UN networks
ಹರೇಕಳ: ಬಾಲಕನೋರ್ವನಿಗೆ ಮದರಸದ ಶಿಕ್ಷಕ ಹಲ್ಲೆ ನಡೆಸಿರುವ ಘಟನೆ ಹರೇಕಳ ಗ್ರಾಮದ ದೇರಿಕಟ್ಟೆ ಎಂಬಲ್ಲಿ ಶನಿವಾರ ಸಂಜೆ ವೇಳೆ ಸಂಭವಿಸಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೇಕಳ ದೇರಿಕಟ್ಟೆ ಮಹಮ್ಮದ್ ಎಂಬವರ ಪುತ್ರ ಹಫೀಲ್ ಅಹಮ್ಮದ್ (11) ಹಲ್ಲೆಗೊಳಗಾದ ಬಾಲಕ. ಮದರಸಕ್ಕೆ ತೆರಳಿದ್ದ ಬಾಲಕನಿಗೆ ವಿಚಾರವೊಂದಕ್ಕೆ ಸಂಬಂಧಿಸಿ ಶಿಕ್ಷಕ ಉಸ್ತದ್ ಯಹ್ಯಾ ಫೈಝಿ ಎಂಬವರು ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ, ಈ ಕುರಿತು ಹೆತ್ತವರು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.




