ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ಭಾರತೀಯ ತೀಯಾ ಸಮಾಜ ಉಳ್ಳಾಲ ವಲಯ ಇದರ ವಾರ್ಷಿಕ ಮಹಾಸಭೆ ತೊಕ್ಕೊಟ್ಟು ಕ್ಲಿಕ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು.
ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಮೊಕ್ತೇಸರ ದಾಮೋದರ್ ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ ನಮ್ಮ ಸಮಾಜದ ಎಲ್ಲಾ ಬಾಂಧವರು ಸುಸಂಘಟಿತರಾಗಬೇಕು. ಸಂಘಟನೆ ಸಂದರ್ಭದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಬರದಂತೆ ಪರಸ್ಪರ ಪ್ರೀತಿ, ವಿಶ್ವಾಸದಿಂದ ಗೌರವಯುತ ಸಮಾಜದ ಸದಸ್ಯರಾಗಬೇಕೆಂದು ಪ್ರೇರೇಪಿಸಿದರು.
ಈ ಸಂದರ್ಭ ಕೇಂದ್ರ ಸಮಿತಿ ಸದಸ್ಯ ಮಾಧವ ಸುವರ್ಣ ಒಂಭತ್ತುಕೆರೆ, ವಲಯ ಉಪಾಧ್ಯಕ್ಷ ರಾಜ್‍ಕುಮಾರ್ ಒಂಭತ್ತುಕೆರೆ, ಪ್ರಧಾನ ಕಾರ್ಯದರ್ಶಿ ಸಬಿತಾ ಉಮೇಶ್, ಸುಷ್ಮಾ ಜನಾರ್ಧನ್, ಪ್ರಕಾಶ್ ಗುರಿಕಾರ, ಗಣೇಶ್ ಕೊಲ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಅಭಿಷೇಕ್ ಉಳ್ಳಾಲ್‍ರವರನ್ನು ಈ ಸಂದರ್ಭ ಸನ್ಮಾನಿಸಲಾಯಿತು.
ಉಳ್ಳಾಲ ವಲಯಾಧ್ಯಕ್ಷ ದಿನೇಶ್ ಕುಂಪಲ ಸ್ವಾಗತಿಸಿದರು. ತೀಯಾ ಗ್ರಾಮಾಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ಜಗದೀಶ್ ಆರ್. ಉಚ್ಚಿಲ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.
ಸಂಪನ್ಮೂಲ ವ್ಯಕ್ತಿ ಅರುಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.




