UN networks
ಪುತ್ತೂರು: ಹಿಂದೂ ಸಮಾಜದ ಭಾವನೆಗೆ ಧಕ್ಕೆ ಉಂಟು ಮಾಡುವಂತಹ ಯಾವುದೇ ಘಟನೆಗಳು ನಡೆದರೂ ಮತ್ತೆ ರಕ್ತಪಾತ ಆಗುತ್ತದೆ ಎಂದು ಹಿಂದೂ ಮುಖಂಡ ಅರುಣ್ ಪುತ್ತಿಲ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಹಿಂದೂ ಯುವತಿಯ ಮೈ ಮುಟ್ಟಿ ಅನ್ಯಕೋಮಿನ ಯುವಕನಿಂದ ಕಿರುಕುಳ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಹಿಂದೂ ಪರ ಸಂಘಟನೆಗಳು ಪುತ್ತೂರಿನ ತಿಂಗಳಾಡಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಈ ಘಟನೆಯನ್ನು ನೋವಿನಿಂದಾಗಿ ಖಂಡಿಸುತ್ತೇವೆ. ಹಿಂದೂ ಸಮಾಜದ ಭಾವನೆಗೆ ಧಕ್ಕೆ ಉಂಟುಮಾಡಿದರೆ ಮತ್ತೆ ರಕ್ತಪಾತ ಆಗುತ್ತದೆ ಎಂದರು.
ಬುಧವಾರ ಸಂಜೆ ತಿಂಗಳಾಡಿಯ ಸೂಪರ್ ಬಜಾರ್ ಗೆ ಹಿಂದೂ ಯುವತಿ ಬಂದಿದ್ದು ಮಾಲೀಕ ಚಾ ಕುಡಿಯಲು ಹೋಗಿದ್ದ ವೇಳೆ ಬದ್ರುದ್ದೀನ್ ಎಂಬಾತನಿಂದ ಆಕೆಯ ಮೇಲೆ ಕಿರುಕುಳಕ್ಕೆ ಪ್ರಯತ್ನಿಸಿದ್ದು ಮಹಿಳೆ ಬೊಬ್ಬೆ ಹಾಕಿದ ಕೂಡಲೇ ಸ್ಥಳದಿಂದ ಆರೋಪಿ ಬದ್ರುದ್ದೀನ್ ಕಾಲ್ಕಿತ್ತಿದ್ದನು.
ಆರೋಪಿ ಬದ್ರುದ್ದೀನ್ ನನ್ನ ತಕ್ಷಣ ಬಂಧಿಸಲು ಗಡುವು ಸಂಘಟನೆಗಳು ನೀಡಿತ್ತು ಈ ಹಿನ್ನಲೆಯಲ್ಲಿ
ಇಂದು ಆರೋಪಿ ಬದ್ರುದ್ದೀನ್ ನನ್ನು ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.


