UN NETWORKS
ಬಗಂಬಿಲ : ದ.ಕ.ಜಿಲ್ಲೆಯ ದೇವಸ್ಥಾನಗಳಲ್ಲಿ ಬೆಳ್ಳಿಯ ಪಲ್ಲಕ್ಕಿ ಇದೆಯಾದರೂ ಭಜನಾ ಮಂದಿರದಲ್ಲಿ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾಗಿದೆ ಎಂದು ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.

ಸೋಮವಾರ ಬಗಂಬಿಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಶ್ರೀ ಕೃಷ್ಣ ಕನ್ಮಾಷ್ಠಮಿಯ ಶೋಭಾಯಾತ್ರೆಗೆ 15 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ರಜತ ಪೀಠ, ಮಂಟಪ, ಬೆಳ್ಳಿ ಪ್ರತಿಮೆಯ ಸಮರ್ಪಣಾ ಸಮಾರಂಭದಲ್ಲಿ ಮಾತನಾಡಿದರು. ಕುಂಪಲದಲ್ಲಿ ಬಾಲಕೃಷ್ಣ ಮಂದಿರ ನಿರ್ಮಾಣ ಆಗುವಲ್ಲಿ ಸತ್ಯನಾರಾಯಣ ಮಂದಿರದ ಕೊಡುಗೆ ಅಪಾರ. ಈ ಮೂಲಕ ಸಂಘಟನೆಗಳು ಒಂದಾಗಿದ್ದು 28ನೇ ವರ್ಷದ ಮೊಸರುಕುಡಿಕೆ ಉತ್ಸವದ ಪ್ರಯುಕ್ತ ಬಹುದಿನಗಳ ಆಶಯದಂತೆ 15 ಲಕ್ಷ ವೆಚ್ಚದಲ್ಲಿ ಬೆಳ್ಳಿಯ ಮಂಟಪ ನಿರ್ಮಾಣವಾಗಿದ್ದು ಇದಕ್ಕೆ ಭಕ್ತರ ಸಹಕಾರ, ದೇವರ ಆಶೀರ್ವಾದ ಕಾರಣ ಎಂದು ತಿಳಿಸಿದರು.
ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ವಾಣಿ ವಿ.ಆಳ್ವ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶ್ರೀ ದುರ್ಗಾಪರಮೇಶ್ವರಿ ಮಂದಿರದ ಪ್ರಧಾನ ಅರ್ಚಕ ಭವಾನಿ ಶಂಕರ್ ಸಾಂತಿ, ಬಾಲಕೃಷ್ಣ ಮಂದಿರದ ಮುಖ್ಯ ಅರ್ಚಕ ಉಗ್ಗಪ್ಪ ಕುಲಾಲ್, ಸತ್ಯ ನಾರಾಯಣ ನಾರಾಯಣ ಮಂದಿರದ ಗೌರವಾಧ್ಯಕ್ಷ ದಿವಾಕರ್ ಬಗಂಬಿಲ, ಮಹಾಪೋಷಕ ಪ್ರವೀಣ್ ಸುವರ್ಣ ಬಗಂಬಿಲ, ಪ್ರಗತಿಪರ ಕೃಷಿಕ ರಮಾನಾಥ್ ಪೂಂಜ, ಬಾಲಕೃಷ್ಣ ಮಂದಿರದ ಸಲಹೆಗಾರ ಉಮೇಶ್ ಗಾಂಭೀರ್, ಮಂಟಪ ನಿರ್ಮಾಣ ಸಮಿತಿ ಸಂಚಾಲಕ ಜಗದೀಶ್ ಆಚಾರ್ಯ, ಉದ್ಯಮಿ ಲಕ್ಷ್ಮಣ್ ಕಿರೋಡಿಯನ್, ವಾಸ್ತುಶಿಲ್ಪಿ ಜಯಪ್ರಕಾಶ್ ಆಚಾರ್ಯ, ಸೋಮೇಶ್ವರ ಗ್ರಾ.ಪಂ.ಅಧ್ಯಕ್ಷ ರಾಜೇಶ್ ಉಚ್ಚಿಲ್, ಮಾಜಿ ಅಧ್ಯಕ್ಷ ಮೋಹನ್ ಶೆಟ್ಟಿ, ಸತ್ಯನಾರಾಯಣ ಮಂದಿರದ ಅಧ್ಯಕ್ಷ ಗಣೇಶ್ ಬಗಂಬಿಲ, ಪ್ರಧಾನ ಅರ್ಚಕ ನಾರಾಯಣ್, ಉದ್ಯಮಿ ಚಂದ್ರಹಾಸ ಪಂಡಿತೌಸ್, ಗಣೇಶ್ ಕಾಪಿಕಾಡ್, ಗೋಪಿನಾಥ್ ಬಗಂಬಿಲ ಇನ್ನಿತರರು ಉಪಸ್ಥಿತರಿದ್ದರು. ಪ್ರವೀಣ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.


