ಉಳ್ಳಾಲ: ಬಸ್-ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಟಯರ್ ಅಂಗಡಿ ಮಾಲೀಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಲಪಾಡಿ ಬಳಿ ಸಂಭವಿಸಿದೆ.
ಉದ್ಯಾವರ ಮಾಡ ನಿವಾಸಿ ತುಳಸಿ ((35) ಗಾಯಾಳು. ತಲಪಾಡಿಯಲ್ಲಿ ಟಯರ್ ಅಂಗಡಿ ಹೊಂದಿರುವ ಇವರು ಮನೆಯಿಂದ ಸ್ಕೂಟರಿನಲ್ಲಿ ಬರುತ್ತಿದ್ದ ಸಂದರ್ಭ ಡಿವೈಡರ್ ಇರುವ ಪ್ರದೇಶದಲ್ಲಿ ತಿರುಗಿಸುತ್ತಿದ್ದಾಗ ಮಂಗಳೂರಿನಿಂದ ಕಾಸರಗೋಡು ಬರುತ್ತಿದ್ದ ಕರ್ನಾಟಕ ಸಾರಿಗೆ ಬಸ್ಸು ಢಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಬಸ್ಸಿನಡಿಗೆ ಸಿಲುಕಿದೆ. ನಾಗುರಿ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.




ಕೂದಲೆಳೆಯ ಅಂತರಲ್ಲಿ ಪಾರಾದ ವಿದ್ಯಾರ್ಥಿ!ಬಸ್ಸು ಡಿಕ್ಕಿ ಹೊಡೆಯುವ ಸಂದರ್ಭದಲ್ಲಿ ಅದೇ ಜಾಗದಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ರಸ್ತೆ ದಾಟುತ್ತಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಡಿಭಾಗ ತಲಪಾಡಿಯಲ್ಲಿ ಸ್ಕೂಲ್ ಬಸ್ಸೊಂದು ಇನ್ನೊಂದು ರಸ್ತೆಗೆ ತಿರುವು ಪಡೆಯುವ ಯತ್ನದಲ್ಲಿದ್ದಾಗ ಕೇರಳ ಕಡೆಯಿಂದ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮಧ್ಯಕ್ಕೆ ನುಗ್ಗಿ ಬಂದಿದೆ. ಇದೇ ವೇಳೆ, ಮತ್ತೊಂದು ರಸ್ತೆಯಿಂದ ಸ್ಕೂಟರ್ ಸವಾರ ತಿರುವು ಪಡೆಯಲು ಬಂದಿದ್ದು ಕೆಎಸ್ಸಾರ್ಟಿಸಿ ಬಸ್ ನೇರವಾಗಿ ಡಿವೈಡರ್ ಮತ್ತು ಸ್ಕೂಟರ್ ಮೇಲೆ ಹರಿದಿದೆ. ಸ್ಕೂಟರ್ ಬಸ್ಸಿನಡಿಗೆ ಸಿಲುಕಿ ಅಪ್ಪಚ್ಚಿಯಾಗಿದೆ.

