UNNEWS NETWORKS
ಉಳ್ಳಾಲ: ಎರಡು ದಿನಗಳ ಹಿಂದೆ ನಾಪತ್ತೆಯಾದ ಹರೇಕಳ ನಿವಾಸಿ ಬೈಕ್ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಪತ್ತೆಯಾಗಿದೆ.
ಹರೇಕಳ ಶಾಂತಿನಗರದ ನಿವಾಸಿ ಸದ್ಯ ಬದ್ಯಾರಿನಲ್ಲಿ ವಾಸಿಸುತ್ತಿರುವ ಜಬ್ಬಾರ್ ಹಸನ್ (40) ಎಂಬವರ ಬೈಕ್ ಪತ್ತೆಯಾಗಿದೆ. ಜು.23 ರಂದು ಹೊಟ್ಟೆನೋವು ಎಂದು ಮನೆಯಲ್ಲಿ ತಿಳಿಸಿ, ಆಧಾರ್ ಕಾಡ್೯ ಹಿಡಿದುಕೊಂಡು ಜಬ್ಬಾರ್ ಮನೆಯಿಂದ ಹೊರಟು ನಾಪತ್ತೆಯಾಗಿದ್ದರು. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮನೆಮಂದಿ ನಿನ್ನೆ ನಾಪತ್ತೆ ದೂರು ದಾಖಲಿಸಿದ್ದರು. ಇಂದು ಜಬ್ಬಾರ್ ಅವರ ಬೈಕ್ ಸೋಮೇಶ್ವರ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಅಲ್ ಮದೀನಾ ಸಭಾಂಗಣದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜಬ್ಬಾರ್, ಮೀನು ಮಾರಾಟ ಮಾಡುವ ಕಾಯಕವನ್ನು ನಡೆಸುತ್ತಿದ್ದರು. ವಿವಾಹಿತರಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ.




