
ಮಂಗಳೂರು: ಕೇರಳ ಹಾಗೂ ಇತರ ರಾಜ್ಯದ ನೂರಾರು ಕಾಲೇಜು ವಿದ್ಯಾರ್ಥಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸೇರ್ಪಡೆ ಮಾಡಿದ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲು ವಕೀಲರೊಬ್ಬರು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿರುವ ದೂರಿಗೆ ಜಿಲ್ಲಾಡಳಿತ ಮತ್ತು ಜಿಲ್ಲಾ ಚುನಾವಣಾಧಿಕಾರಿಗೆ ತನಿಖೆ ನಡೆಸುವಂತೆ ಆದೇಶಿಸಿದ ನಡುವೆಯೂ ಕೋಟೆಕಾರು ಪಟ್ಟಣ ಪಂಚಾಯಿತಿ ಚುನಾವಣೆಗೆ ಬಿಡುಗಡೆಯಾಗಿರುವ ಮತದಾರರ ಅಂತಿಮ ಪಟ್ಟಿಯಲ್ಲಿ 300 ಕ್ಕೂ ಹೆಚ್ಚು ವೈದ್ಯಕೀಯ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಲಾಗಿದೆ.
ಕೋಟೆಕಾರು ಪಟ್ಟಣ ಪಂಚಾಯತಿಯ ಸ್ಥಳೀಯ ಚುನಾವಣೆಯು 27/12/2021 ರಂದು ನಡೆಯಲಿದ್ದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಿದ್ದು ಈ ಪಟ್ಟಿಯಲ್ಲಿ 300 ಕ್ಕೂ ಹೆಚ್ಚು ಸ್ಥಳೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಸೇರ್ಪಡೆಯಾಗಿದ್ದಾರೆ. ಕೋಟೆಕಾರು ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 6 ರಲ್ಲಿ 3 ಮೆಡಿಕಲ್ ಕಾಲೇಜ್ ಇದ್ದು ಕಡಿಮೆ ಅಂದರೂ 5000 ವಿದ್ಯಾರ್ಥಿಗಳು ಇದ್ದಾರೆ ಇವರುಗಳಿಗೆ ಸ್ಥಳೀಯ ಚುನಾವಣೆಯಲ್ಲಿ ಮತದಾನದ ಅವಕಾಶ ನೀಡಿದರೆ ಸ್ಥಳೀಯರಾದ ನಾವುಗಳು ಮತದಾನ ಬಹಿಷ್ಕಾರ ಹಾಕುವುದೆ ಸೂಕ್ತ ಅನ್ನುವ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದರು. ಕಾರಣವೇನೆಂದರೆ ಈ ವಾರ್ಡಿನ ಗ್ರಾಮಸ್ಥರ ಸಂಖ್ಯೆ 550 ಕಾಲೇಜಿನ ವಿದ್ಯಾರ್ಥಿಗಳ ಸಂಖ್ಯೆ 5000 ಕ್ಕೂ ಹೆಚ್ಚು ಮುಂದಿನ ದಿನಗಳಲ್ಲಿ ಅಭ್ಯರ್ಥಿಯ ಆಯ್ಕೆಗೆ ಗ್ರಾಮಸ್ಥರ ಅಗತ್ಯವಿಲ್ಲ .ಈ ಬಗ್ಗೆ ಸಂಬಂಧ ಪಟ್ಟ ಚುನಾವಣೆ ಅಧಿಕಾರಿಗಳು ಈ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಸ್ಥಳೀಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮತದಾನದ ಅವಕಾಶ ನೀಡಬಾರದು. ಸೂಕ್ತ ವಿಳಾಸ ಇಲ್ಲದ ಮತದಾರರನ್ನು ಈ ಕೂಡಲೇ ಪಟ್ಟಿಯಿಂದ ಕೈಬಿಡಬೇಕು. ಚುನಾವಣಾ ಆಯೋಗದ ನೀತಿಯ ಪ್ರಕಾರ ಒಬ್ಬನಿಗೆ ಒಂದೇ ಮತದಾನದ ಗುರುತು ಚೀಟಿ. ಆದರೆ ಈ ವಿದ್ಯಾರ್ಥಿಗಳ ಗುರುಚೀಟಿ ನೀಡಿದ ದಾಖಲೆ ಕಡತದಲ್ಲಿ ಅವರ ಸ್ವಂತ ( ಹಚ್ಚಿನ ವಿಧ್ಯಾರ್ಥಿಗಳು ಕೇರಳ ಮೂಲದವರು) ಊರಿನಲ್ಲಿ ಇರುವ ಗುರುತು ಚೀಟಿಯ ಹೆಸರನ್ನು ಅಲ್ಲಿನ ಚುನಾವಣಾ ಅಧಿಕಾರಿ ಡಿಲಿಟೇಶನ್ ಮಾಡಿದ ಪತ್ರವನ್ನು ಹಾಜರು ಪಡಿಸದೆ ಕಾನೂನು ಬಾಹಿರವಾಗಿ ಇಲ್ಲಿನ ಚುನಾವಣಾ ಆಯೋಗಕ್ಕೆ ಮೋಸ ,ವಂಚನೆ ಮಾಡಿದ್ದಾರೆ. ಆದ್ದರಿಂದ ಅಂತಹ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೋಟೆಕಾರು ಗ್ರಾಮಸ್ಥರಿಂದ ಕೇಳಿಬಂದಿದೆ.

