UN networks
ಉಳ್ಳಾಲ: ಮಂಗಳೂರಿನ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ನಡೆದ ವಿವಿಧ ಯೋಜನೆಗಳ ಉದ್ಘಾಟನೆಗೆ ಶುಕ್ರವಾರದಂದು ಹೆಲಿಕಾಪ್ಟರ್ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸತೀಶ್ ಕುಂಪಲ ಹತ್ತಿರದಿಂದ ಸ್ವಾಗತಿಸಿದ ಫೋಟೊ ಇದೀಗ ಉಳ್ಳಾಲದಾದ್ಯಂತ ವಾಟ್ಸ್ಯಾಪ್ ಗುಂಪುಗಳಲ್ಲಿ ಹರಿದಾಡುತ್ತಿದೆ.

ಮಂಗಳೂರು ವಿಧಾನಸಭಾ ಕ್ಷೇತ್ರದ ಪ್ರಭಾವಿ ಬಿಜೆಪಿ ಮುಖಂಡ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಹಾಗು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರೂ ಆಗಿರುವ ಸತೀಶ್ ಕುಂಪಲ ಇಂದು ಪ್ರಧಾನಿ ಮೋದಿ ಹೆಲಿಕಾಪ್ಟರ್ ನಿಂದ ಇಳಿಯುತ್ತಿದ್ದಂತೆ ಹತ್ತಿರದಿಂದಲೇ ಸ್ವಾಗತಿಸಿದ್ದಾರೆ . ಈ ಬಾರಿ ಪ್ರಧಾನಿಗಳ ಭೇಟಿ ವೇಳೆ ತಮ್ಮ ಪಕ್ಷದ ಕಾರ್ಯದರ್ಶಿಗಳಿಗೆ, ಬಿಜೆಪಿ ಯುವಮುಖಂಡರುಗಳಿಗೆ ಸ್ವಾಗತಿಸಲು ಅವಕಾಶಗಳನ್ನು ಕಲ್ಪಿಸಲಾಗಿತ್ತು. ಇದರಲ್ಲಿ ಮುಖಂಡ ಸತೀಶ್ ಕುಂಪಲ ಅವರೂ ಒಬ್ಬರಾಗಿದ್ದಾರೆ.


