UN networks
ಸುರತ್ಕಲ್: ವೀರ ಸಾರ್ವಕರ್ ವಿವಾದ ಎಲ್ಲೆಡೆ ಕಿಚ್ಚು ಹಚ್ಚುತ್ತಿರುವ ಈ ಸಂದರ್ಭದಲ್ಲಿ ಇದೀಗ ಸುರತ್ಕಲ್ ನಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಮಂಗಳೂರು ಮಹಾ ನಗರ ಪಾಲಿಕೆಯ ನೂತನ ವಲಯ ಕಚೇರಿಯ ಶಾಸಕರ ಕೊಠಡಿಯಲ್ಲಿ ಸಾರ್ವಕರ್ ಭಾವ ಚಿತ್ರವಿರುವ ಪೋಟೋವನ್ನು ಅಳಪಡಿಸಿಲಾಗಿದೆ.
ದ.ಕ ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ರಿಂದ ನೂತನ ಕಚೇರಿ ಉದ್ಘಾಟನೆಗೊಂಡಿದ್ದು
ಮಂಗಳೂರು ಉತ್ತರ ಬಿಜೆಪಿ ಶಾಸಕ ಡಾ.ಭರತ್ ಶೆಟ್ಟಿ ಚೇಂಬರ್ ನಲ್ಲಿ ಸಾವರ್ಕರ್ ಫೋಟೋ ಅಳವಡಿಸಲಾಗಿದೆ.



ನೂತನ ಕಚೇರಿ ಉದ್ಘಾಟನೆ ಬಳಿಕ ಸಾವರ್ಕರ್ ಭಾವ ಚಿತ್ರಕ್ಕೆ ಪುಷ್ಪಾರ್ಚಣೆಯನ್ನು ಸಲ್ಲಿಸಲಾಯಿತು. ಇದೀಗ ಸಾವರ್ಕರ್ ಫೋಟೋ ಅಳವಡಿಕೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದು ಹಲವರ ಆಕ್ಷೇಪ ವ್ಯಕ್ತವಾಗಿದೆ
ರಾಷ್ಟ್ರದ್ರೋಹಿಗಳ ಪೋಟೋ ಹಾಕಿಲ್ಲ; ಭರತ್ ಶೆಟ್ಟಿ
ಸಾವರ್ಕರ್ ಫೋಟೋ ಅಳವಡಿಕೆ ಬಗ್ಗೆ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದು ಸಂಸತ್ತಿನಲ್ಲೇ ವೀರ ಸಾವರ್ಕರ್ ಅವರ ಫೋಟೋ ಅಳವಡಿಸಲಾಗಿದೆ. ಹೀಗಾಗಿ ಇಲ್ಲಿ ಹಾಕಲು ನಾವು ಯಾರ ಅನುಮತಿಯನ್ನೂ ಪಡೆಯುವ ಅಗತ್ಯ ಇಲ್ಲ. ಯಾವ ಕೋಣೆಯಲ್ಲಿ ಯಾರ ಫೋಟೋ ಹಾಕಬೇಕು ಅನ್ನೋದು ಅವರವರಿಗೆ ಬಿಟ್ಟ ವಿಚಾರ. ನಾವು ರಾಷ್ಟ್ರದ್ರೋಹಿಗಳ ಫೋಟೋ ಹಾಕಿಲ್ಲ, ದೇಶಕ್ಕಾಗಿ ಪ್ರಾಣ ಕೊಟ್ಟವರ ಫೋಟೋ ಹಾಕಿದ್ದೇವೆ. ಸಾವರ್ಕರ್ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸಬೇಕಿದೆ.


