UN networks
ಸುಳ್ಯ: ತಲವಾರು ಪ್ರದರ್ಶಿಸಿ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ ಯುವಕನೋರ್ವನನ್ನು ಸುಳ್ಯ ಪೋಲೀಸರು ವಶಕ್ಕೆ ಪಡೆದಿರುವ ಘಟನೆ ಬುಧವಾರ ನಡೆದಿದೆ.
ಸಂದೀಪ್ ಬಂಧಿತ ಆರೋಪಿ ಯಾಗಿದ್ದಾನೆ.
ಸುಳ್ಯದ ಕನಕಮಜಲು ಎಂಬಲ್ಲಿ ಸಾರ್ವಜನಿಕವಾಗಿ ಸಂದೀಪ್ ಎಂಬಾತ ತಲವಾರು ಪ್ರದರ್ಶಿಸಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವಥರಲ್ ಆಗಿತ್ತು.
ವಿಡಿಯೋ ವೈರಲ್ ಬೆನ್ನಲ್ಲೇ ಸಂದೀಪ್ ನನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ
ಕುಡಿದ ನಶೆ ತಲೆಗೇರಿ ತಲವಾರು ಹಿಡಿದು ಓಡಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಎಂಟು ತಿಂಗಳಿನಿಂದ ಕುಡಿಯುವುದನ್ನು ಬಿಟ್ಟಿದ್ದ ಸಂದೀಪ್ ಮತ್ತೆ ನಿನ್ನೆಯಿಂದ ಮದ್ಯ ಸೇವಿಸಿ ನಿಯಂತ್ರಣ ಕಳೆದುಕೊಂಡು ತಲ್ವಾರ್ ಹಿಡಿದು ಓಡಾಟ ನಡೆಸಿದ್ದನ್ನು
ಜಿಲ್ಲೆಯಲ್ಲಿ ಸೂಕ್ಷ್ಮ ವಾತಾವರಣದ ಬೆನ್ನಲ್ಲೇ ಆತಂಕ ಸೃಷ್ಟಿಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.


