UN networks
ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ಕವಿ ಪ್ರಕಾಶನ ಕವಲಕ್ಕಿ ಇವರ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿಗಳಾದ ಪ್ರೊ.ಸಬಿಹಾ ಭೂಮಿಗೌಡ ಅವರ ಎರಡು ಕೃತಿಗಳ ಅನಾವರಣ ಡಿ.31 ರಂದು ಬೆಳಗ್ಗೆ 11.30 ಕ್ಕೆ ವಿಶ್ವವಿದ್ಯಾನಿಲಯದ ಯು ಆರ್ ರಾವ್ ಸಭಾಂಗಣದಲ್ಲಿ ನಡೆಯಲಿದೆ.

‘ನಾರೀ ನೋಟ’ ವಿಮರ್ಶಾ ಸಂಕಲನ ಮತ್ತು ‘ ಈವರೆಗಿನ ಕವಿತೆಗಳು’ ಕವಿತಾ ಸಂಕಲನವನ್ನು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ.ಆರ್ ಸುನಂದಮ್ಮ ಬಿಡುಗಡೆಗೊಳಿಸಲಿದ್ದಾರೆ. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಪ್ರೊ. ಅಭಯಕುಮಾರ್ ಕೌಕ್ರಾಡಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ರೇಖಾ ಬನ್ನಾಡಿ, ಕುಂದಾಪುರ ಹಾಗೂ ಡಾ. ಜಯಪ್ರಕಾಶ್ ಶೆಟ್ಟಿ, ತೆಂಕನಿಡಿಯೂರು ಕೃತಿ ಅವಲೋಕನ ನಡೆಸಲಿದ್ದಾರೆ. ಲೇಖಕಿ ಪ್ರೊ ಸಬಿಹಾ ಭೂಮಿಗೌಡ ಉಪಸ್ಥಿತರಿರುವರು ಎಂದು ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ


