Site icon Ullalavani

ಹರೇಕಳ: ಮದರಸ ಶಿಕ್ಷಕನಿಂದ ಬಾಲಕನಿಗೆ ಹಲ್ಲೆ

UN networks

ಹರೇಕಳ: ಬಾಲಕನೋರ್ವನಿಗೆ ಮದರಸದ ಶಿಕ್ಷಕ ಹಲ್ಲೆ ನಡೆಸಿರುವ ಘಟನೆ  ಹರೇಕಳ ಗ್ರಾಮದ  ದೇರಿಕಟ್ಟೆ ಎಂಬಲ್ಲಿ ಶನಿವಾರ ಸಂಜೆ ವೇಳೆ ಸಂಭವಿಸಿದ್ದು, ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹರೇಕಳ ದೇರಿಕಟ್ಟೆ ಮಹಮ್ಮದ್ ಎಂಬವರ ಪುತ್ರ  ಹಫೀಲ್ ಅಹಮ್ಮದ್ (11) ಹಲ್ಲೆಗೊಳಗಾದ ಬಾಲಕ. ಮದರಸಕ್ಕೆ ತೆರಳಿದ್ದ ಬಾಲಕನಿಗೆ ವಿಚಾರವೊಂದಕ್ಕೆ ಸಂಬಂಧಿಸಿ  ಶಿಕ್ಷಕ ಉಸ್ತದ್ ಯಹ್ಯಾ ಫೈಝಿ ಎಂಬವರು  ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ, ಈ ಕುರಿತು ಹೆತ್ತವರು  ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version