
ಉಳ್ಳಾಲ: ಕೋವಿಡ್ ಲಾಕ್ಡೌನ್ ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ ಎರಡು ಅಂಗಡಿ ಗಳ ವಿರುದ್ಧ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೆಸಿರೋಡ್ ನಲ್ಲಿ ಇರುವ ಗ್ರೀನ್ ಟ್ರೇಡರ್ಸ್ ಹಾಗೂ ಮಾಸ್ತಿ ಕಟ್ಟೆ ಯಲ್ಲಿ ಇರುವ ಕಾರ್ ವಾಶ್ ನಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಈ ಬಗ್ಗೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ದಾಳಿ ನಡೆಸಿ ಕೆಲಸ ಕಾರ್ಯಗಳನ್ನು ಸ್ಥಗಿತ ಗೊಳಿಸುವಂತೆ ಸೂಚಿಸಿದ್ದರು. ಅಲ್ಲದೆ ಕೋವಿಡ್ ಲಾಕ್ಡೌನ್ ಉಲ್ಲಂಘಿಸಿ ದ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಉಳ್ಳಾಲ, ತೊಕ್ಕೊಟ್ಟು , ಕಿನ್ಯ ಮುಂತಾದ ಪ್ರದೇಶಗಳಲ್ಲಿ ಅನಗತ್ಯ ವಾಗಿ ಓಡಾಡುತ್ತಿದ್ದ 25 ವಾಹನ ಗಳನ್ನು ವಶಪಡಿಸಿಕೊಂಡ ಉಳ್ಳಾಲ ಪೊಲೀಸರು ವಾಹನದ ಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

