Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • News Upload
  • E-Paper
UllalavaniUllalavani
ಉಳ್ಳಾಲ

ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿರುವ ಕರಾವಳಿಯ ಬಾಲನಟ ವಿ ಜೆ ಅಮನ್ ಎಸ್. ಕರ್ಕೇರ

UllalaVaniBy UllalaVaniMay 19, 2021No Comments4 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp
ವಿ ಜೆ ಅಮನ್ ಎಸ್. ಕರ್ಕೇರ
ವಿ ಜೆ ಅಮನ್ ಎಸ್. ಕರ್ಕೇರ

ವರದಿ : ಅರ್ಚನಾ ಎಂ. ಬಂಗೇರ ಕುಂಪಲ

ಮಂಗಳೂರು: ದಿ ನ್ಯೂಯಾರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ಗೆ ಭಾರತದ ವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆ ಚಿತ್ರ ಕೂಡ ಆಯ್ಕೆಯಾಗಿದೆ.
ನೀಲಿಹಕ್ಕಿಚಿತ್ರದಲ್ಲಿ ಸಿದ್ದಾರ್ಥ ಎಂಬ ಹೆಸರಿನ ಪಾತ್ರದಾರಿಯಾಗಿ ಮಂಗಳೂರಿನ ಅಮನ್. ಎಸ್. ಕರ್ಕೇರಾ ಅವರು ಬಾಲನಟನಾಗಿ ಬಣ್ಣಹಚ್ಚಿ ಅದರಲ್ಲೂ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನೊಮಿನೇಟ್ ಆಗಿರುವುದು ಭಾರತ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸದ್ದಿಲ್ಲದೆ ಮಿಂಚುತ್ತಿದ್ದರೂ ಇನ್ನೂ ತೆರೆಮರೆಯಲ್ಲಿರುವ ಕರಾವಳಿಯ ನವಿರಾದ ಕೇಶ ರಾಶಿಯ ಹಾಲುಗೆನ್ನೆ ಸವಿ ಅಕ್ಕರೆಯ ಮುದ್ದುಮುಖದ ಸೌಂದರ್ಯಗಣಿ, ತುಳುನಾಡಿನ ಬಹುಮುಖ ಬಾಲಪ್ರತಿಭೆ, ಬಾಲನಟ, ವಿ.ಜೆ ಅಮನ್.ಎಸ್. ಕರ್ಕೇರ ಅವರ ಸಾಧನೆಯ ಯಶೋಗಾಥೆ.ನೀರಿಗಿಂತ ತಿಳಿಯಾದದ್ದು-ಜ್ಞಾನ ಪ್ರತಿಭೆ ಎನ್ನುವುದು ದೇವರು ಕೊಟ್ಟ ವರ, ದೇವರ ಅಪ್ಪಣೆ ವಿನಹಃ ಹುಲ್ಲು ಕಡ್ಡಿಯೂ ಅಲುಗಾಡದು. ಸಾಧನೆ ಎಂಬುವುದು ಸಾಗರವಿದ್ದಂತೆ,ಬಗೆದಷ್ಟು ಮುಗಿಯದು. ಮನಸ್ಸಿದ್ದರೆ ಮಾರ್ಗವೆಂಬಂತೆ ಸಾಧನೆ ಫಲಪ್ರದವಾಗಲು ಗುರು, ನಿರ್ದಿಷ್ಟ ಗುರಿ,ಕಠಿಣ ಪರಿಶ್ರಮ,ಧ್ಯೇಯ, ಮಾರ್ಗದರ್ಶನ ಅತ್ಯಗತ್ಯ.
ಬೆಳೆಯುವ ಸಿರಿಮೊಳಕೆಯಲ್ಲಿ ಎಂಬಂತೆ ಎಳೆ ವಯಸ್ಸಿನಲ್ಲೇ ಜನಮಾನಸದ ಹೃದಯದೀ ಮನಸೂರೆಗೊಂಡ ಪ್ರತಿಭೆಗೆ ಸರಿಸಾಟಿಯೇ ಇಲ್ಲವೆಂಬಂತೆ ವಿಭಿನ್ನ ಶೈಲಿಯಲ್ಲಿ ಛಾಪು ಮೂಡಿಸಿಹ ಕಿನ್ನರಲೋಕದ ಕಿನ್ನರಿ,ಚೈತನ್ಯದ ಚಿಲುಮೆ, ಯಶಸ್ವಿ ನಿರೂಪಕ,ತ್ರಿಭಾಷಾ ಬಾಲನಟ,ನೃತ್ಯಗಾರ, ಸಂಗೀತಗಾರ,ಚಿತ್ರಕಲೆಗಾರ,
ರೂಪದರ್ಶಿ,ಈಜುಪಟು, ಭಾಷಣಗಾರ,ಸ್ವರ ಹಿನ್ನಲೆಗಾರ,ಕ್ರೀಡಾಪಟು, ಸಂಗೀತವಾದಕ, ಅಂತರ್ರಾಷ್ಟ್ರೀಯ ಮಕ್ಕಳ ಚಲನಚಿತ್ರದ ಬಾಲನಟನೆ ಪ್ರಶಸ್ತಿಗೆ ಭಾಜನರಾದ ಸ್ಪರ್ಧಾಳು,ತುಳುನಾಡ ಹೆಮ್ಮೆಯ ಸಾಧಕ, ಬಹುಮುಖ ಅರಳು ಪ್ರತಿಭೆ ವಿ ಜೆ ಅಮನ್.ಎಸ್.ಕರ್ಕೇರ.
ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನ ಮೂಡುಶೆಡ್ಡೆ ನಿವಾಸಿಗಳಾದ ಶ್ರೀನಿವಾಸ ಅಮೀನ್ ಮತ್ತು ಬಬಿತಾ.ಎಸ್.
ಕರ್ಕೇರ ದಂಪತಿಗಳ ಜೇಷ್ಠ ಪುತ್ರನಾದ ಮಾಸ್ಟರ್ ಅಮನ್.ಎಸ್.ಕರ್ಕೇರರಿಗೆ ಇದೀಗ ಹದಿಮೂರರ ಹರೆಯ.ಇವರು ಪ್ರಸ್ತುತ ಪ್ರೆಸ್ಟೀಜ್ ಇಂಟರ್ ನ್ಯಾಷನಲ್ ಸ್ಕೂಲ್ ಜಪ್ಪಿನಮೊಗರಿನಲ್ಲಿ ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅಮನ್ ಕಲಿಕೆ,ಆಟ, ಪಾಠದಲ್ಲೂ ಸದಾ ಮುಂದಿದ್ದು ಎರಡನೇ ಕ್ಲಾಸ್ ನಿಂದ ಹಿಡಿದು ಸತತವಾಗಿ ಪ್ರತಿ ಆರು ವರ್ಷಗಳಿಂದ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಶಸ್ತಿಯ ಜೊತೆಗೆ ನಗದನ್ನು ತನ್ನ ಮುಡಿಗೇರಿಸಿಕೊಳ್ಳುವುದರ ಜೊತೆಗೆ ಜನರಲ್ ಪೆÇ್ರೀಪೆಕೆಸ್ಸಿ ಅಂದರೆ ನಾಲ್ಕು ವಿಭಾಗದಲ್ಲೂ ಪ್ರಥಮ ಸ್ಥಾನ ಪಡೆದರೆ ಮಾತ್ರ ಆ ಸ್ಥಾನಕ್ಕೆ ಅರ್ಹರಾಗುತ್ತಾರೆ.
ವಿ. ಜೆ. ಅಮನ್. ಎಸ್. ಕರ್ಕೇರ ನಿರೂಪಣೆಯಲ್ಲಿ ಖ್ಯಾತ ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷರು ದಯಾನಂದ್ ಕತ್ತಲ್ ಸಾರ್ ಅವರ ಮುದ್ದಿನ ಶಿಷ್ಯನಾಗಿದ್ದು, ಇವರ ಪ್ರಜ್ವಲ ಭವಿಷ್ಯಕ್ಕೆ ಬೆನ್ನಲುಬಾಗಿ ದಾರಿದೀಪವಾಗಿರುತ್ತಾರೆ. ಅಮನ್ ನಿರೂಪಣೆ ಮಾಡುತ್ತಿದ್ದರೆ ಹರಳು ಹುರಿದಂತೆ ನೆರೆದ ಜನಸ್ತೋಮವನ್ನು ಕ್ಷಣಾರ್ಧದಲ್ಲಿ ತನ್ನೆಡೆಗೆ ಸೆಳೆದುಕೊಂಡು ಮೂಕವಿಸ್ಮಿತರನ್ನಾಗಿಸುವ ಉದಯ್ಯೋನ್ಮುಖ ಅನನ್ಯ ಪ್ರತಿಭೆ.ಇವರು ಮೊಂಟೆಸ್ಸೆರಿ ತರಗತಿಯಿಂದಲೇ ಸರಾಗವಾಗಿ ನಿರೂಪಣೆಗೈದ ಅಧ್ಭುತ ಕಲೆಗಾರ. ನಮ್ಮ ಟಿವಿ ಸ್ಥಳೀಯ ವಾಹಿನಿಯಲ್ಲಿ ನಮ್ಮಶುಭಾಶಯ ನೇರಪ್ರಸಾರ ಕಾರ್ಯಕ್ರಮ ಬೆಳಿಗ್ಗೆ 9 ರಿಂದ 10 ಘಂಟೆವರೆಗೆ ನಡೆಸಿಕೊಡುವ ಪೆÇೀರ. ಮಾತಿನ ಮೋಡಿಯಲ್ಲಿ ಮಂತ್ರ ಮುಗ್ದರನ್ನಾಗಿಸಿ ತನ್ನೆಡೆಗೆ ಅವೆಷ್ಟೋ ಅಭಿಮಾನಿಗಳನ್ನು ಸೆಳೆದುಕೊಂಡ ಪ್ರತಿಭಾನ್ವಿತ.
ಇವರು ಗುರುಹಿರಿಯರಿಗೆ ಗೌರವ ಕೊಟ್ಟು ಮಾತನಾಡಿಸುವುದರ ಜೊತೆಗೆ ಉತ್ತಮ ಸಂಸ್ಕಾರ,ಸದ್ಗುಣ, ಸದಾಚಾರ ಪಾಲಿಸುವ ಬಾಲಕ. ಬೆಂಗಳೂರಿನ ಅರಳು ಟಿವಿ ವಾಹಿನಿಯಲ್ಲಿ ಮುಖ್ಯ ನಿರೂಪಣೆಗೆ ಆಯ್ಕೆ ಆದ ಚಿತ್ತಚೋರ. ದಯಾನಂದ್ ಕತ್ತಲ್ ಸಾರ್ ಅವರು ಗುರುವಾಗಿ ಸದಾ ಶಿಷ್ಯನ ಏಳಿಗೆಗೆ ಪೂರಕವಾಗಿ,ನಿತ್ಯವೂ ಸುಜ್ಞಾನದ ಹಾದಿಗೆ ಆಧಾರಸ್ತಂಭವೆಂಬಂತೆ, ಶಿಷ್ಯನ ಅದೆಷ್ಟೋ ನಿರೂಪಣೆಗೆ, ಭಾಷಣಕ್ಕೆ ವಿಷಯವನ್ನು ಬರೆದುಕೊಟ್ಟು ಬಹುಮಾನ ಪಡೆಯುವಲ್ಲಿ ಶ್ರಮವಹಿಸಿದವರು.
ಅದರಲ್ಲೂ ಇವರು ಪ್ರಧಾನಿ ನರೇಂದ್ರ ಮೋದಿ ಹಾಗೇ ತುಳುನಾಡು ವಿಷಯದ ಕುರಿತು ಮಾಡಿದ ಸಂಭಾಷಣೆ ವಿಡಿಯೋ ಬಲು ದೊಡ್ಡ ಮಟ್ಟಕ್ಕೆ ವೈರಲ್ ಮತ್ತು ಶೇರ್ ಆಗಿರುವ ಸಾರ್ಥಕತೆ ಇವರದು. ಮುಗ್ದ ಮನಸ್ಸುಗಳ ಮಾತು ಹೀಗೆ ನೂರಕ್ಕಿಂತಲೂ ಹೆಚ್ಚು ವಿಭಿನ್ನ ಪರಿಕಲ್ಪನೆಗಳ ವಿಡಿಯೋವನ್ನು ಮಾಡಿರುತ್ತಾರೆ. ಅದಲ್ಲದೆ ಇವರದೇ ಹೆಸರಿನ ಯೂಟ್ಯೂಬ್ ಚಾನೆಲ್ ಮುಖಾಂತರವೂ ತನ್ನ ವಾಕ್ ಚಾತುರ್ಯತೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿ ಮೆಚ್ಚುಗೆ ಗಳಿಸಿರುತ್ತಾರೆ.
ಇಂಡಿಯಾ ಗಾಟ್ ಟ್ಯಾಲೆಂಟ್ ಎಂಬ ಮುಂಬೈನ ಕಲರ್ಸ್ ಟಿವಿ ಚಾನೆಲ್ ನವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ನೃತ್ಯ ಮಾಡಿದ ಅಮೋಘ ನೃತ್ಯಗಾರ, ಡ್ಯಾನ್ಸ್ ಕರ್ನಾಟಕ ಡಾನ್ಸ್ ಕನ್ನಡ ಚಾನೆಲ್ ನ ಆಯ್ಕೆ ಸುತ್ತಿನಲ್ಲಿ ಭಾಗವಹಿಸಿರುವರು.ಹಾಗೇ ಭರತನಾಟ್ಯ ನೃತ್ಯವನ್ನು ಕರಗತ ಗೊಳಿಸಿಹರು.
ರಾಜ್ಯ ಮತ್ತು ರಾಷ್ಟ್ರಮಟ್ಟದ ಕರಾಟೆ ಟೂರ್ನ್ ಮೆಂಟ್ ನಲ್ಲಿ ಭಾಗವಹಿಸಿ ಕಂಚು ಗೆದ್ದಿರುವ ಹೆಮ್ಮೆಯ ಕರಾಟೆಪಟು.ಇವರು ಚಿತ್ರಕಲೆಗಾರನಾಗಿದ್ದು, ಚಿತ್ರ ಪರೀಕ್ಷೆಯಲ್ಲೂ ಬಹುಮಾನ ಗಳಿಸಿದ ಹೆಗ್ಗಳಿಕೆ ಇವರದು. ಸಂಗೀತದ ಸುಸ್ವರ ಪ್ರತಿಭೆಯಾಗಿದ್ದು , ತರಬೇತಿಯಿಲ್ಲದೇ ಸಂಗೀತ ಸಾಧನವಾದ ಕೀಬೋರ್ಡ್ ಹಾಗೇ ಡ್ರಮ್ಸ್ ನುಡಿಸುವುದರಲ್ಲೂ ಚತುರರು.
ನಂತೂರಿನ ಸಂದೇಶ ರೇಡಿಯೋವೊಂದರಲ್ಲಿ ಅಮ್ಮನಕಥೆ ಮತ್ತು ಶಿಕ್ಷಣ ಎಂಬ ಕಾರ್ಯಕ್ರಮಕ್ಕೆ ಸ್ವರ ಸಂಯೋಜಕರಾಗಿದ್ದು ಹೀಗೆ ಪರಿಚಿತರಾಗಿ ಮಗನ ಕ್ರಿಯಾಶೀಲ ಚಟುವಟಿಕೆ ಮುಖಾಂತರ ಅಮ್ಮನಿಗೆ ಸ್ಥಳೀಯ ಟಿವಿ ವಾಹಿನಿಯೊಂದರಲ್ಲಿ ನ್ಯೂಸ್ ರಿಪೆÇೀರ್ಟರ್ ಆಗಿ ಅವಕಾಶ ದೊರಕಿಸಿಕೊಟ್ಟ ಪುಣ್ಯವಂತ ಮಗ. ಇಂತಹ ಪುತ್ರನನ್ನು ಪಡೆಯಲು ನಾವು ಪುಣ್ಯ ಮಾಡಿದ್ದೇವೆ ಎಂಬುವುದು ಇವರ ಅಮ್ಮನ ಮನದ ಮಾತಾಗಿದೆ. ಹೆತ್ತವರು ಮಗನ ಸಾಧನೆಗೆ ಸದಾ ಶ್ರಮಿಸುತ್ತಿದ್ದು, ಇವರ ಏಳಿಗೆಗೆ ವರದಹಸ್ತರಾಗಿರುತ್ತಾರೆ.ಹಾಗೇ ಅಮನ್ ನ ಸಾಧನೆಯ ಬೆನ್ನ ಹಿಂದೆ ಅನೇಕ ಕಾಣದ ಕೈಗಳ ಪರಿಶ್ರಮ ಮತ್ತು ಸಹಕಾರದಿಂದ ಇಂದಿನ ಯಶಸ್ವಿಗೆ ಕಾರಣಿಕರ್ತವಾಗಿರುತ್ತದೆ ಎಂದು ಹೆತ್ತವರು ಬಾವುಕರಾಗಿ ಸ್ಮರಣೆ ಮಾಡುತ್ತಿರುತ್ತಾರೆ.
ವಿ4 ಚಾನೆಲ್ ನಲ್ಲಿ ಕಾಮಿಡಿ ಪ್ರೀಮಿಯರ್ ಲೀಗ್ 3ನೇ ಸಂಚಿಕೆವರೆಗೆ ಪಾತ್ರವಹಿಸಿರುವರು ಹಾಗೇ ನಮ್ಮ ಟಿವಿ ಚಾನೆಲ್ ನ-ಕುಸಲ್ದ್ ಒಸರ್ -ಸ್ಟಾಂಡ್ ಆಫ್ ಕಾಮಿಡಿ ದೊಡ್ಡ ಕಲಾವಿದರ ಜೊತೆ ಪೈನಲ್ ಗೂ ಆಯ್ಕೆಯಾಗಿರುತ್ತಾರೆ. ಸಾಮಾಜಿಕ ಜಾಲತಾಣದ ಟಿಕ್ ಟಾಕ್ ನಲ್ಲೂ ಬಲು ಜೋರಾಗಿ ಸದ್ದು ಮಾಡಿರುವ ಇವರು ಪ್ರಸ್ತುತ ಕೋಡಿಂಗ್ ಕೋರ್ಸ್ ನ್ನು ಆನ್‍ಲೈನ್ ಕ್ಲಾಸ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ರೂಪದರ್ಶಿಯಾಗಿರುವ ನಂದಿನಿ ಕಷಾಯ,ಮಹೇಂದ್ರ ಕಾರ್ ಬೋಲೆರೋ ಹಾಗೇ ಇಮುನೋ ಆಯುರ್ವೇದಿಕ್ ಜಾಹೀರಾತು ಇಮ್ಯುನಿಟಿ ಪವರ್ ಜಾಸ್ತಿ ಮಾಡುವ ಮದ್ದಿನ ಜಾಹೀರಾತಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸಿರುತ್ತಾರೆ.
ಅಮನ್ ತ್ರಿಭಾಷಾ ಬಾಲನಟನಾಗಿದ್ದು, ಪ್ರಥಮವಾಗಿ ಪಾದಾರ್ಪಣೆ ಮಾಡಿದ ತುಳುಚಿತ್ರರಂಗದ ಪೆಪ್ಪೆರೆರೆ ಪೆರೆರೆರೆ ಎಂಬ ಚಿತ್ರದ ಮುಖಾಂತರ ಚಿಕ್ಕ ಪಾತ್ರದಲ್ಲಿ ಬಣ್ಣ ಹಚ್ಚಿ,ಮುಂದೆ ರೂಪಾಂತರ ಶೀರ್ಷಿಕೆಯ ಕನ್ನಡ ಚಲನಚಿತ್ರದಲ್ಲಿ ಪ್ರಮುಖ ಬಾಲನಟನಾಗಿ ಅಭಿನಯಿಸಿರುವರು.
ಅನಂತರದ ನೀಲಿಹಕ್ಕಿ ಎಂಬ ಶಿರಸಿ ಭಾಷೆಯ ಚಲನಚಿತ್ರದಲ್ಲಿ ಸಿದ್ಧಾರ್ಥ ಎಂಬ ಪಾತ್ರದಾರಿಯಾಗಿ ಮುಖ್ಯ ಭೂಮಿಕೆಯಲ್ಲಿ ಬಣ್ಣಹಚ್ಚಿರುವರು. ನೀಲಿಹಕ್ಕಿ ಎಂಬ ಶಿರಸಿ ಭಾಷಾ ಚಲನಚಿತ್ರ ದಿ ನ್ಯೂಯಾರ್ಕ್ ನಲ್ಲಿ ನಡೆಯುವ ಫಿಲಂ ಫೆಸ್ಟಿವಲ್ ಗೆ ಇಂಡಿಯನ್ ಫಿಲಂವತಿಯಿಂದ ಆಯ್ಕೆಯಾದ ಎಲ್ಲಾ ಭಾಷೆಗಳ ಚಲನಚಿತ್ರಗಳ ನಡುವೆ ನೀಲಿಹಕ್ಕಿ ಶಿರಸಿ ಭಾಷೆಯ ಚಲನಚಿತ್ರ ಕೂಡ ಆಯ್ಕೆ ಕಂಡಿತ್ತು. ಇದರಲ್ಲಿ ಅಮನ್. ಎಸ್. ಕರ್ಕೇರಾ ಬೆಸ್ಟ್ ಚೈಲ್ಡ್ ಆರ್ಟಿಸ್ಟ್ ಗೆ ನಾಮಿನೇಟ್ ಆಗಿರುವುದೇ ತುಳುನಾಡಿಗೆ ಹೆಮ್ಮೆಯ ವಿಷಯ.
ಜಿಷ್ಣು ಎಂಬ ಕನ್ನಡ ಚಲನಚಿತ್ರದಲ್ಲಿ ಬಿಕ್ಷುಕನ ಪಾತ್ರ , ಸಪ್ತಸಾಗರದಾಚೆ ಎಲ್ಲೊ ಕನ್ನಡ ಚಲನಚಿತ್ರದಲ್ಲಿ ನಾಯಕನಟ ರಕ್ಷಿತ್ ಶೆಟ್ಟಿ ಬ್ಯಾನರ್ ನ ಚಿತ್ರದ ನಾಯಕಿ ನಟಿಯ ತಮ್ಮನಾಗಿ ವಿನೋದ್ ನ ಪಾತ್ರ ನಿರ್ವಹಿಸಿರುತ್ತಾರೆ.
ಇವರಿಗೆ ಖ್ಯಾತ ಕನ್ನಡ ಚಲನ ಚಿತ್ರ ನಟರಾದ ರಕ್ಷಿತ್ ಶೆಟ್ಟಿಯವರ ಸಂಪೂರ್ಣ ಸಹಕಾರದ ಬೆಂಬಲ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ನೀಡಿರುತ್ತಾರೆ. ಅಂದರೆ ಅಮನ್ ನಲ್ಲಿ ಇಷ್ಟು ಪ್ರತಿಭೆ, ಕಲಾಚಾತುರ್ಯತೆ ಇದ್ದರೂ ಇನ್ನೂ ತೆರೆಮರೆಯಲ್ಲಿರುವ ನವಕಲಾವಿದನ ಪರಿಚಯ ಜಗದಲಿ ಅನಾವರಣ ಗೊಳ್ಳಬೇಕೆಂಬುವುದೇ ಇವರ ಆಶಯ.
ಈಗಾಗಲೇ ಸದ್ದಿಲ್ಲದೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಬಾಲತಾರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಆಸಕ್ತಿ ಇದ್ದು ,ರಾಜ್ಯಮಟ್ಟ ಅಷ್ಟೇ ಅಲ್ಲದೆ ರಾಷ್ಟ್ರಮಟ್ಟದ ಪ್ರಶಸ್ತಿಗೂ ಭಾಜನರಾಗಿರುತ್ತಾರೆ. ಬಳ್ಳಾರಿಯಲ್ಲಿ ಪ್ರತಿಭಾ ರತ್ನ ಪ್ರಶಸ್ತಿ ಧಾರವಾಡದಲ್ಲಿ- ಕರುನಾಡ ರಾಜ್ಯೋತ್ಸವ ಪ್ರಶಸ್ತಿ, ಮೈಸೂರಿನಲ್ಲಿ- ವಿಶ್ವಮಾನ್ಯ ಕನ್ನಡಿಗರ ಪ್ರಶಸ್ತಿ ಹಾಗೇ ಬೆಂಗಳೂರಿನಲ್ಲಿ- ರಾಷ್ಟ್ರ ಮಟ್ಟದ ಪ್ರಶಸ್ತಿ ಗಳನ್ನು ಎಳೆಯ ಹರೆಯದಲ್ಲೇ ಮುಡಿಗೇರಿಸಿಗೊಂಡ ಬಹು ಪ್ರತಿಭಾನ್ವಿತ. ಅಬ್ಬಾಬ್ಬಾ ಈ ಪುಟ್ಟ ಪೆÇೀರನ ಇಷ್ಟೊಂದು ಪ್ರತಿಭೆ, ಅಧ್ಭುತ ಸಾಧನೆಗಳನ್ನು ನೋಡುವಾಗ ಆಡು ಮುಟ್ಟದ ಸೊಪ್ಪಿಲ್ಲ, ಈ ಬಾಲಕ ಏರದ ಸಭಾವೇದಿಕೆಗಳಿಲ್ಲ ಎಂದೆನಿಸುತ್ತದೆ.
ಕರಾವಳಿಯ ಅಪರೂಪದ ಮಾಣಿಕ್ಯ, ರಾಷ್ಟೀಯ ದ್ಯೋತಕ, ಅಸಾಧಾರಣ ಬಾಲಚತುರ, ಹೆಮ್ಮೆಯ ಬಹುಮುಖ ಸಾಧಕ, ತುಳುನಾಡ ಹೊನ್ನ ಶಿಖರ, ಸಾಧನೆಗರಿಯ ಕೀರ್ತಿ ಪತಾಕೆ ದೇಶ-ವಿದೇಶದಲ್ಲೂ ಪಸರಿಸಲಿ, ತೆರೆಮರೆ ಕಾಯಿಯಂತಿರುವ ಅಪ್ಪಟ ರತ್ನದ ಕಂಪು ಅನಾವರಣವಾಗಲಿ ,ಅಮನ್ ನಾಮಧೇಯ ಬಾನಂಗಳದ ಅಷ್ಟದಿಕ್ಕಿನಲ್ಲೂ ರಾರಾಜಿಸಲಿ ಹಾಗೇ ಗುರುಹಿರಿಯರ, ದೈವದೇವರ ಆಶೀರ್ವಾದವಿರಲಿ . ವಿ.ಜೆ.ಅಮನ್.ಎಸ್.ಕರ್ಕೇರನಂತಹ ಅಧ್ಭುತ ಸಾಧಕನಿಗೆ ಬರೆದ ನನ್ನೀ ಕೈ,ಲೇಖನಿಗೂ ಅಭಿಮಾನ,ಗೌರವದ ಧನ್ಯತಾಭಾವ ಮೂಡಿದ್ದು, ಬರಹರೂಪದ ಒಲವಿನ ಸವಿಜೇನ ರಸಧಾರೆಯ ಪದಗಳ ಚಿತ್ತಾರಮಾಲೆ ಅರ್ಪಣೆಯಾಗಲಿ.

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...
Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

February 5, 2026

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026
Leave A Reply

Advertise
ಸಂಪರ್ಕಿಸಿ

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

ಉಚಿತ ಹೋಮಿಯೋಪಥಿ ಆರೋಗ್ಯ ತಪಾಸಣಾ ಹಾಗೂ ಮಾಹಿತಿ ಶಿಬಿರ

December 15, 2025

ಸೋಮೇಶ್ವರ ಲಯನ್ಸ್ ಕ್ಲಬ್ ಆಶ್ರಯದಲ್ಲಿ ನೇತ್ರಾ ತಪಾಸಣಾ ಶಿಬಿರ

December 6, 2025

ನೂತನ ಅತ್ಯಾಧುನಿಕ ಫಿಸಿಯೋಥೆರಪಿ ಚಿಕಿತ್ಸಾ ಕ್ಲಿನಿಕ್ ಉದ್ಘಾಟನೆ

November 12, 2025
ಉಳ್ಳಾಲ

ಉಳ್ಳಾಲದ ಮಂದಿ ಸ್ವಾಭಿಮಾನದಿಂದ ಬಾಳಲುವೀರರಾಣಿ ಅಬ್ಬಕ್ಕಳೇ ಕಾರಣ : ಮಂಜಪ್ಪ ಕಾರ್ನವರ್

By UllalaVaniFebruary 5, 20260

ಅಬ್ಬಕ್ಕ ಉತ್ಸವದ ಕರಪತ್ರ ಬಿಡುಗಡೆಗೊಳಿಸಿದ ಭಗವತಿ ಕ್ಷೇತ್ರದ ಪ್ರಧಾನ ಅರ್ಚಕರುಉಳ್ಳಾಲ: ಉಳ್ಳಾಲದ ಮಣ್ಣಿನಲ್ಲಿ ನಾವು ಖುಷಿಯಿಂದ, ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗಿರುವುದು…

Share this:

  • Click to share on Facebook (Opens in new window) Facebook
  • Click to share on X (Opens in new window) X

Like this:

Like Loading...

ಯೆನೆಪೋಯ ಆಯುಷ್ ಕ್ಯಾಂಪಸ್‌ನಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

February 5, 2026

19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!

February 5, 2026

ಕೆನರಾ ಬ್ಯಾಂಕ್ ದೇರಳಕಟ್ಟೆ ಶಾಖೆಯ ಶಿವರಾಮ ಕಾಸರಗೋಡು ಅವರಿಗೆ ಬೀಳ್ಕೊಡುಗೆ

February 4, 2026
1 2 3 … 1,793 Next
Automatic YouTube Gallery

ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ

ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
Now Playing
ಫೆ.6ರಿಂದ ಮಂಜನಾಡಿ ಯೆನೆಪೋಯ ಆಸ್ಪತ್ರೆಯಲ್ಲಿ ಉಚಿತ ಯೋಗ, ಪ್ರಕೃತಿ ಚಿಕಿತ್ಸೆ
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ...
ಯೆನೆಪೋಯ ಪ್ರಕೃತಿ ಚಿಕಿತ್ಸೆ,ಯೋಗ ವಿಜ್ಞಾನ ಕಾಲೇಜು ಮಂಜನಾಡಿ ಆಶ್ರಯದಲ್ಲಿ ;ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮ

ತೊಕ್ಕೊಟ್ಟುವಿನಲ್ಲಿ ಯೋಗ ವಿಜ್ಞಾನ ಕಾಲೇಜು ಪ್ರಿನ್ಸಿಪಾಲ್ ಡಾ.ಪುನೀತ್ ರಾಘವೇಂದ್ರ ಮಾಹಿತಿ

#ullalavani #news #latestnews #ullala #yenapoya #prsmt
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
Now Playing
||HISTORY|| ಕಾಪಿಕಾಡ್ ಪ್ರದೇಶದಲ್ಲಿ ನೆಲೆ ನಿಂತ ಉಮಾಮಹೇಶ್ವರಿ ದೇವಿ....!
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು ...
ನನ್ನ ಮನೆಗೂ ಬಂದಿತ್ತು ನಾಗರಹಾವುಗಳು; ಹೈವೆಯಲ್ಲಿ ನಡೆಯುತ್ತಿತ್ತಂತೆ ಅಪಘಾತಗಳು

ದೇವಳದ ಆಡಳಿತ ಮೋಕ್ತೆಸರರಾದ ಎ.ಜೆ.ಶೇಖರ್ ಹೇಳಿದ್ರೂ ಅಂದಿನ ಕಥನ

#ullalavani #news #tulunad #latestnews #ullala #kapikad #umamaheshwaridevi #history
Follow us on Facebook
Recent Editions
JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version
%d