UN networks
ಉಳ್ಳಾಲ: ಸಾಮಾಜಿಕ ಅಂತರ ಕಾಪಾಡದೆ ಸುಮಾರು ನೂರಕ್ಕೂ ಅಧಿಕ ಜನ ಉಳ್ಳಾಲ ಸಮುದಾಯ ಆಸ್ಪತ್ರೆ ಎದುರು ಸರತಿ ಸಾಲಿನಲ್ಲಿ ನಿಂತಿರುವ ಬಗ್ಗೆ ವರದಿಯಾಗಿದೆ.


ಆನ್ ಲೈನ್ ನಲ್ಲಿ ಫಾರಂ ಭರ್ತಿ ಮಾಡಲು ಸಾಧ್ಯವಾಗದೇ ಕೋವಿಡ್ ವ್ಯಾಕ್ಸಿನೇಷನ್ ನೋಂದಣಿಗಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಜನ ಸೇರಿದ್ದಾರೆ. ನೋಂದಣಿ ಕುರಿತು ಸಮುದಾಯ ಆಸ್ಪತ್ರೆ ಸಿಬ್ಬಂದಿಗೂ ಮಾಹಿತಿ ಇರದ ಕಾರಣ
ಸಾರ್ವಜನಿಕರಿಂದ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ವೈದ್ಯರಿಂದ ಮನವೊಲಿಸಲು ಯತ್ನ ನಡೆಯುತ್ತಿದೆ.


