

ಮಂಜನಾಡಿ : ಕರ್ನಾಟಕ ಸರಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಪಂಚಾಯತ್ ಮೂಲಕ ನಿರ್ಮಾಣವಾದ
ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಶಾಸಕ ಯು ಟಿ ಖಾದರ್ ಅವರು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಂಜನಾಡಿಯ ಮೊಂಟೆಪದವು ಪ್ರದೇಶದಲ್ಲಿ ತಲೆಯೆತ್ತಿರುವ ಈ ವಿದ್ಯಾರ್ಥಿನಿಲಯ ಮಂಗಳೂರು ಕ್ಷೇತ್ರದ ಪರಿಶಿಷ್ಟ ವರ್ಗದ ಮಕ್ಕಳಿಗಿಂತಲೂ ಇತರ ಕ್ಷೇತ್ರದ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲು ಮಾಡಿರುವಂತದ್ದು ಎಂದರು.
ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಇನ್ನಷ್ಟು ಮುಂದೆ ಬರಬೇಕು ಎಂಬ ದೂರದೃಷ್ಟಿಯಿಂದ
ಈಗಾಗಲೇ ಬಾಡಿಗೆ ಕಟ್ಟಡದಲ್ಲಿ ವಿದ್ಯಾರ್ಥಿ ನಿಲಯವನ್ನು ಆರಂಭಿಸಲಾಗಿದ್ದು, ಅದರಂತೆ ಶಾಶ್ವತವಾದ ಕಟ್ಟಡವನ್ನು ಕಟ್ಟಿ ಆ ವಿದ್ಯಾರ್ಥಿಗಳಿಗೆ ನೆರವಾಗಲೆಂದು ಸದುದ್ದೇಶದಿಂದ ಸರಕಾರ ಸ್ವಂತ ವಿದ್ಯಾರ್ಥಿ ನಿಲಯ ಸ್ಥಾಪಿಸಿದೆ ಎಂದರು.
ಕೆಲವೊಂದು ಲೋಪದೋಷಗಳನ್ನು ಮನಗಂಡಿದ್ದು ಸ್ಥಳೀಯವಾಗಿ ಒಂದು ಮೇಲುಸ್ತುವಾರಿ ಸಮಿತಿ ರಚಿಸಿ
ಅವರೊಂದಿಗೆ ಚರ್ಚಿಸಿ ಅವರಿಗೆ ಸಹಕಾರ ನೀಡಲಾಗುವುದು.ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಕಟ್ಟಡ ನಿರ್ಮಿಸಿ ಉದ್ಘಾಟನೆಗೊಂಡ ಬಳಿಕ ತಮ್ಮ ಪಾಡಿಗೆ ತಾವು ಹೋಗದೆ ಕನಿಷ್ಠ ಕೆಲವು ವರ್ಷಗಳ ಕಾಲ ಈ ಕಟ್ಟಡದ ಬಗ್ಗೆ
ನಿರ್ವಹಣೆಯ ಜವಾಬ್ದಾರಿಯನ್ನು ಹೊರಬೇಕಿದೆ. ಕಟ್ಟಡ ಸಂಪೂರ್ಣವಾಗಿ ಸುಸಜ್ಜಿತವಾಗಿ ಬಳಕೆಗೆ ಸಾಧ್ಯ ಎಂದು ಕಂಡಲ್ಲಿ ಮಾತ್ರ ಉದ್ಘಾಟನೆ ನಡೆಸುತ್ತೇವೆ ಎಂದರು.
ಇದೇ ಸಂದರ್ಭ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಯಂತಹ ಉದ್ಯಮಿ ಎಂ ಎಸ್ ಕರೀಂ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನಸ್ರೀನಾ, ಇಕ್ಬಾಲ್ ಮಾಜಿ ಅಧ್ಯಕ್ಷರಾದ ಮಹಮ್ಮದ್ ಅಸೈ, ಇಸ್ಮಾಯಿಲ್ ದೊಡ್ಡಮನೆ, ಪಂಚಾಯಿತಿ ಸದಸ್ಯರಾದ ಮೋಹಿದ್ದಿನ್ ಕುಂಞ ಮರಾಠಿ ಮೂಲೆ
ಅತ್ತಾವುಲ್ಲ ಪರ್ತಿಪ್ಪಾಡಿ, ಆಸಿಫ್, ಇಸ್ಮಾಯಿಲ್ , ಅಬ್ದುಲ್ ಖಾದರ್, ಜಯಂತಿ ಉಪಸ್ಥಿತರಿದ್ದರು.

