UN NETWORKS
ಕೋಟೆಕಾರು : ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಿಣಾಮ್ನಾಯ ಶ್ರೀ ಶೃಂಗೇರಿ ಶಾರದಾ ಪೀಠಾಧೀಶ್ವರ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿಯ ತತ್ಕರಕಮಲಸಂಜಾತ ಶ್ರೀ ವಿಧುಶೇಖರ ಭಾರತೀ ಸ್ವಾಮಿಯ 27ನೇ ವರ್ಧಂತ್ಯುತ್ಸವ ಕೋಟೆಕಾರಿನಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದ ಪ್ರಯುಕ್ತ ಬೆಳಗ್ಗೆ ಕೋಟೆಕಾರು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಮಹಾಗಣಪತಿ ಹೋಮ, ಆಯುಷ್ಯ ಹೋಮ, ಮಧ್ಯಾಹ್ನ 12.30ರಿಂದ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರೊ. ಪಾರೆಂಕಿ ಶಿವಾಜಿ ಅಧಿಕಾರಿ ಶ್ರೀ ಸ್ವಾಮಿಗಳಿಗೆ ಅಭಿನಂದನೆ ಸಮರ್ಪಿಸಿ ಮಾತನಾಡಿದರು. ಉತ್ಸವ ಸಮಿತಿ ಗೌರವ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು, ಕಾಪಿಕಾಡು ಉಮಾಪುರಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ಮೊಕ್ತೇಸರ ಟಿ. ರಘುರಾಮ ಶೆಟ್ಟಿ, ಹೊಸದುರ್ಗದ ರಾಮಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ಎಚ್. ಬಿ. ಪ್ರಭಾಶಂಕರ ರಾವ್,
ಮಂಗಳೂರು ಹಾಗೂ ಕಾಸರಗೋಡು ಆರ್ಯ ಯಾನೆ ಮರಾಠ ಸಮಾಜ ಸಂಘದ ಕಾರ್ಯದರ್ಶಿ ರಾಜೇಶ್ ಪಟೇಲ್, ಕೊಲ್ಯ ಕುಲಾಲ ಸಂಘದ ನಿರ್ದೇಶಕ ವಿಶ್ವನಾಥ ಬೈಲಮೂಲೆ, ಚಂದ್ರಶೇಖರ್ ಉಚ್ಚಿಲ್, ಪುರುಷೋತ್ತಮ ಅಂಚನ್ ಹಾಗೂ ಚಂದ್ರಹಾಸ ಅಡ್ಯಂತಾಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಶಿಕ್ಷಕ ಕೊಣಾಜೆ ಶಂಕರ ಭಟ್ಟ, ಖ್ಯಾತ ಯಕ್ಷಗಾನ ಕಲಾವಿದ ಪುತ್ತೂರು ಚಂದ್ರಶೇಖರ ಹೆಗ್ಡೆ, ಉದ್ಯಮಿ ಗಣೇಶ್ ಕನೀರುತೋಟ, ಮಂಗಳೂರಿನ ನವಭಾರತ್ ರಾತ್ರಿ ಶಾಲಾ ಸ್ಥಾಪಕ ಎಂ. ರಾಮಚಂದ್ರ ಹಾಗೂ ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾಯ್ ಅವರನ್ನು ಸನ್ಮಾನಿಸಲಾಯಿತು. ಕೋಟೆಕಾರು ಶ್ರೀ ಶಂಕರ ಮಠದ ಧರ್ಮಾಧಿಕಾರಿ ಬೊಳ್ಳಾವ ಸತ್ಯಶಂಕರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಮಧುಸೂದನ ಆಯರ್ ಸ್ವಾಗತಿಸಿದರು.ಆನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾರಾಮ ಕೊಪ್ಪಲು ವಂದಿಸಿದರು.


