
ಉಳ್ಳಾಲ: ರಾಜ್ಯ ಸರ್ಕಾರ ಕಾರ್ಮಿಕ ವರ್ಗಕ್ಕೆ ಇನ್ನೂ ಸರಿಯಾದ ಪರಿಹಾರ ಘೋಷಿಸದೇ, ಮೆಸ್ಕಾಂ ಬಿಲ್ ಏರಿಕೆ ಮಾಡಿ ಸುಮ್ಮನಿದ್ದು ಕಾಪೆರ್Çರೇಟ್ ಕಂಪೆನಿಗಳ ಪರ ಇರುವುದನ್ನು ಡಿವೈಎಫ್ ಐ ಖಂಡಿಸುತ್ತದೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ಹೇಳಿದರು.
ಲಾಕ್ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಿ ಆಗ್ರಹಿಸಿ ಚೆಂಬುಗುಡ್ಡೆ ಮೆಸ್ಕಾಂ ಕಚೇರಿ ಎದುರು ಡಿವೈ ಎಫ್ ಐ ಉಳ್ಳಾಲ ವಲಯ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದ್ಯಂತ ತೈಲ ಬೆಲೆ ಏರಿಕೆಯ ಜೊತೆಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಚರಿತ್ರೆಯಲ್ಲಿ ಪ್ರಥಮ. ಕಾರ್ಮಿಕ ವರ್ಗ ದುಡಿಮೆಯೇ ಇಲ್ಲದ ಸ್ಥಿತಿಯಲ್ಲಿ ಅವಶ್ಯಕ ವಸ್ತುಗಳನ್ನು ಖರೀದಿಸಲು ಅಸಾಧ್ಯವಾಗಿದೆ. ಇದರ ನಡುವೆ ಮೆಸ್ಕಾಂ ಇಲಾಖೆ ಮೂಲಕ ವಿದ್ಯುತ್ ಬಿಲ್ ಅನ್ನು ಏರಿಕೆ ಮಾಡಿರುವುದು ಜನರ ಬದುಕುವ ಹಕ್ಕನ್ನು ಕಸಿದಂತಿದೆ . ವಿದ್ಯುತ್ ಬಿಲ್ ಏರಿಕೆಯನ್ನು ಹಿಂಪಡೆದು ಲಾಕ್ ಡೌನ್ ಅವಧಿಯ ಬಿಲ್ ಅನ್ನು ರದ್ದುಗೊಳಿಸುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದರು.
ಡಿವೈ ಎಫ್ ಐ ಉಳ್ಳಾಲ ವಲಯ ಅಧ್ಯಕ್ಷ ಅಶ್ರಫ್ ಕೆ.ಸಿ ರೋಡ್ ಮಾತನಾಡಿ,ಜನ ಸರಕಾರಕ್ಕೆ ಶರಣಾಗಿ ಬಿಲ್ ಕಟ್ಟುತ್ತಿದ್ದಾರೆ. ಇದು ಸರಕಾರದ ಗುಲಾಮರಾಗಿ ಬದುಕುವುದನ್ನು ತೋರಿಸಿದಂತಾಗುವುದು. ಜನಾಭಿಪ್ರಾಯದ ಸರಕಾರ ಯಾರ ಅಪ್ಪನ ಸೊತ್ತಲ್ಲ. ಜನಪರ ಹೋರಾಟದಲ್ಲಿ ಸರಕಾರ ಸೋಲುಂಡು ಜನತೆಯ ಬೇಡಿಕೆ ಸ್ಪಂಧಿಸಲೇಬೇಕು. ಸಾಲ ಸೋಲ ಬಡ್ಡಿಯಿಂದ ಹಣ ತಂದು ವಿದ್ಯುತ್ ಬಿಲ್ ಕಟ್ಟಿದರೆ , ನಾವು ಮಾಡುವ ಹೋರಾಟಕ್ಕೆ ಬೆಲೆ ಇರುವುದಿಲ್ಲ. ಈ ಕೂಡಲೇ ರಾಜ್ಯ ಸರಕಾರ ವಿದ್ಯುತ್ ದರ ಏರಿಕೆ ಪ್ರಸ್ತಾಪವನ್ನು ಹಿಂಪಡೆಯಬೇಕು. ದರ ಏರಿಕೆ ಖಂಡಿಸಿ ಇಂದು ರಾಜ್ಯಾದ್ಯಂತ ಚಿಮಣಿ, ಕ್ಯಾಂಡಲ್ ಹಚ್ಚಿ ‘ ಕಗ್ಗತ್ತಲ ಕರ್ನಾಟಕ’ ಪ್ರತಿಭಟನೆ ನಡೆಯಲಿದೆ. ಸದ್ಯದ ಸ್ಥಿತಿಯಲ್ಲಿ ಫೀಸ್ ಕಿತ್ಕೊಂಡು ಬರುವುದು ಎಷ್ಟು ಸರಿ. ಅಧಿಕಾರಿಗಳು ಮನಗಾಣಬೇಕಿದೆ. ರಾಜ್ಯಾದ್ಯಂತ ಜಲಾಶಯಗಳು ಭರ್ತಿಯಾಗಿದೆ. ಜಲವಿದ್ಯುತ್, ಸೌರವಿದ್ಯುತ್ ಆರಂಭಿಸಲಿ. ಮುಚ್ಚಿರುವ ರಾಯಚೂರಿನ ವಿದ್ಯುತ್ ಘಟಕವನ್ನು ತೆರೆಯಿರಿ .ಮೆಸ್ಕಾಂ ಗೆ ರಾಜ್ಯ ಸರಕಾರ ಬಾಕಿಯಿರುವ ಮೊತ್ತವನ್ನು ತಕ್ಷಣ ನೀಡಿ ಜನರ ಹೊರೆ ಕಡಿಮೆ ಮಾಡಲಿ ಎಂದರು.
ಈ ಸಂದರ್ಭ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜನಾರ್ದನ್ ಕುತ್ತಾರ್ , ಜೀವನ್ ಕುತ್ತಾರ್, ನಿತಿನ್ ಕುತ್ತಾರ್, ಸುನಿಲ್ ತೇವುಲ, ಇಬ್ರಾಹಿಂ ಮದಕ, ರಫೀಕ್ ಹರೇಕಳ, ಅಶ್ರಫ್ ಹರೇಕಳ, ಜಗದೀಶ್, ಅಶ್ರಫ್ ಕಾನಕೆರೆ, ಬೆರಿಕ್ ಕುವೆಲ್ಲೋ, ಅಶೋಕ್ ಶೆಟ್ಟಿ ಚೆಂಬುಗುಡ್ಡೆ ಉಪಸ್ಥಿತರಿದ್ದರು.

