


ಉಳ್ಳಾಲ: ಮುಂದಿನ ವಿಧಾನಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಎಸ್ ಡಿಪಿಐ ಪಕ್ಷದ ಪ್ರಥಮ ಶಾಸಕರನ್ನು ಕಳುಹಿಸುವ ಎಲ್ಲಾ ಸಂದೇಶಗಳು ಸ್ಪಷ್ಟವಾಗಿದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಸಮಿತಿ ಸದಸ್ಯ ರಿಯಾಝ್ ಫರಂಗಿಪೇಟೆ ಹೇಳಿದರು.
ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ದೇಶದಾದ್ಯಂತ ಹಮ್ಮಿಕೊಂಡಿರುವ 12 ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಎಸ್ಡಿಪಿಐ ಪಕ್ಷ ದೇಶದಲ್ಲಿ ಕ್ಷಿಪ್ರ ಗತಿಯಲ್ಲಿ ಬೆಳೆಯುತ್ತಿರುವ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಪಕ್ಷದ ಸಿದ್ಧಾಂತವನ್ನು ದೇಶದ ಕೆಲವೊಂದು ಬಕೆಟ್ ಮಾಧ್ಯಮಗಳು ಚಿತ್ರೀಕರಿಸುವ ಯೋಚನೆಗಳಲ್ಲ ಪಕ್ಷದ್ದು. ಹಕ್ಕು ವಂಚಿತ , ಶೋಷಿತ ಸಮುದಾಂiÀiದ ಧ್ವನಿಯಾಗಿ ಜನಸಾಮಾನ್ಯರು ದೇಶದ ಮತ್ತು ರಾಜ್ಯದ ಗದ್ದುಗೆಯಲ್ಲಿ ಧ್ವನಿಯನ್ನು ಮೊಳಗಿಸುವ ಉದ್ದೇಶದಿಂದ ಹುಟ್ಟಿಕೊಂಡಂತಹ ಪಕ್ಷ. ಜಿಲ್ಲೆಯ ಜನ ಪಕ್ಷವನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಖುದ್ದಾಗಿ ಜನರೇ ಪಕ್ಷದ ಸದಸ್ಯತ್ವವನ್ನು ಪಡೆಯಲು ಕೇಳಿಕೊಂಡು ಬರುತ್ತಿದ್ದಾರೆ. ಇದನ್ನು ಗಮನಿಸುವಾಗ ರಾಜ್ಯದ ವಿಧಾನಸಭೆಯ ಒಳಗಡೆ ಪ್ರಥಮ ಶಾಸಕರನ್ನು ಎಸ್ ಡಿಪಿಐ ಪಕ್ಷ ದ.ಕ ಜಿಲ್ಲೆಯಿಂದಲೇ ನೀಡಲಿದೆ ಅನ್ನುವ ಸ್ಪಷ್ಟ ಸಂದೇಶ. ಪಕ್ಷದ ಕ್ಯಾಡರ್ ಗಳು, ಹಿತೈಷಿಗಳು ಇನ್ನಷ್ಟು ಬೆಳೆಸುವಲ್ಲಿ ಶ್ರಮವಹಿಸಬೇಕು . ಭಯಮುಕ್ತ ಸ್ವಾತಂತ್ರ್ರ ಮತ್ತು ಹಸಿವು ಮುಕ್ತ ಸ್ವಾತಂತ್ರ್ಯ ಸಿದ್ದಾಂತದೊಂದಿಗೆ ಮುನ್ನೆಡೆದಲ್ಲಿ ಶೀಘ್ರವೇ ಯಶಸ್ಸು ಎಂದರು.
ಎಸ್ ಡಿಪಿಐ ದೇರಳಕಟ್ಟೆ ಬ್ರಾಂಚ್ ಅಧ್ಯಕ್ಷ ಶಬೀರ್ ಧ್ವಜಾರೋಹಣಗೈದರು. ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಬ್ಬಾಸ್ ಕಿನ್ಯಾ, ನಾಸಿರ್ ಒಮೇರ, ಮುನ್ನೂರು ಗ್ರಾ.ಪಂ ಸದಸ್ಯ ಆರೀಫ್ ಮದನಿನಗರ, ಪಿಎಫ್ ಐ ಉಳ್ಳಾಲ ಡಿವಿಷನ್ ಅಧ್ಯಕ್ಷ ಸಯೀದ್ ಕಿನ್ಯಾ ಉಪಸ್ಥಿತರಿದ್ದರು. ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಗಿಡವನ್ನು ನೆಡಲಾಯಿತು.

