UN NETWORKS
ಉಳ್ಳಾಲ : ಸೋಮೇಶ್ವರ ಬಳಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆಯೊಂದಕ್ಕೆ ದಾಳಿ ನಡೆಸಿರುವ ಪೊಲೀಸರು ಇಬ್ಬರು ಮಹಿಳಾ ಪಿಂಪ್ಗಳನ್ನು ಬಂಧಿಸಿದ್ದು ಯುವತಿಯರನ್ನು ಪೂರೈಸುತ್ತಿದ್ದ ಒಬ್ಬಾಕೆ ತಲೆಮರೆಸಿಕೊಂಡಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ಬಂಧಿತ ಪಿಂಪ್ಗಳನ್ನು ಮಂಜೇಶ್ವರ ನಿವಾಸಿ ಅರುಂಧತಿ, ಜಪ್ಪಿನಮೊಗರು ನಿವಾಸಿ ಸರಸ್ವತಿ ಬಂಧಿತ ಪಿಂಪ್ಗಳಾಗಿದ್ದು,ಬೆಂಗಳೂರಿನಿಂದ ಯುವತಿಯರನ್ನು ಪೂರೈಕೆ ಮಾಡುವ ರಂಜಿತಾ ತಲೆಮರೆಸಿಕೊಂಡಿದ್ದು, ವೇಶ್ಯಾವಾಟಿಕೆಯಲ್ಲಿ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಇದರೊಂದಿಗೆ ಮೂವರು ಗ್ರಾಹಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಸೋಮೇಶ್ವರ ಬಳಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿಯಂತೆ ಸಿಸಿಬಿ ಪೊಲೀಸರು ಉಳ್ಳಾಲ ಪೊಲೀಸರೊಂದಿಗೆ ದಾಳಿ ನಡೆಸಿದ್ದು, ಈ ಸಂದರ್ಭದಲ್ಲಿ ಇಬ್ಬರು ಮಹಿಳಾ ಪಿಂಪ್ಗಳು ಸೇರಿದಂತೆ ಮೂವರು ಗ್ರಾಹಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪಿಂಪ್ಗಳ ಮೇಲೆ ಪ್ರಕರಣ ದಾಖಲಾಗಿಲ್ಲ.
ಮನೆ ಸ್ವಚ್ಛಗೊಳಿಸಲು ಕೀ ಪಡೆದಿದ್ದರು : ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮಾಲಿಕ ನಿಧನರಾಗಿ ಹಲವು ವರ್ಷಗಳು ಕಳೆದಿದ್ದು ಆವರ ಸ್ನೇಹಿತ ಮಾಧವ ಎಂಬವರು ಮನೆಯನ್ನು ನೋಡಿಕೊಳ್ಳುತ್ತಿದ್ದರು. ಈ ಮನೆಯಲ್ಲಿ ಬಾಡಿಗೆಗಿದ್ದವರು ತಿಂಗಳ ಹಿಂದೆ ಮನೆ ಖಾಲಿ ಮಾಡಿದ್ದು ಎರಡು ದಿನಗಳ ಹಿಂದೆ ಮಂಜೇಶ್ವರ ನಿವಾಸಿ ಅರುಂಧತಿ ಮನೆ ಬಾಡಿಗೆಗೆ ಪಡೆದಿದ್ದು, ಸಪ್ಟೆಂಬರ್ ತಿಂಗಳಿನಿಂದ ವಾಸ ಮಾಡುವ ನಿಟ್ಟಿನಲ್ಲಿ ಮನೆ ಸ್ವಚ್ಛತೆಗೆಂದು ಕೀ ಪಡೆದು ವೇಶ್ಯಾವಾಟಿಕೆ ಆರಂಬಿಸಿದ್ದಳು.


