UN networks
ಉಳ್ಳಾಲ : ಸಮಾಜದ ಅಭಿವೃದ್ಧಿಗೆ ಸಂಘಟನೆ ಅತ್ಯಂತ ಆವಶ್ಯಕವಾಗಿದ್ದು ಉಳ್ಳಾಲ ವಲಯ ಬಂಟರ ಸಂಘ ಕಳೆದ ಅ„ಕಾರದ ಆವ„ಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿ ಸಾಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿಕೊಳ್ಳುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದು, ಮುಂದಿನ ದಿನಗಳಲ್ಲಿಯೂ ಈ ಸಂಘ ಇನ್ನಷ್ಟು ಎತ್ತರ ಸಮಾಜದ ಎಂದು ಮುಂಬಯಿಯ ವಿಶ್ವಾಸ್ ಕೆಮಿಕಲ್ಸ್ನ ಆಡಳಿತ ನಿರ್ದೇಶಕ ಬೊಳ್ಯಗುತ್ತು ವಿವೇಕ್ ಶೆಟ್ಟಿ ಅಭಿಪ್ರಾಯಪಟ್ಟರು.

ಉಳ್ಳಾಲ ವಲಯ ಬಂಟರ ಸಂಘ ಇದರ ಆಶ್ರಯದಲ್ಲಿ ಆಸೈಗೋಳಿಯಲ್ಲಿರುವ ಬಂಟರ ಭವನದಲ್ಲಿ ನಡೆದ ಬಂಟರ ಸಂಘದ 19ನೇ ವರ್ಷದ ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ರಾಜ್ಯ ಅಲೆಮಾರಿ, ಅರೆ-ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಮೈಸೂರ್ ಇಲೆಕ್ಟ್ರಿಕಲ್ಸ್ ಮತ್ತು ಇಂಡಸ್ಟ್ರೀಸ್ ಬೋರ್ಡ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಸೀತಾರಾಮ ಬಂಗೇರ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.
ಸಂಘದ ಅಭಿವೃದ್ಧಿಯಲ್ಲಿ ಅಧ್ಯಕ್ಷ ಜಿತೇಂದ್ರ ಶೆಟ್ಟಿ ಅವರ ಪರಿಶ್ರಮ ಅಪಾರ ಅವರೊಂದಿಗೆ ಸಮಾಜದ ಎಲ್ಲಾ ಬಾಂಧವರು ಶ್ರಮಿಸಿದ್ದು ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರ ಅಗತ್ಯವಿದ್ದು ಈ ಸಂಘವನ್ನು ಮುಂದಿನ ದಿನಗಳಲ್ಲಿ ಇನ್ನೂ ಎತ್ತರಕ್ಕೆ ಕೊಂಡು ಹೋಗಬೇಕಾಗಿದೆ ಎಂದರು.
ಬಂಟರ ಸಂಘ ಉಳ್ಳಾಲ ವಲಯ ಇದರ ಅಧ್ಯಕ್ಷ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ ಕಳೆದ ನಾಲ್ಕು ವರ್ಷದ ಅವ„ಯಲ್ಲಿ ಬಂಟರ ಭವನ ನಿರ್ಮಾಣದಂತಹ ಮಹತ್ಕಾರ್ಯ ನಡೆಸಲು ಸಮಾಜದ ಎಲ್ಲಾ ಬಾಂದವರ ಸಹಕಾರದಿಂದ ಸಾದ್ಯವಾಗಿದ್ದು ಇಂತಹ ಜವಾಬ್ದಾರಿಯೊಂದಿಗೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾದ್ಯವಾಗಿದ್ದು, ಎಲ್ಲರ ಸಲಹೆ ಮಾರ್ಗದರ್ಶನದೊಂದಿಗೆ ಧನಾತ್ಮಕ ಚಿಂತನೆಯೊಂದಿಗೆ ಈ ಕಾರ್ಯವನ್ನು ಯಶಸ್ವಿಯಾಗಿ ಒಗ್ಗಟ್ಟಿನಿಂದ ನಡೆಸಲು ಸಾಧ್ಯವಾಗಿದೆ ಎಂದರು.
ಉಪಾಧ್ಯಕ್ಷೆ ಚಿತ್ರಾ ಜಿ.ಅಡ್ಯಂತಾಯ, ಕೊಶಾ„ಕಾರಿ ಪುರುಷೋತ್ತಮ್ ಮಾಣಾೈ, ಸಂಘಟನಾ ಕಾರ್ಯದರ್ಶಿ ಜಗದೀಶ್ ರೈ ಬೆಳ್ಮ, ಜೊತೆಕಾರ್ಯದರ್ಶಿ ಅಶೋಕ್ ರೈ ಮಡ್ಯಾರ್ ಮತ್ತು ನಾರಾಯಣ ರೈ ಕೊಣಾಜೆ, ಯುವ ವಿಭಾಗದ ಅಧ್ಯಕ್ಷ ಪ್ರಶಾಂತ್ ಚೌಟ, ಮಹಿಳಾ ವಿಭಾಗದ ಅಧ್ಯಕ್ಷೆ ಶಶಿಕಲಾ.ಎ.ಶೆಟ್ಟಿ, ಸಿರಿ ಸ್ವಸಹಾಯ ಸಂಘಗಳ ಒಕ್ಕೂಟದ ಕಾರ್ಯನಿರ್ವಾಹಕ ನಿರ್ದೇಶಕಿ ಶಾರದಾ.ಎಚ್.ಶೆಟ್ಟಿ ಉಳ್ಳಾಲ
ಬಂಟರ ಸಂಘ ಉಳ್ಳಾಲ ವಲಯದ ನೂತನ ಪದಾ„ಕಾರಿಗಳಾದ ಗೀತಾ ಹೆಗ್ಡೆ, ಜಗದೀಶ್ ಸುಳಾಯ, ಗಣೇಶ್,ಪ್ರದೀಪ್, ಗೀತಾ ತಲಪಾಡಿ, ಸಂಘಟನಾ ಆನಂದ್ ಶೆಟ್ಟಿ ಭಟ್ನಗರ ಉಪಸ್ಥಿತರಿದ್ದರು.
ಸನ್ಮಾನಿತರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್ ಕುಮಾರ್ ರೈ ಬೋಳಿಯಾರ್, ಸೀತಾರಾಮ ಬಂಗೇರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚುನಾವಣಾ„ಕಾರಿ ಮತ್ತು ಸಹ ಚುನಾವಣಾಕಾರಿಯಾಗಿ ಕಾರ್ಯನಿರ್ವಹಿಸಿದ ಸಂಜೀವ ಶೆಟ್ಟಿ ಅಂಬ್ಲಮೊಗರು ಮತ್ತು ದುರ್ಗಾ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ನೂತನ ಅಧ್ಯಕ್ಷರಾದ ಸುರೇಶ್ ಚೌಟ ಮತ್ತು ಪದಾ„ಕಾರಿಗಳು ಮತ್ತು ಕಾರ್ಯಕಾರಿಣಿ ಸದಸ್ಯರನ್ನು ಗೌರವಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷರಾದ ಜಿತೇಂದ್ರ ಶೆಟ್ಟಿ ತಲಪಾಡಿಯವರು ನೂತನ ಅಧ್ಯಕ್ಷರಾದ ಸುರೇಶ್ ಚೌಟ ಅವರಿಗೆ ದಾಕಲೆ ಪುಸ್ತಕ ಮತ್ತು ಕೀ ನೀಡುವ ಮೂಲಕ ಅ„ಕಾರ ಹಸ್ತಾಂತರ ಮಾಡಿದರು.
ನಿಪ್ರಧಾನ ಕಾರ್ಯದರ್ಶಿ ಬಿ.ಮೋಹಂದಾಸ್ ಗಾಂಬೀರ್ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಸುಕೇಶ್ ಚೌಟ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಮೇಲಾಂಟ ವಂದಿಸಿದರು.


