UN networks
ಉಳ್ಳಾಲ: ಯೇನೆಪೆÇಯ ದಂತ ಮಹಾವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಸುದ್ದಿಪತ್ರ ‘ವಾರ್ಣಿಕ’ (ಸಂಸ್ಕೃತದಲ್ಲಿ ‘ಬರಹಗಾರ’ ಎಂದರ್ಥ)ಅನ್ನು ಯೇನೆಪೆÇಯ ದಂತ ಮಹಾವಿದ್ಯಾಲಯದ ಡೀನ್ ಅಖ್ತರ್ ಹುಸೇನ್ ಬಿಡುಗಡೆ ಮಾಡಿದರು.
ಯೇನೆಪೆÇಯ ದಂತ ಕಾಲೇಜಿನಲ್ಲಿ ನಡೆದ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ವರದಿಗಳನ್ನು ಈ ಸುದ್ಧಿಪತ್ರ ಒಳಗೊಂಡಿದೆ. ಸುದ್ಧಿ ಪತ್ರ ಬಿಡುಗಡೆ ಸಂದರ್ಭದಲ್ಲಿ ವಿವಿಧ
ವಿಭಾಗದ ಉಪಪ್ರಾಂಶುಪಾಲರು, ಮುಖ್ಯಸ್ಥರು ಮತ್ತು ಅಧ್ಯಾಪಕರು ಹಾಗೂ ವಿದ್ಯಾರ್ಥಿ ಪರಿಷತ್ತಿನ ವಿದ್ಯಾರ್ಥಿ ಮತ್ತು ಉಸ್ತುವಾರಿ ಅಧ್ಯಾಪಕರು ಉಪಸ್ಥಿತರಿದ್ದರು.


