UN NETWORKS
ತೊಕ್ಕೊಟ್ಟು : ಪರಿಸರ ರಕ್ಷಣೆ ನಿಟ್ಟಿನಲ್ಲಿ ತೊಕ್ಕೊ ಟ್ಟಿನಲ್ಲಿ ದಾಳಿ ನಡೆಸಿದ್ದು ಕೃತಕ ನೆರೆ ಸೃಷ್ಟಿಸಿ ಸೊಳ್ಳೆಗಳ ಉತ್ಪಾದನೆಗೆ ಕೊಡುಗೆ ನೀಡುತ್ತಿರುವ ಸ್ಮಾರ್ಟ್ ಸಿಟಿ ಕಟ್ಟಡದ ಮಾಲೀಕರಿಗೆ ದಂಡ ವಿಧಿಸಿದ್ದಾರೆ.

ಉಳ್ಳಾಲ ನಗರಸಭಾ ವ್ಯಾಪ್ತಿ ಯಲ್ಲಿ ಡೆಂಗ್ಯೂ ಸಹಿತ ಹಲವರು ಜ್ವರದಿಂದ ಬಳಲಿದ್ದು ಇದೇ ವೇಳೆ ತೊಕ್ಕೊಟ್ಟುವಿನಲ್ಲಿರುವ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಸ್ವಚ್ಛತೆ ಪಾಲಿಸುತ್ತಿಲ್ಲ ಎನ್ನುವ ಆರೋಪವೂ ಕೇಳಿ ಬಂದಿತ್ತು. ಇಲ್ಲಿನ ಹಲವು ಕಾರ್ಮಿಕರು ಜ್ವರಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಸ್ವಚ್ಛತೆ ಪಾಲಿಸದ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯು.ಟಿ. ಖಾದರ್ ಅವರೇ ಅಧಿಕಾರಿಗಳಿಗೆ ಸೂಚಿಸಿ ದ್ದರು.
ಅವರ ಸೂಚನೆ ಪಾಲಿಸಲು ಮುಂದಾದ ನಗರಸಭೆಯ ಅಧಿಕಾರಿ ಗಳು ತೊಕ್ಕೊಟ್ಟಿನಲ್ಲಿ ಸೊಳ್ಳೆ ಉತ್ಪಾದನೆ ಸಹಕಾರ ನೀಡುತ್ತಿದ್ದ ಹಿಂದೂಸ್ತಾನ್ ಬಾವ ಬಿಲ್ಡರ್ಸ್‍ನ ಸ್ಮಾರ್ಟ್ ಸಿಟಿ ಕಟ್ಟಡದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು. ಬುಧವಾರ ಮತ್ತೊಮ್ಮೆ ಕಾರ್ಯಾಚರಣೆ ನಡೆಸಲಾಗಿದ್ದು ಈ ಸಂದರ್ಭ ಹಿಂದಿಗಿಂತಲೂ ಹೆಚ್ಚು ನೀರು ಕಟ್ಟಡದ ಅಡಿಭಾಗದಲ್ಲಿ ನಿಂತಿದ್ದನ್ನು ಕಂಡು ಹರಿಹಾಯ್ದ ಪೌರಾಯುಕ್ತೆ ವಾಣಿ ವಿ.ಆಳ್ವ ಅವರ ನೇತೃತ್ವದ ತಂಡ ಕಟ್ಟಡಕ್ಕೆ 25 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.



1 Comment
ಮೊದಲು ಉಳ್ಳಾಲ ನಗರ ಸಭೆಗೆ ದಂಡ ಹಾಕಿ . ಲಂಚ ಪಡೆದು ಬಹುಮಹಡಿ ಕಟ್ಟಡ ಕ್ಕೆ ಲೈಸೆನ್ಸ್ ನೀಡ್ತಿರಲ್ಲ ಅದನ್ನು ಸರಿಪಡಿಸಿ.. ಡ್ರೈನೇಜ್ ವ್ಯವಸ್ಥೆ ಮಾಡದೇ ಹೊಲಸು ನೀರನ್ನು ದಾರಿಗೆ ಬಿಡಲು ಅನುಮತಿ ಕೊಡುವುದು ನೀವೇ ಮತ್ತೆ ದಂಡ ಹಾಕ್ಲಿಕ್ಕೆ ಬಂದು ಲಂಚ ಪಡೆದು ಜೇಬು ತುಂಬಿಸಿಕೊಂಡು ಹೋಗುವುದು ನೀವೇ.. ನಿಮ್ಮಂತಹ ಭ್ರಷ್ಟರಿಂದ ಈ ದೇಶ ಹಾಳಾಗಿ ರೋಡು