೀಡುವಲ್ಲಿ, ಅಸಮರ್ಥರಾಗಿರುವದು ಹಾಗೂ ನಿನ್ನೆಯ ದಿನ ಆಡಳಿತ ಪಕ್ಷದ ಸದಸ್ಯರೋರ್ವರು ಕೂಡಾ ಅರೆನಗ್ನ ಸ್ಥಿತಿಯಲ್ಲಿ, ನಗರ ಸಭೆ ಕಛೇರಿಯಲ್ಲಿ ಪ್ರತಿಭಟನೆ ನಡೆಸಿರುದು ಇದಕ್ಕೆ ಪುಷ್ಟಿ ನೀಡುತ್ತದೆ.
ಸಾರ್ವಜನಿಕರು ಇದೀಗ ಪ್ರತಿ ಪಕ್ಷದ ಕಾರ್ಯವೈಖರಿಯನ್ನು ಪ್ರಶ್ನಿಸುವ ಸನ್ನಿವೇಶ ಎದುರಾಗಿದೆ ಈ ಎಲ್ಲಾ ವಿಚಾರಗಳ ಬಗ್ಗೆ ಸೂಕ್ತ ತನಿಖೆಯನ್ನು ಶೀರ್ಘವಾಗಿ ನಡೆಸಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ, ತಪ್ಪಿದಲ್ಲಿ, ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಾಗೂ ನಗರಸಭೆಗೆ ಮುತ್ತಿಗೆ ಹಾಕುವ ಕಾರ್ಯವನ್ನು ಮಾಡುವುದಾಗಿ ಮಂಗಳ ಮಂಡಲ ಬಿ.ಜೆ.ಪಿ ಉಪಾಧ್ಯಕ್ಷ ಯಶವಂತ್ ಅಮೀನ್ ಹೇಳಿದರು
ಉಳ್ಳಾಲ ನಗರ ಸಭೆ ಸದಸ್ಯರಾದ ರೇಶ್ಮಾ,ನಮಿತಾ ಗಟ್ಟಿ, ರಾಜೇಶ್ ಯು.ಬಿ, ಮಮತಾ ರಾಘವ್, ಗೀತಾ ಬಾಯ್, ಭವಾನಿ ಕಾಪಿಕಾಡ್, ನಾಮ ನಿರ್ದೇಶಿತ ಸದಸ್ಯರಾದ ಬಾಬು ಬಂಗೇರ, ಗಣೇಶ್ ಕಾಪಿಕಾಡ್, ಸುರೇಂದ್ರ ಶೆಟ್ಟಿ ಭಗವಾನ್ ದಾಸ್ ಉಪಸ್ಥಿತರಿದ್ದರು.


