
ಉಳ್ಳಾಲ: ಸೋಮೇಶ್ವರ ರುದ್ರಪಾದೆಯಿಂದ ಸಮುದ್ರಕ್ಕೆ ಹಾರಿ ಸೋಮೇಶ್ವರ ಪುರಸಭೆ ಬಳಿ ನಿವಾಸಿ ಪವನ್ ಭಟ್ (29) ಆತ್ಮಹತ್ಯೆಗೈದಿದ್ದು, ಸಮುದ್ರದ ಅಲೆಯಲ್ಲಿ ಸಿಲುಕಿದ್ದ ಮೃದೇಹವನ್ನು ಸ್ಥಳೀಯ ಮೀನುಗಾರರು ಮತ್ತು ಜೀವರಕ್ಷಕ ಈಜುಗಾರರು ಸಮುದ್ರದಿಂದ ಮೇಲಕ್ಕೆತ್ತಿದ್ದಾರೆ.
ಎಂಬಿಎ ಮತ್ತು ಇಂಜಿನಿಯರಿಂಗ್ ಪದವಿಧರನಾಗಿದ್ದ ಪವನ್ ಖಾಸಗಿ ಕಂಪೆನಿಯಲ್ಲಿ ಕೆಲಸದಲ್ಲಿದ್ದ ಎನ್ನಲಾಗಿದೆ. ಮೈಸೂರಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದ ಪವನ್ ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ನಡೆಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ. ವಿದ್ಯಾರ್ಥಿ ದೆಸೆಯಿಂದಲೇ ಪ್ರತಿಭಾನ್ವಿತನಾಗಿದ್ದ ಪವನ್ ಉತ್ತಮ ಹಾಡುಗಾರ ಹಾಗೂ ಗಿಟಾರ್ ನುಡಿಸುತ್ತಿದ್ದ ಎನ್ನಲಾಗಿದೆ. ಕೋವಿಡ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ಕೆಲಸ ಮಾಡುತ್ತಿದ್ದ ಈತ ಮಾನಸಿಕವಾಗಿ ಕುಗಿದ್ದು, ಪ್ರತೀ ದಿನ ಸೋಮೇಶ್ವರ ದೇವಸ್ಥಾನಕ್ಕೆ ತೆರಳುತ್ತಿದ್ದ. ಬುಧವಾರವೂ ದೇವಸ್ಥಾನಕ್ಕೆ ತೆರಳಿ ಬಳಿಕ ರುದ್ರಪಾದೆಯ ಮೇಲೆಗ ಹೋಗಿದ್ದು ಅಲ್ಲಿಂದ ಆತ್ಮಹತ್ಯೆಗೈದಿದ್ದು, ಸ್ಥಳೀಯರು ನೋಡಿ ಜೀವರಕ್ಷಕ ಈಜುಗಾರರಿಗೆ ಮಾಹಿತಿ ನೀಡಿದ್ದು ಅವರು ಸ್ಥಳ್ಕೆ ಆಗಮಿಸಿದಾಗ ಪವನ್ ಮೃತದೇಹಸಮುದ್ರದ ಅಲೆಯಲ್ಲಿ ಸಿಲುಕಿದ್ದು ಪೆÇಲೀಸರಿಗೆ ಮಾಹಿತಿ ನೀಡಿದ್ದು, ಪೆÇಲೀಸರ ಮಾಹಿತಿಯಂತೆ ಗೃಹರಕ್ಷಕದಳದ ಸಿಬಂದಿ ಪ್ರಸಾದ್ ಮೊಗವೀರಪಟ್ಣ, ಸಾಗರ್ ಮೊಗವೀರಪಟ್ಣ, ಕರಾವಳಿ ಕಾವಲು ಪಡೆಯ ಸ್ಥಳೀಯ ಈಜುಗಾರರಾದ ಮೋಹನ್ ಮತ್ತು ಸುಜಿತ್, ದೇವಸ್ಥಾನ ಸಿಬಂದಿ ವಿನಾಯಕ್ ಮೃತದೇಹವನ್ನು ಮೇಲಕೆತ್ತಲು ಸಹಕರಿಸಿದರು. ಮೃತ ಪವನ್ ತಂದೆ, ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.

