
ಉಳ್ಳಾಲ: ಮಾನವ ಜೀವನದ ವರ್ಣಾಶ್ರಮ ಧರ್ಮದಲ್ಲಿ ಗೃಹಸ್ಥಾಶ್ರಮಕ್ಕೆ ಅತ್ಯಂತ ಮಹತ್ವವಾದ ಸ್ಥಾನವಿದ್ದು, ಪಾಣಿಗ್ರಹಣ ಮೂಲಕ ಗೃಹಸ್ಥಾಶ್ರಮಕ್ಕೆ ಪ್ರವೇಶಿಸುವುದು ಒಂದು ಪವಿತ್ರವಾದ ಸಂಸ್ಕಾರವಾಗಿದ್ದು, ಇದೊಂದು ದೈವೀ ಕಾರ್ಯ ಮತ್ತು ಯಜ್ಞದಂತೆ ಎಂದು ಮಂಗಳೂರಿನ ಶಾರದಾ ಸಮೂಹ ಸಂಸ್ಥೆಯ ಅಧ್ಯಕ್ಷ ಪ್ರೊ.| ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು.
ಹಿಂದೂ ಸೇವಾ ಪ್ರತಿಷ್ಠಾನ, ಸಮಗ್ರ ಶಿಶು ಶಿಕ್ಷಣ ಸಹಯೋಗ ಬೆಂಗಳೂರು ಇದರ ಆಶ್ರಯದ ಕೇಶವ ಶಿಶು ಮಂದಿರ ಕಿನ್ಯ ಹಾಗೂ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ತಲಪಾಡಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ವಿದ್ಯಾಭಾರತಿ ಕರ್ನಾಟಕ ಪ್ರಾಂತ ಇವರ ಮಾರ್ಗದರ್ಶನದಲ್ಲಿ ಕೇಶವ ಶಿಶು ಮಂದಿರ ಕಿನ್ಯದಲ್ಲಿ ನಡೆದ ದಂಪತಿ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭಾರತದಲ್ಲಿ ಅನಾದಿಕಾಲದಿಂದಲೂ ದಾಂಪತ್ಯ ಜೀವನಕ್ಕೆ ಒಂದು ವಿಶೇಷ ಸ್ಥಾನವಿದೆ. ಆಯುರ್ವೇದದಲ್ಲೂ ಇದಕ್ಕೆ ಮಹತ್ವವಿದೆ. ಭಾರತೀಯ ಸಂಸ್ಕಾರದಲ್ಲಿ ಅತ್ಯಂತ ಪವಿತ್ರ ಕಾರ್ಯದಲ್ಲಿ ನವವಧೂವರರಾಗಿ ಇಲ್ಲಿಗೆ ಬಂದಿದ್ದು, ಇದೊಂದು ಏಕಕಾಲದಲ್ಲಿ ನಡೆಯುವ ಪ್ರಕ್ರಿಯೆ ಅಲ್ಲ. ಹಲವಾರು ಬಾರಿ ಚಿಂತನೆ ನಡೆಸಿದ ಬಳಿಕ ದಾಂಪತ್ಯ ಜೀವನ ಸ್ವೀಕರಿಸಲಾಗುತ್ತದೆ. ಇದೆಲ್ಲ ಭಗವಂತನ ಇಚ್ಛೆಯಾಗಿದ್ದು, ಮಾನಸಿಕವಾಗಿ ಒಪ್ಪಿಗೆಯಾದ ಬಳಿಕವೇ ದೈಹಿಕವಾಗಿ ಒಂದಾಗಲು ಸಾಧ್ಯವಿದ್ದು, ಈ ಎರಡೂ ಕ್ರಿಯೆಗಳು ಸಮರ್ಥವಾದಾಗ ಮಾತ್ರ ದಾಂಪತ್ಯ ಜೀವನ ಸಫಲತೆ ಪಡೆಯಲು ಸಾಧ್ಯ ಎಂದರು.
ದಕ್ಷಿಣ ಮಧ್ಯ ಕ್ಷೇತ್ರೀಯ ಶಿಶು ಶಿಕ್ಷಣ ಸಹ ಪ್ರಮುಖ್ ತಾರಾ ಮಾತಾಜಿ ದಂಪತಿಗಳಿಗೆ ಮಾರ್ಗದರ್ಶನ ನೀಡಿ ಶಿಕ್ಷಣ ಕೇವಲ ಓದು ಬರಹ ಅಲ್ಲ ಸಂಸ್ಕಾರಯುತ ಜೀವನ ಶಿಕ್ಷಣ ನೀಡುವ ಮಾನವನನ್ನು ಮಾಧವನನ್ನಾಇ ಮಾಡುವ ಕಾರ್ಯ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾಭಾರತಿ ಇಂತಹ ಶಿಕ್ಷಣ ನೀಡುವ ನಿಟ್ಟಿನಲ್ಲಿ ದೇಶದಾದ್ಯಂತ 26, 000 ಶಿಕ್ಷಣ ಸಮಸ್ಥೆಗಳು ಮತ್ತು ಕರ್ನಾಟಕದಲ್ಲಿ 460ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮೂಲಕ ಈ ಕಾರ್ಯವನ್ನು ಈ ಕಾರ್ಯ ಮಾಡಲಾಗುತ್ತಿದೆ. ಮಗು ಹುಟ್ಟಿದ ಬಳಿಕ ಅದರ ಲಾಲನೆ ಪಾಲನೆ ಅತೀ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ದಂಪತಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಇಂತಹ ಶಿಕ್ಷಣ ನೀಡಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ| ರವಿಗಣೇಶ್ ಮೋಗ್ರ, ಆಸ್ಪತ್ರೆಯ ತಜ್ಞ ವೈದ್ಯರಾದ ಡಾ| ಅಜಂತ ಶಿವಾಜಿ, ಡಾ| ಆಶಾ ಪಾರ್ವತಿ, ಡಾ| ಶ್ರವ್ಯ, ಡಾ. ಸೌಮ್ಯ ಕೋಟ್ಯಾನ್, ಡಾ| ಪರೀಕ್ಷಿತ್ ನಾವಡ ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಸುನಂದ ಪುರಾಣಿಕ್, ಕೇಶವ ಶಿಶು ಮಂದಿರದ ಅಧ್ಯಕ್ಷ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.
ಕೇಶವ ಶಿಶು ಮಂದಿರದ ವ್ಯವಸ್ಥಾಪಕ ನಾರಾಯಣ ಕಜೆ ಸ್ವಾಗತಿಸಿದರು. ವಿದ್ಯಾಭಾರತಿ ಕರ್ನಾಟಕ ಪ್ರಾಂತ ಕಾರ್ಯದರ್ಶಿ ವಸಂತ ಮಾಧವ ಪ್ರಸ್ತಾವನೆಗೈದರು.ಶಾರದಾ ಆಯುರ್ಧಾಮದ ಸಂಬಂಧಾ„ಕಾರಿ ವಿಕ್ರಮ್ ಕುಂಟಾರ್ ಕಾರ್ಯಕ್ರಮ ನಿರ್ವಹಿಸಿದರು. ಕೇಶವ ಶಿಶು ಮಂದಿರ ಕೋಶಾ„ಕಾರಿ ಚೇತನ್ ಕುಮಾರ್ ಪಿಲಿಕೂರು ವಂದಿಸಿದರು.

