UN networks
ಮಂಗಳೂರು: ಜಿಲ್ಲೆಯಲ್ಲಿ ಎನ್.ಐ.ಎ ಮತ್ತು ರಾಜ್ಯ ಪೊಲೀಸ್ ದಾಳಿ ನಡೆಸಿ ಮತ್ತೆ ಇಬ್ಬರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪುತ್ತೂರು ಮತ್ತು ಬಂಟ್ವಾಳದ ಇಬ್ಬರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪಿಎಫ್ ಐ ರಾಜ್ಯ ನಾಯಕರಾದ ತಫ್ಸೀರ್ ಮತ್ತು ಅಬ್ದುಲ್ ಖಾದರ್ ಸಾಮೆತ್ತಡ್ಕ ವಶಕ್ಕೆ ಪಡೆದುಕೊಂಡವರು. ಕಲ್ಲಡ್ಕ ದ ಬೋಳಂತೂರು ನಿವಾಸಕ್ಕೆ ದಾಳಿ ನಡೆಸಿ ತಫ್ಸಿರ್ ನನ್ನು ವಶಕ್ಕೆ ಪಡೆದುಕೊಂಡರೆ, ಪುತ್ತೂರು ತಾಲೂಕಿನ ಸಾಮೆತ್ತಡ್ಕ ನಿವಾಸಕ್ಕೆ ದಾಳಿ ನಡೆಸಿ ಅಬ್ದುಲ್ ಖಾದರ್ ಸಾಮೆತ್ತಡ್ಕ ವಶಕ್ಕೆ ಪಡೆಯಲಾಗಿದೆ.
ದ.ಕ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಬೆಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಇಬ್ಬರನ್ನೂ ಪೊಲೀಸರು ಬೆಂಗಳೂರಿಗೆ ಕರೆದೊಯ್ಯುತ್ತಿದ್ದಾರೆ. ಈಗಾಗಲೇ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪಿಎಫ್ ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಮೊಯಿದ್ದೀನ್ ಹಳೆಯಂಗಡಿ ಮತ್ತು ಪಿಎಫ್ ಐ ಗ್ರಾಮಾಂತರ ಜಿಲ್ಲಾಧ್ಯಕ್ಷ ನವಾಜ್ ಕಾವೂರು ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಾಗಿದೆ.


