
ಮಾಧವಪುರ: ಲಾಕ್ಡೌನ್ ಉಲ್ಲಂಘಿಸಿ ಮೂರು ಬೈಕುಗಳಲ್ಲಿ ತಿರುಗುತ್ತಿದ್ದ ಮೂವರ ವಿರುದ್ಧ ಲಾಕ್ಡೌನ್ ಆದೇಶ ಉಲ್ಲಂಘಿಸಿದ ಕಾಯ್ದೆಯಡಿ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೂರು ಬೈಕುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಪಿಎಸ್ ಐ ರೇವಣ್ಣ ಸಿದ್ಧಪ್ಪ ರೌಂಡ್ಸ್ ನಲ್ಲಿದ್ದ ಸಂದರ್ಭ ಕಿನ್ಯಾ ಗ್ರಾಮದ ಮಾಧವಪುರ ಬಸ್ ನಿಲ್ದಾಣದ ಬಳಿ ಮೂರು ಮಂದಿ ಮೂರು ಬೈಕುಗಳಲ್ಲಿ ಅನಾವಶ್ಯವಾಗಿ ತಿರುಗಾಡುತ್ತಿದ್ದರು. ಮೂರು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ಸೂಚಿಸಿದಾಗ ನಿಲ್ಲಿಸದೆ ಪರಾರಿಯಾಗಿದ್ದರು. ಬಳಿಕ ಪರಿಶೀಲನೆ ನಡೆಸಿದಾಗ KA 19 EW 2549 , (2) KE 19 HB 4139 (3) KA 19 EJ 6357 ಮೂರು ಬೈಕ್ ಗಳ ಪತ್ತೆಯಾಗಿದೆ. ಮೂರನ್ನು ವಶಕ್ಕೆ ಪಡೆದುಕೊಂಡಿರುವ ಉಳ್ಳಾಲ ಪೊಲೀಸರು ಮೂವರ ವಿರುದ್ಧ ಲಾಕ್ಡೌನ್ ಆದೇಶ ಉಲ್ಲಂಘಿಸಿದ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

