UN networks
ಕೊಣಾಜೆ: ದೇಶದೆಲ್ಲೆಡೆ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 151ನೇ ಜಯಂತಿ ಆಚರಣೆ ಸಂಭ್ರಮದಲ್ಲಿರುವಾಗ ಯುವಕನೊಬ್ಬ ಗಾಂಧೀಜಿ ಯುವತಿಯೊಂದಿಗೆ ತುಳುಭಾಷೆಯ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಡಾನ್ಸ್ ಹೆಜ್ಜೆ ಹಾಕಿದ ವೀಡಿಯೊವನ್ನು ಮೊಬೈಲ್ ಸ್ಟೇಟಸ್ ಹಾಕಿ ವಿಕೃತಿ ಮೆರೆದಿದ್ದು ಯುವಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೊಣಾಜೆ ಠಾಣೆಗೆ ಡಿವೈಎಫ್ ಐ ದೂರು ನೀಡಿದೆ.
ಸಾಮಾಜಿಕ ಜಾಲತಾಣ ವಾಟ್ಸಾಪ್ ನಲ್ಲಿ ಹರೇಕಳ ಗ್ರಾಮದ ಪ್ರಜ್ವಲ್ ಎಂಬಾತ ತನ್ನ ಮೊಬೈಲ್ ( 9686774897)ನಲ್ಲಿ ಗಾಂಧೀಜಿ ಪಾಶ್ಚಿಮಾತ್ಯ ರಾಷ್ಟ್ರದ ಯುವತಿಯೊಬ್ಬಳ ಜೊತೆ ಸಜ್ಜಿಗೆ, ಬಜಿಲ್ ಎಂಬ ಹಾಡಿಗೆ ಹೆಜ್ಜೆ ಹಾಕಿರುವ ಎಡಿಟೆಡ್ ವೀಡಿಯೋವನ್ನ ಹರಿಯ ಬಿಟ್ಟು ವಿಕೃತಿ ಮೆರೆದಿರುವುದಾಗಿ ಡಿವೈಎಫ್ ಐ ಸಂಘಟನೆ ದೂರಿನಲ್ಲಿ ಆರೋಪಿಸಿದೆ.
ಸಾಮ್ರಾಜ್ಯಶಾಹಿ ಬ್ರಿಟೀಷರ ಆಳ್ವಿಕೆಯ ವಿರುದ್ಧ ನಿಸ್ವಾರ್ಥವಾಗಿ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಅವರ ಜನ್ಮ ದಿನದಂದೇ ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ ಅವಮಾನಿಸಿರುವ ಪ್ರಜ್ವಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಈತನ ಈ ಕೃತ್ಯದಿಂದ ಪ್ರದೇಶದಲ್ಲಿ ಶಾಂತಿ ಕದಡುವ ಪರಿಸ್ಥಿತಿ ಉಂಟಾಗಲಿದ್ದು ಇದು ಪರಸ್ಪರ ಸಂಘರ್ಷಕ್ಕೆ ಎಡೆಮಾಡಿಕೊಡುವ ಅವಕಾಶಗಳು ಬಹಳಷ್ಟು ಇದೆ. ಈತ ರಾಷ್ಟ್ರಪಿತ ಗಾಂಧೀಜಿಯನ್ನು ಅವಮಾನಿಸಿದನೆಂದರೆ ದೇಶವನ್ನೇ ಅವಮಾನಿಸಿದಂತೆ. ಹಾಗಾಗಿ ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಡಿವೈಎಫ್ ಐ ಎಚ್ಚರಿಸಿದೆ. ದೂರು ನೀಡಿದ ನಿಯೋಗದಲ್ಲಿ ಡಿವೈ ಎಫ್ ಐ ಉಳ್ಳಾಲ ವಲಯ ಅಧ್ಯಕ್ಷ ರಫೀಕ್ ಹರೇಕಳ , ಮುಮಡರಾದ ಅಶ್ರಫ್ ಹರೇಕಳ , ಹರೇಕಳ ಗ್ರಾಮ ಕಾರ್ಯದರ್ಶಿ ರಿಝ್ವಾನ್ ಖಂಡಿಗ, ಜೊತೆ ಕಾರ್ಯದರ್ಶಿ ರಶೀದ್ , ಬದ್ರುದ್ದೀನ್, ಇಸ್ಮಾಯಿಲ್ ಖಂಡಿಗ ಜೊತೆಗಿದ್ದರು.


