UN networks
ಬಂಟ್ವಾಳ: ದೇಶದಾದ್ಯಂತ ಏಕಕಾಲಕ್ಕೆ ಎನ್ ಐ ಎ ತಂಡ ದಾಳಿ ನಡೆಸಿದ್ದು ಮಂಗಳೂರಿನ ಪಿಎಫ್ ಐ ರಾಜ್ಯ ನಾಯಕ ಮೇಲೆ ರಾಷ್ಟ್ರೀಯ ತನಿಖಾ ದಳ ದಾಳಿ ನಡೆಸಿದೆ.
ಉಪ್ಪಿನಂಗಡಿಯ ಲಕ್ಷ್ಮಿ ನಗರದಲ್ಲಿನ ಪಿಎಫ್ ಐ ರಾಜ್ಯ ನಾಯಕ ತಪ್ಸೀರ್ ಬೋಳಂತೂರು ಮನೆಗೆ ಎನ್ ಐಎ ಅಧಿಕಾರಿಗಳ ದಾಳಿ ಬಿಗಿ ಭದ್ರತೆಯೊಂದಿಗೆ ನಡೆದಿದೆ
ದೇಶದ್ಯಾಂತ ಏಕಕಾಲಕ್ಕೆ ಎನ್ ಐ ಎ ತಂಡ ದಾಳಿ ನಡೆಸಿದ್ದು ಪಿಎಫ್ ಐ, ಎಸ್ ಡಿಪಿಐ ಜಿಲ್ಲಾ ಕಚೇರಿ ಸೇರಿ ಹಲವೆಡೆ ಪಿಎಫ್ ಐ ನಾಯಕರ ಮನೆ ಮೇಲೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿ ವೇಳೆ ಹಲವು ಪೊಲೀಸರನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.ಎನ್ ಐಎ ದಾಳಿ ಖಂಡಿಸಿ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಗೋಬ್ಯಾಕ್ ಘೋಷಣೆ ಕೂಗಿದ್ದಾರೆ.


