UN NETWORKS
ಉಳ್ಳಾಲ : ನೆರೆಯಿಂದಾಗಿ ಸಾವಿರಾರು ಕುಟುಂಬಗಳು ಬಹಳಷ್ಟು ತೊಂದರೆಗೆ ಒಳಟ್ಟಿದ್ದು ಕೃಷಿಭೂಮಿ, ಆಸ್ತಿ, ಕಾಪಡಿಕೊಂಡು ಬಂದಿದ್ದು ದಾಖಲೆ ಪತ್ರಗಳು ಸೇರಿದಂತೆ ಬದುಕು ಹೈರಾಣಾಗುವಂತೆ ಮಾಡಿದೆ. ನೆರೆಯಲ್ಲಿ ಕೆಲವರು ಕಡಿಮೆ, ಇನ್ನು ಕೆಲವರಿಗೆ ಹೆಚ್ಚು ನಷ್ಟವುಂಟಾಗಿದ್ದು ಅದರ ಬಗ್ಗೆ ಸದ್ಯಕ್ಕೆ ಲೆಕ್ಕ ಹಾಕುವುದು ಕಷ್ಟದ ಕೆಲಸ. ಹಾಗಾಗಿ ಸಂತ್ರಸ್ತರು ನೆಮ್ಮದಿಯ ಜೀವನ ಸಾಗಿಸಲು ಅಗತ್ಯವಿರುವ ವಸ್ತುಗಳನ್ನು ಪೂರೈಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.


ಉಳ್ಳಾಲ ನಗರಸಭೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ನೆರೆ ಸಂತ್ರಸ್ಥರಿಗೆ ಆಹಾರ ಕಿಟ್ ವಿತರಿಸಿ ಅವರು ಮಾತನಾಡಿದರು. ನಾವು ನೀಡುತ್ತಿರುವ ಸಣ್ಣ ಮಟ್ಟದ ಪರಿಹಾರ ಕಿಟ್ ನಿಜವಾಗಿ ತೊಂದರೆ, ಕಷ್ಟ, ನಷ್ಟಕ್ಕೊಳಗಾದವರು ಮಾತ್ರವೇ ಪಡೆಯಬೇಕು. ಅದರ ದುರುಪಯೋಗ ತಡೆಯುವ ನಿಟ್ಟಿನಲ್ಲಿ ಅ„ಕಾರಿಗಳಿಗೆ ಸಹಕಾರ ನೀಡುವ ಮೂಲಕ ಅರ್ಹರಿಗೆ ಕಿಟ್ ದೊರಕುವಂತೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ನೆರೆಪೀಡಿತ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಬೇಕಿದ್ದು ಅದಕ್ಕಾಗಿ ಪ್ಯಾಕೆಟ್ ಕ್ಲೋರಿನ್ ಉಚಿತವಾಗಿ ನೀಡಲಾಗುತ್ತಿದೆ. ವೈದ್ಯರ ತಂಡ ಸಿದ್ಧವಾಗಿ ನಿಂತಿದೆ ಎಂದು ಹೇಳಿದರು.
ಉಳ್ಳಾಲದಲ್ಲಿ ಸುಸಜ್ಜಿತ ಆಸ್ಪತ್ರೆ: ಉಳ್ಳಾಲದ ಜನರ ಸುದೈವ ಅಂದರೆ ಉಳ್ಳಾಲದ ಹೃದಯ ಭಾಗದಲ್ಲಿ ಸುಸಜ್ಜಿತ ಆಸ್ಪತ್ರೆ ಇರುವುದು ಇಲ್ಲಿನ ಜನರ ಯೋಗ. ಐವರು ನುರಿತ ವೈದ್ಯರು ಆಸ್ಪತ್ರೆಯಲ್ಲಿದ್ದು, ಆಪರೇಶನ್ ಥಿಯೇಟರ್ ಮತ್ತು ಲ್ಯಾಬ್ ಖಾಸಗಿ ಆಸ್ಪತ್ರೆಯಲ್ಲೂ ಇಲ್ಲ. ಕಾಯಿಲೆ ಬಂದಾಗ ಎಲ್ಲೆಲ್ಲಿಗೂ ಅಲೆದಾಡದೆ, ಸ್ವತಃ ವೈದ್ಯರಾಗುವ ಸಾಹಕ್ಕಿಳಿಯದೆ ಆಸ್ಪತ್ರೆಯ ಪ್ರಯೋಜನ ಪಡೆಯಬೇಕು. ಅಷ್ಟೊಂದು ಯೋಜನೆಗಳನ್ನು ಉಳ್ಳಾಲಕ್ಕೆ ತರುವಂತಾಗಲು ನೀವು ನೀಡಿರುವ ಮತವೇ ಕಾರಣ. ನಗರಸಭೆಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ಪೌರಾಯುಕ್ತೆ ವಾಣಿ ವಿ.ಆಳ್ವ ಸ್ವಾಗತಿಸಿದರು.
ಗ್ರಾಮಕರಣಿಕರು ತುಂಬ ಬ್ಯುಸಿ
ಕಳೆದ ಮೂರು ದಿನಗಳಿಂದ ಗ್ರಾಮಕರಣಿಕರು ಕೈಗೆ ಸಿಗುತ್ತಿಲ್ಲ ಎಂಬ ನಾಗರಿಕರೊಬ್ಬರು ದೂರಿಗೆ ಶಾಸಕರು ತಕ್ಷಣ ಗ್ರಾಮಕರಣಿಕರನ್ನು ಸಂಪರ್ಕಿಸಿದಾಗ, ಶಾಸಕರ ಸೂಚನೆಯಂತೆ ಕಳೆದ ನಾಲ್ಕು ದಿನಗಳಿಂದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದರಿಂದ ಕಚೇರಿಗೆ ಬಂದಿಲ್ಲ. ಗ್ರಾಮ ಸಹಾಯಕರನ್ನು ಮಂಗಳೂರಿನ ಸಹಾಯಕ ಆಯುಕ್ತರು ಚಾಲಕರಾಗಿ ತೆಗೆದುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರತಿಯೊಂದು ಕಡೆಗೂ ನಾನೊಬ್ಬನೇ ಓಟಾಡ ನಡೆಸುತ್ತಿದ್ದೇನೆ ಎಂದು ಗ್ರಾಮಕರಣಿಕರು ತಿಳಿಸಿದರು.
ನೆರೆ ಸಂತ್ರಸ್ತರು ನೆಮ್ಮದಿಯಿಂದ ದಿನನಿತ್ಯದ ಜೀವನ ಸಾಗಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲು ಸಿದ್ಧರಿದ್ದೇವೆ. ಮೊನ್ನೆ ಎಲ್ಲ ಧರ್ಮದ ಧಾರ್ಮಿಕ ಮಂದಿರಗಳಲ್ಲಿ ಸಂತ್ರಸ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದ್ದು ಸಂಪೂರ್ಣ ಸಹಾಯ ಮಾಡಿದ್ದಾರೆ. ಅದು ತಾತ್ಕಾಲಿಕ, ಶಾಶ್ವತವಾಗಲು ಸಾಧ್ಯವಿಲ್ಲ. ಪರಿಹಾರ ವಿತರಣೆ ಸಂದರ್ಭದಲ್ಲಿ ಅರ್ಹರಿಗೆ ಮಾತ್ರ ಸಹಾಯ ಸಿಗುವಂತಾಗಬೇಕು. ಅನರ್ಹರಿಗೆ ಸಿಕ್ಕಿದರೆ ಜಿಲ್ಲಾ ಮಟ್ಟದ ಆ„ಕಾರಿಗಳಿಗೆ ಸಣ್ಣ ಸಂಶಯ ಬಂದರೂ ಇಲ್ಲಿ ಬೋಗಸ್ ಮಾಡುತ್ತಾರೆ ಎಂದು ಮುಂದಿನ ದಿನಗಳಲ್ಲಿ ಅರ್ಹರಿಗೂ ಸೌಲಭ್ಯ ಸಿಗದು. ದುರಪಯೋಗವಾಗದಂತೆ ನೋಡಿಕೊಳ್ಳಿ. ನಷ್ಟ ಪರಿಹಾರ ಹೆಚ್ಚಿಸಬಹುದು. ಆದರೆ ಯಾವುದೇ ಕಾರಣಕ್ಕೂ ದುರುಪಯೋಗವಾಗಬಾರದು. ಮಾನವೀಯತೆ ಹಾಗೂ ಸಹೋದರತೆಯಿಂದ ಸಾಂಕೇತಿಕವಾಗಿ ಕೊಡುವ ಪರಿಹಾರ ಕೊಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಹಾರ ಸಿಗಲಿದೆ. ಅ„ಕಾರಿಗಳಲ್ಲಿ ಮಾತನಾಡಿ ಇನ್ನಷ್ಟು ಸಿಗುವ ಭರವಸೆ ಸಿಕ್ಕಿದೆ. ಮುಖ್ಯಮಂತ್ರಿಗಳ ಜೊತೆಗೆ ಪರಿಹಾರ ಏಗೆ ಕೊಡಬಹುದು ಎಂಬ ಕುರಿತಾಗಿ ಸಲಹೆ ನೀಡಿದ್ದೇವೆ. ಕಷ್ಟಕಾಲದಲ್ಲಿ ಸೌಹಾರ್ದತೆ ಮೆರೆದವರು ಯಾರೆಲ್ಲ ಸಹಾಯ ಮಾಡಿದ್ದಾರೋ ಅಂತಹ ಸೇವಾ ಮನೋಭಾವನೆ ಇತರ ದಿನಗಳಲ್ಲೂ ಶಾಶ್ವತವಾಗಿ ಮೂಡಿಬರಲಿ. ಮನೆ ಧರಾಶಾಹಿಯಾಗಿರುವುದು, ಭಾಗಶಃ ಹಾನಿ, ಸಂಪೂರ್ಣ ಹಾನಿ ಅದಕ್ಕೆ ಪರಿಹಾರ ಕೊಡಲು ಬೇರೆಯದ್ದೇ ಆದ ವ್ಯವಸ್ಥೆ ಇದೆ. ಅರ್ಜಿ ಕೊಟ್ಟರೆ ಅದನ್ನು ಕೊಡುವ ವ್ಯವಸ್ಥೆ ಮುಂದಿನ ದನಗಳಲ್ಲಿ ಆಗುತ್ತದೆ.


