UNNEWS NETWORKS
ಉಳ್ಳಾಲ: ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟç ಚಿಂತನೆಯ ಕಾರ್ಯಕ್ರಮಗಳ ಮೂಲಕ ಸಕ್ರೀಯವಾಗಿ ಸಾರ್ವಜನಿಕ ರಂಗದಲ್ಲಿ ಮುನ್ನಡೆಯುತ್ತಿರುವ ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಆಟಿಡೊಂಜಿ ಕೂಡಾಟಿಕೆ ಕಾರ್ಯಕ್ರಮ ಪ್ರತಿಷ್ಠಾನದ ಸದಸ್ಯರ ಕುಟುಂಬ ಸಮ್ಮಿಲನದಿಂದ ಹೊಸ ಹುರುಪಿನೊಂದಿಗೆ ಕಾರ್ಯ ನಿರ್ವಹಿಸಲು ಶಕ್ತಿ ತಂಬಿಸಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜೀವನ್ ಕುಮಾರ್ ಅಭಿಪ್ರಾಯಪಟ್ಟರು.

ತೊಕ್ಕೊಟು ಭಗತ್‌ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ಮಾಡೂರು ಶ್ರೀದೇವಿ ಸಭಾಂಗಣದಲ್ಲಿ ನಡೆದ ಆಟಿಡೊಂಜಿ ಕೂಡಾಟಿಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೌರವ ಸಲಹೆಗಾರ ಆನಂದ ಕೆ.ಅಸೈಗೋಳಿ ಸಾಂಪ್ರದಾಯಿಕ ಮಣ್ಣಿನ ದೀಪವನ್ನು ಹಣತೆಯಿಂದ ಬೆಳಗಿಸಿ, ಹಲಸಿನ ಹಣ್ಣು ತುಂಡರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಟಿ ತಿಂಗಳ ಮಹತ್ವ ಅಂದಿನ ಜೀವನ ಪದ್ಧತಿ, ಕ್ರಮಗಳ ಮಾಹಿತಿ ನೀಡಿದರು.
ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಉಳ್ಳಾಲ ನಗರಸಭೆಗೆ ನೂತನ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಗಣೇಶ್ ಕಾಪಿಕಾಡ್‌ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟ ಕಾರ್ಯದರ್ಶಿ ಕಿರಣ್ ಕೊಲ್ಯ ಅವರನ್ನು ಗೌರವಿಸಲಾಯಿತು.
ಗೌರವಾಧ್ಯಕ್ಷ ರಾಕೇಶ್ ಬೈಪಾಸ್, ಕೋಶಾಽಕಾರಿ ಹರೀಶ್ ಅಂಬ್ಲಮೊಗರು, ಕಾರ್ಯಕ್ರಮದ ಸಂಚಾಲಕ ಪ್ರವೀಣ್ ಬಸ್ತಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ಗೋಪಿನಾಥ್ ಬಗಂಬಿಲ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು, ಸಂ.ಕಾರ್ಯದರ್ಶಿ ದಾಮೋದರ ನಡಾರ್ ವಂದಿಸಿದರು, ಸಾಂಸ್ಕöÈತಿಕ ಕಾರ್ಯದರ್ಶಿ ಕೃಷ್ಣ ಪೊನ್ನೊತ್ತೋಡು ಕಾರ್ಯಕ್ರಮ ನಿರೂಪಿಸಿದರು.




