UN networks
ಮಂಗಳೂರು: ಬೆಂಗಳೂರಿಗೆ ತೆರಳಲು ದೇರಳಕಟ್ಟೆಯಿಂದ ಏರ್ ಪೋರ್ಟ್ ಗೆ ಹೋಗುತ್ತಿದ್ದ ಮಾಜಿ ಸಚಿವ ಯು.ಟಿ.ಖಾದರ್ ಕಾರನ್ನು ಅಪರಿಚಿತರು ಫಾಲೋ ಮಾಡಿಕೊಂಡು ಬಂದ ಘಟನೆ ನಡೆದಿದೆ.

ಮಂಗಳೂರಿನ ದೇರಳಕಟ್ಟೆಯಿಂದ ನಂತೂರು ಸರ್ಕಲ್ ವರೆಗೂ ಬೈಕ್ ನಲ್ಲಿ ಅಪರಿಚಿತರು ಸುಮಾರು ಹತ್ತು ಕಿ.ಮೀ ವರೆಗೂ ಖಾದರ್ ಕಾರಿನ ಹಿಂದೆ ಬಂದಿದ್ದು
ಅನುಮಾನ ಬಂದು ಖಾದರ್ ಎಸ್ಕಾರ್ಟ್ ವಾಹನದ ಪೊಲೀಸರು ನಂತೂರು ಬಳಿ ಎಸ್ಕಾರ್ಟ್ ವಾಹನ ನಿಲ್ಲಿಸಿದ್ದಾರೆ.
ತಕ್ಷಣ ಎಚ್ಚೆತ್ತ ಬೈಕ್ ಸವಾರರು ಬೈಕ್ ತಿರುಗಿಸಿ ಪರಾರಿಯಾಗಿದ್ದಾರೆ.
ಇದೀಗ ಖಾದರ್ ಎಸ್ಕಾರ್ಟ್ ವಾಹನದ ಎಎಸ್ಸೈ ಸುಧೀರ್ ಮಾಹಿತಿಯಂತೆ ಪೊಲೀಸರಿಂದ ಅಪರಿಚಿತರಿಗಾಗಿ ಹುಡುಕಾಟ ನಡೆಯುತ್ತಿದ್ದು
ಬೈಕ್ ನಂಬರ್ ನೋಟ್ ಮಾಡಿಕೊಂಡು ಪೊಲೀಸರು ವಿಳಾಸ ಪತ್ತೆಗಾಗಿ ಹುಡುಕಾಟು ನಡೆಸುತ್ತಿದ್ದಾರೆ.
ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಪೊಲೀಸರಿಂದ ತನಿಖೆ ನಡೆಸಲಾಗುತ್ತಿದೆ.


