UN Networks
ಕೋಟೆಕಾರು : ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘವು 2019-2020 ನೇ ಸಾಲಿನಲ್ಲಿ 439.23 ಕೋಟಿರೂ. ಗಳ ವ್ಯವಹಾರವನ್ನು ನಡೆಸಿ 1.45ಕೋಟಿ ನಿವ್ವಳ ಲಾಭಾಂಶ ಗಳಿಸಿ ಪ್ರಗತಿ ಪ್ರಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಹೇಳಿದರು.
ಕೋಟೆಕಾರುಸಂಘದ ಪ್ರಧಾನ ಕಛೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ 2019-20 ನೇ ಸಾಲಿನ ಅಂತ್ಯಕ್ಕೆ ಸಂಘವು “ಎ” ತರಗತಿಯ 7157 ಸದಸ್ಯರನ್ನು ಹೊಂದಿದ್ದು 2.09 ಕೋಟಿ ರೂಗಳ ಪಾಲು ಬಂಡವಾಳವನ್ನು ಹೊಂದಿರುತ್ತದೆ. ವರದಿ ವರ್ಷದಲ್ಲಿರೂ 211.04 ಕೋಟಿ ಠೇವಣಿ ಸಂಗ್ರಹಿಸಿ 202.08 ಕೋಟಿ ಠೇವಣಿಯನ್ನು ಪಾವತಿಸಿ, ವರ್ಷಾಂತ್ಯಕ್ಕೆ ರೂ 101.85 ಕೋಟಿ ಠೇವಣಿ ಹೊಂದಿರುತ್ತದೆ. ಠೇವಣಿ ಸಂಗ್ರಹದಲ್ಲಿಗುರಿ ವಿೂೀರಿದ ಸಾಧನೆಯನ್ನು ಮಾಡಿದೆ. ಕಳೆದ ವರ್ಷಾಂತ್ಯಕ್ಕೆ ಹೋಲಿಸಿದರೆ ಠೇವಣಿ ಸಂಗ್ರಹದಲ್ಲಿ 8.95 ಕೋಟಿ ರೂಗಳ ಪ್ರಗತಿಯನ್ನು ಸಾಧಿಸಲಾಗಿದೆ.ವರದಿ ಸಾಲಿನಲ್ಲಿ 110.74 ಕೋಟಿ ಸಾಲ ವಿತರಿಸಲಾಗಿದ್ದು, 103.57 ಕೋಟಿ ಸಾಲ ವಸೂಲಿಯಾಗಿದೆ.

ವರ್ಷಾಂತ್ಯಕ್ಕೆ 72.72 ಕೋಟಿ ಹೊರ ಬಾಕಿ ಸಾಲವಿರುತ್ತದೆ. ಸಾಲ ವಸೂಲಾತಿಯಲ್ಲಿ ಶೇ.96% ಪ್ರಗತಿಯನ್ನು ಸಾಧಿಸಲಾಗಿದೆ. ಸಂಘದ ಆಡಿಟ್ ವರ್ಗೀಕರಣ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ “ಎ” ತರಗತಿಯನ್ನು ಪಡೆದಿದೆ. ಹೊರ ಬಾಕಿ ಸಾಲಕ್ಕೆ ಹೋಲಿಸಿದರೆ ಸುಸ್ತಿ ಸಾಲವು 4% ಆಗಿದೆ. ಸಂಘÀವು ವಿವಿಧ ಹಣಕಾಸು ಸಂಸ್ಥೆಗಳಲ್ಲಿ 39.25 ಕೋಟಿ ರೂಗಳನ್ನು ಠೇವಣಿಯಾಗಿ ವಿನಿಯೋಗಿಸಲಾಗಿದೆ. ಸಂಘವು 7.98 ಕೋಟಿ ರೂಗಳ ವಿವಿಧ ರೀತಿಯ ನಿಧಿಯನ್ನು ಹೊಂದಿದೆ. ಸಂಘವು ನಿರಂತರವಾಗಿ ಹಲವು ವರ್ಷಗಳಿಂದ ತನ್ನ ಷೇರುದಾರರಿಗೆ ಶೇ 25% ಡಿವಿಡೆಂಡ್ ನೀಡುತ್ತ ಬಂದಿದೆ. ಈ ಬಾರಿಯೂ ಶೇ 25% ಡಿವಿಡೆಂಡ್ ನೀಡಲು ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧರಿಸಿದೆ. ಮಂಜೂರಾತಿಗಾಗಿ ಡಿ. 19 ರಂದು ನಡೆಯುವ ಮಹಾಸಭೆಯ ಮುಂದೆ ಮಂಡಿಸಲಾಗುವುದು ಎಂದರು. ಇತರ ಸೇವೆಗಳು:-
ಸಘದ ಪ್ರಧಾನ ಕಚೇರಿಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ NFT/RTGS ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಸಂಘದಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಇದರಿಂದ ಸಂಘದ ಗ್ರಾಹಕರು ಯಾವುದೇ ಶಾಖೆಯಲ್ಲಿ ವ್ಯವಹಾರ ನಡೆಸಬಹುದಾಗಿದೆ. ರೈತರಿಗೆ ಸರಕಾರದಿಂದ ಸಿಗುವಂತಹ ಸಾಲಮನ್ನಾ, ಬಡ್ಡಿರಹಿತ ಬೆಳೆಸಾಲ ಮತ್ತು ಶೇ 3 ರ ಬಡ್ಡಿದರದಲ್ಲಿ ಮಧ್ಯಮವಧಿ ಕೃಷಿ ಅಭಿವೃದ್ದಿ ಸಾಲಗಳನ್ನು ನೀಡಲಾಗುತ್ತಿದೆ. ಕೊರೊನಾ ಸಂದರ್ಭದಲ್ಲಿ ಸಂಘವು ‘ಮನೆ ಬಾಗಿಲಿಗೆ ಬ್ಯಾಂಕಿಂಗ್’ ಎಂಬ ಘೋಷ ವಾಕ್ಯದೊಂದಿಗೆ ಗ್ರಾಹಕರಿಗೆ ಅವರ ಮನೆ ಬಾಗಿಲಿಗೆ ಅಪೇಕ್ಷಿಸಿದ ಸೇವೆಯನ್ನು ನೀಡಿದೆ. ಸಂಘದ ಉಳ್ಳಾಲ-ಪೆರ್ಮನ್ನೂರು ಶಾಖೆಯಲ್ಲಿ 2 ಪಡಿತರ ಕೇಂದ್ರಗಳಿದ್ದು ಇದರಲ್ಲಿಂPಐ/ಃPಐಸೇರಿಒಟ್ಟು 5713 ಪಡಿತರ ಚೀಟಿಗಳಿವೆ. ಸರಿಯಾದ ಸಮಯಕ್ಕೆ ಪಡಿತರ ವಿತರಣೆ ಮಾಡಲಾಗುತ್ತಿದೆ. ಸಂಘದ ಪ್ರಧಾನ ಕಚೇರಿಯಲ್ಲಿ ರೈತರ ಅನುಕೂಲಕ್ಕಾಗಿ ರಸಗೊಬ್ಬರ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.ಮುಂದಿನ ಯೋಜನೆಗಳು: ಕೋಟೆಕಾರು ಬೀರಿಯರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ 0.38 ಎಕ್ರೆ ಜಮೀನು ಸಂಘದ ವಶದಲ್ಲಿದ್ದು, ಈ ಜಮೀನಿನಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ ಮಾಡುವ ಕುರಿತು ಉದ್ದೇಶಿಸಲಾಗಿದೆ.ಸಂಘದ ಕೋಟೆಕಾರು ಶಾಖೆಯಲ್ಲಿಗ್ರಾಹಕರ ಅನುಕೂಲಕ್ಕಾಗಿ ವ್ಯವಹಾರದ ಸಮಯವನ್ನು ವಿಸ್ತರಿಸುವ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ನಡೆಸುವ ಚಿಂತನೆ ಮಾಡಲಾಗಿದೆ. ಪ್ರಶಸ್ತಿ : ಸಂಘವು 2019-2020 ನೇ ಸಾಲಿನಲ್ಲಿ ಅವಿಭಜಿತ ದ.ಕ -ಉಡುಪಿ ಜಿಲ್ಲೆಗಳ ವ್ಯವಸಾಯ ಸೇವಾ ಸಹಕಾರ ಸಂಘಗಳ ಲೆಕ್ಕ ಪರಿಶೋಧನೆಯ’ಂ’ ವಿಭಾಗದಲ್ಲಿಅತ್ಯುತ್ತಮ ಸಾಧನೆಗೆಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಬುಸಾಲಿ ಕೆ.ಬಿ, ನಿರ್ದೇಶಕರಾದ ಗಂಗಾಧರ.ಯು, ಕೆ.ಕೃಷ್ಣಪ್ಪ ಸಾಲಿಯಾನ್, ಉದಯ ಕುಮಾರ್ ಶೆಟ್ಟಿ, ಅರುಣ್ ಕುಮಾರ್, ರಾಘವ ಆರ್. ಉಚ್ಚಿಲ್, ರಾಘವ ಉಚ್ಚಿಲ್, ಪದ್ಮಾವತಿ ಎಸ್ ಶೆಟ್ಟಿ, ಸುರೇಖ ಚಂದ್ರಹಾಸ, ನಾರಾಯಣ ತಲಪಾಡಿ, ಬಾಬು ನಾಯ್ಕ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ ಉಳ್ಳಾಲ್ ಉಪಸ್ಥಿತರಿದ್ದರು.


