Un networks
ಸುಳ್ಯ: ಜಗತ್ತಿನಲ್ಲಿ ಕೆಟ್ಟ ಮಕ್ಕಳು ಹುಟ್ಟ ಬಹುದು ಆದರೆ ಕೆಟ್ಟ ತಾಯಿ ಹುಟ್ಟಲು ಸಾಧ್ಯವಿಲ್ಲ ಅನ್ನುವ ಮಾತಿಗೆ ತದ್ವಿರುದ್ಧ ಎಂಬಂತಹ ಘಟನೆಯೊಂದು ಸುಳ್ಯದಲ್ಲಿ ನಡೆದಿದೆ. ಪುಟಾಣಿ ಮಗುವೊಂದು ಹಠ ಮಾಡಿದ ಕಾರಣಕ್ಕಾಗಿ ತಾಯಿ ಮಗುವಿನ ಮೈಗೆ ಬಿಸಿ ಬರೆ ಎಳೆದ ವಿಲಕ್ಷಣ ಘಟನೆಯೊಂದು ಸುಳ್ಯದ ನಾವೂರಿನಲ್ಲಿ ಬುಧವಾರ ನಡೆದಿದೆ.
ನಾಲ್ಕು ವರ್ಷ ಪ್ರಾಯದ ಮಗು ಹಠ ಮಾಡಿದಕ್ಕೆ ಕಾವ್ಯಶ್ರೀ ಎಂಬ ಕ್ರೂರಿ ತಾಯಿ ಬಿಸಿ ಸಟ್ಟುಗದಲ್ಲಿ ಎಳೆ ಕಂದಮ್ಮನ ಕೈಗೆ ಬರೆ ಹಾಕಿದ್ದು ಪರಿಣಾಮ ಕೈಗೆ ಗಂಭೀರ ಸುಟ್ಟವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ನೀಡಿದ ಮಾಹಿತಿಯ ಆಧಾರದಲ್ಲಿ ಸುಳ್ಯ ಸಿ.ಡಿ.ಪಿ.ಒ. ರಶ್ಮಿ ನೆಕ್ರಾಜೆ ಭೇಟಿ ನೀಡಿ ಮಗುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


