UN networks
ಉಳ್ಳಾಲ: ಅಲ್-ಮಸ್ಜಿದುಲ್ ಜಾಮಿಉಲ್ ಅಮೀನ್ (401), ಹಝ್ರತ್ ಅಸ್ಸಯ್ಯಿದ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ಖ.ಸಿ. ದರ್ಗಾ, ಹಾಗೂ ನಜಾತುಸ್ವಿಬ್ಯಾನ್ ಮದ್ರಸ ಅಳೇಕಲ, ಉಳ್ಳಾಲ ಇದರ 2021-23ನೇ ಸಾಲಿನ ಅಧ್ಯಕ್ಷರಾಗಿ ಯು. ಎಸ್. ಹಂಝ ಹಾಜಿ ಆಯ್ಕೆಯಾದರು.
ನೂತನ ಪಧಾದಿಕಾರಿಗಳ ಸಭೆ ಅ.29ರಂದು ಖತೀಬರಾದ ಅಬೂಝಿಯಾದ್ ಮದನಿ ಪಟ್ಟಾಂಭಿ ಉಸ್ತಾದರ ದುಆದೊಂದಿಗೆ ಹಝ್ರತ್ ಅಚ್ಚಿ ಸಾಹಿಬ್ ವಲಿಯುಲ್ಲಾಹಿ ಖ.ಸಿ. ದರ್ಗಾ ಝಿಯಾರತ್ ಬಳಿಕ ನಡೆಯಿತು.
ಹಂಗಾಮಿ ಅಧ್ಯಕ್ಷರಾದ ಪಿ.ಎಸ್.ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.
ಪ್ರಧಾನ ಕಾರ್ಯದರ್ಶಿಯಾಗಿ ಯು.ಎ. ಅಬ್ದುಲ್ ರವೂಫ್ ಹಾಜಿ, ಕೋಶಾಧಿಕಾರಿಯಾಗಿ ಯು.ಎಸ್. ಅಬ್ದುರ್ರಹ್ಮತ್, ಉಪಾಧ್ಯಕ್ಷರಾಗಿ ಪುತ್ತು ಬಾವಾ ಹಾಜಿ, ಕಾರ್ಯದರ್ಶಿಯಾಗಿ ಮುಹಮ್ಮದ್ ತಾಜುದ್ದೀನ್, ಗೌರವ ನಿರ್ದೇಶಕರಾಗಿ ಪಿ.ಎಸ್.ಮುಹಮ್ಮದ್ ಶಿಹಾಬುದ್ದೀನ್ ಕಾಮಿಲ್ ಸಖಾಫಿ, ಮಸ್ಜಿದ್ ಸಂಚಾಲಕರಾಗಿ ಯು.ಫಾರೂಕ್ , ಮದ್ರಸ ಸಂಚಾಲಕರಾಗಿ ಕೆ. ಮುಹಮ್ಮದ್ ಅಶ್ರಫ್ ಫ್ಲಾಟ್ ಸಂಚಾಲಕರಾಗಿ ಆಸಿಫ್ ಅಬೂಬಕ್ಕರ್ ಕಕ್ಕೆತೋಟ ಮತ್ತು ಮಸ್ಜಿದ್ ಉಪಸಮಿತಿ ಸದಸ್ಯರುಗಳಾಗಿ ಯು.ಸಿ. ಇಬ್ರಾಹೀಂ, ಯು.ಡಿ. ಅಶ್ರಫ್, ನವಾಝ್, ನಝೀರ್ ಮತ್ತು ಅಬ್ದುಲ್ಲಾಹ್ ಬಶೀರ್, ಮದ್ರಸ ಉಪಸಮಿತಿ ಸದಸ್ಯರುಗಳಾಗಿ ಅಬ್ದುಲ್ಲಾಹ್ ಮುಸ್ಲಿಯಾರ್, ಮುಹಮ್ಮದ್ ಮಿಸ್ಬಾಹ್, ಅನ್ಸಾರ್ ಮಲಿಕ್, ಯು.ಕೆ. ಇಕ್ಬಾಲ್, ನೂರುದ್ದೀನ್ ಯು.ಎಸ್. ಮತ್ತು ಜಾಫರ್ ಯು.ಎಸ್., ಫ್ಲಾಟ್ ಉಪ ಸಮಿತಿ ಸದಸ್ಯರುಗಳಾಗಿ ಯು.ಕೆ. ಮೊಯ್ದೀನ್, ಯು.ಎಚ್. ಅಬ್ಬಾಸ್, ಯು.ಎಸ್. ರಫೀಕ್, ರಫೀಕ್ ಮತ್ತು ಯು.ಎ. ರಶೀದ್ ರವರನ್ನು ಆಯ್ಕೆಯಾದರು.
ಜಾಫರ್ ಅಳೇಕಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.


