UN NEWS NETWORKS

ಉಳ್ಳಾಲ: ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘವು ೨೦೨೧-೨೦೨೨ ನೇ ಸಾಲಿನಲ್ಲಿ ೬೫೦.೫೪ ಕೋಟಿ ರೂ.ಗಳ ವ್ಯವಹಾರವನ್ನು ನಡೆಸಿ ೧.೫೫ ಕೋಟಿ ನಿವ್ವಳ ಲಾಭಾಂಶ ಗಳಿಸಿ ಪ್ರಗತಿ ಪ್ರಥದಲ್ಲಿ ಸಾಗುತ್ತಿದ್ದು ಕಳೆದ ಹಲವು ವರ್ಷಗಳಿಂದ ಷೇರುದಾರರಿಗೆ ಶೇ. ೨೫ ಡಿವಿಡೆಂಡ್ ನೀಡುತ್ತಿರುವ ಅಗ್ರಗಣ್ಯ ಸಹಕಾರ ಸಂಘಗಳಲ್ಲಿ ಒಂದಾಗಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರು ಗುತ್ತು ತಿಳಿಸಿದರು.
ಅವರು ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ಪ್ರಧಾನ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವರದಿ ಸಾಲಿನ ಅಂತ್ಯಕ್ಕೆ ಸಂಘವು “ಎ” ತರಗತಿಯ ೮೨೭೭ ಸದಸ್ಯರನ್ನು ಹೊಂದಿದ್ದು ೨.೩೦ ಕೋಟಿ ರೂಗಳ ಪಾಲು ಬಂಡವಾಳವನ್ನು ಹೊಂದಿದೆ. ಆರ್ಥಿಕ ವರ್ಷದಲ್ಲಿ ರೂ. ೨೮೮.೬೪ ಕೋಟಿ ಠೇವಣಿ ಸಂಗ್ರಹ, ೨೭೨.೨೫ ಕೋಟಿ ಠೇವಣಿ ಪಾವತಿಸಿಸುವ ಮೂಲಕ ವರ್ಷಾಂತ್ಯದಲ್ಲಿ ರೂ ೧೩೭.೦೭ ಕೋಟಿ ಠೇವಣಿ ಹೊಂದಿದ್ದು, ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಠೇವಣಿ ಸಂಗ್ರಹದಲ್ಲಿ ೧೬.೪೦ ಕೋಟಿ ರೂ. ಗಳ ಪ್ರಗತಿಯನ್ನು ಸಾಧಿಸಿದೆ. ವರದಿ ಸಾಲಿನಲ್ಲಿ ೧೫೦.೭೧ ಕೋಟಿ ಸಾಲ ವಿತರಿಸಿದ್ದು, ೧೩೬.೬೯ ಕೋಟಿ ಸಾಲ ವಸೂಲಿಯಾಗುವ ಮೂಲಕ ಶೇ.೯೬% ಪ್ರಗತಿಯನ್ನು ಸಾಧಿಸಿದೆ. ಸಂಘದ ಆಡಿಟ್ ವರ್ಗೀಕರಣದಲ್ಲಿ ನಿರಂತರವಾಗಿ “ಎ” ತರಗತಿಯನ್ನು ಪಡೆದಿದೆ ಎಂದರು.
ಸಂಘವು ೨೦೨೧-೨೦೨೨ ನೇ ಸಾಲಿನಲ್ಲಿ ಸಾಧಿಸಿದ ಅತ್ಯುತ್ತಮ ಸಾಧನೆಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಪ್ರಶಸ್ತಿ ಪಡೆದಿದೆ. ಸಾರ್ವಜನಿಕರಿಗೆ ಅನುಕೂಲದ ದೃಷ್ಟಿಯಿಂದ ಪ್ರಧಾನ ಕಚೇರಿಯಲ್ಲಿ ಇ-ಪೇಪರ್ (ಠಸೆ ಪೇಪರ್) ವ್ಯವಸ್ಥೆ, ಅಡಿಕೆ ಬೆಳೆಗಾರರಿಗೆ ಮೈಲುತುತ್ತು ಸಹಾಯಧನ, ರಾಜ್ಯದಲ್ಲೇ ಪ್ರಥಮ ಬಾರಿ ಭತ್ತದ ಕೃಷಿಕರಿಗೆ ಸಹಾಯಧನ ನೀಡಿದ ಏಕೈಕ ಸಹಕಾರ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ನಾರ್ಲ ಪಡೀಲ್ ಮತ್ತು ಬಗಂಬಿಲ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ ನೀಡಿದ್ದು, ಸಂಘದ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕೋಟೆಕಾರು ಬೀರಿಯಲ್ಲಿ ಬಹುಮಹಡಿಯ ವಾಣಿಜ್ಯ ಸಂಕೀರ್ಣ ಕಾಮಗಾರಿ ಪ್ರಗತಿಯಲ್ಲಿದೆ. ಸಂಘದ ವ್ಯಾಪ್ತಿಗೆ ಒಳಪಟ್ಟ ಶಾಲೆಯ ಅಗ್ರಗಣ್ಯ ಅಂಕಪಡೆದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳನ್ನು ಗೌರವಿಸಿ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಽಕಾರಿ ಹರ್ಷವರ್ಧನ ಉಳ್ಳಾಲ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಬುಸಾಲಿ ಕೆ.ಬಿ, ನಿರ್ದೇಶಕರಾದ ಗಂಗಾಧರ.ಯು, ಕೆ.ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್ ಯು, ರಾಘವ ಆರ್. ಉಚ್ಚಿಲ್, ಪದ್ಮಾವತಿ.ಎಸ್.ಶೆಟ್ಟಿ, ಸುರೇಖ ಚಂದ್ರಹಾಸ, ರಾಘವ ಉಚ್ಚಿಲ್, ನಾರಾಯಣ ತಲಪಾಡಿ, ಬಾಬು ನಾಯ್ಕ್ ಉಪಸ್ಥಿತರಿದ್ದರು


