UN NETWORKS
ಜಪ್ಪಿನಮೊಗರು : ಮಂಗಳೂರಿನ ಬಲ್ಯಾಯ ಯಾನೆ ಕಣಿಶನ್ ಮಹಾಜನ ಸಂಘದ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ಸಹಯೋಗದೊಂದಿಗೆ ಜಪ್ಪಿನಮೊಗರುವಿನ ಬಲ್ಯಾಯ ಭವನದಲ್ಲಿ `ಆಟಿದ ಕೂಟ’ ಕಾರ್ಯಕ್ರಮವು ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಸಮಾಜದ ಮುಖಂಡ ಚಂದ್ರಶೇಖರ ಬಲ್ಯಾಯ ಪಾತೂರು ಹಾಗೂ ಭಾಸ್ಕರ ಬಲ್ಯಾಯ ಅಸೈಗೋಳಿ ಅತಿಥಿಗಳಾಗಿ ಭಾಗವಹಿಸಿ, ಆಟಿಕೂಟದ ಬಗ್ಗೆ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ದಿವಾಕರ್ ಕೆ. ಪಂಡಿತ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ವೇದಿಕೆಯ ಸಂಚಾಲಕಿ ಗೀತಾ ಅರುಣ್ ಕುಮಾರ್ ಹಾಗೂ ಯುವ ವೇದಿಕೆ ಸಂಚಾಲಕ ಡಾ. ರಾಜೇಶ್ ಬಲ್ಯಾಯ ಕೆಂಬಾರ್, ಗೌರವಾಧ್ಯಕ್ಷ ಹರಿಶ್ಚಂದ್ರ ಅತ್ತಾವರ, ನಿರ್ದೇಶಕರುಗಳಾದ ಭಾಸ್ಕರ್ ಜಿ.ಬಿ. ಕೆಂಬಾರ್, ಭಾರ್ಗವ ಬಲ್ಯಾಯ ಅಳಪೆ, ಚಂದ್ರಹಾಸ ಟೈಲರ್ ತುಪ್ಪೆಕಲ್ಲು, ಜಯಲಕ್ಷ್ಮೀ ಭಾಸ್ಕರ್ ಕೆಂಬಾರ್ ಉಪಸ್ಥಿತರಿದ್ದರು. ಸಂಘದ ವಕ್ತಾರ ಸುರೇಶ್ ಕುಮಾರ್ ಮಾರಿಪಳ್ಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಯಪ್ರಕಾಶ್ ಪಂಡಿತ್ ಬಬ್ಬುಕಟ್ಟೆ ಸ್ವಾಗತಿಸಿದರು. ಮಲ್ಲಿಕಾ ಭಾನುಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ಉಮಾಲಕ್ಷ್ಮೀ ಕುಡುಪು ವಂದಿಸಿದರು.
ಕಾರ್ಯಕ್ರಮದಲ್ಲಿ ಸುಮಾರು 34ಬಗೆಯ ಆಟಿಯ ವಿವಿಧ ಖಾದ್ಯವನ್ನು ಉಣಬಡಿಸಲಾಯಿತು. ನಿಧಿಪ್ರಿಯ ಪಡೀಲ್ ಆಟೋಟ ಸ್ಪರ್ಧೆ ಮತ್ತು ಮನೋರಂಜನಾ ಕಾರ್ಯಕ್ರಮ ನಿರೂಪಿಸಿದರು.


