UN NETWORKS
ಉಳ್ಳಾಲ : ಕಳೆದೆರಡು ದಿನಗಳಿಂದ ಸುರಿದ ಗಾಳಿ ಮಳೆಗೆ ನೇತ್ರಾವತಿ ನದಿ ಉಕ್ಕಿ ಹರಿದು ನದಿ ತಟದ ಪ್ರದೇಶಗಳು ಸೇರಿದಂತೆ ನಡುಗಡ್ಡೆಗಳು(ಕುದ್ರು)ಜಲಾವೃತಗೊಂಡಿದ್ದು, ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು ಉಳ್ಳಾಲ ವ್ಯಾಪ್ತಿಯ ವಿವಿಧ ಗ್ರಾಮಗಳ ನದಿ ತಟದ ಸುಮಾರು 300ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ಹೆಚ್ಚುನ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಯಿತು. ಸ್ಥಳಕ್ಕೆ ಜಿಲ್ಲಾ„ಕಾರಿ ಭೇಟಿ ನೀಡಿದ್ದು, ಶಾಸಕ ಯು,ಟಿ, ಖಾದರ್, ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಮತ್ತು ಸ್ಥಳೀಯ ಕೌನ್ಸಿಲರ್ ಗಳ ನೇತೃತ್ವದಲ್ಲಿ ಸಂಘ ಸಂಸ್ಥೆಗಳು ಸಂಘಟನೆಗಳ ಯುವಕರು ರಕ್ಷಣೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.























ಉಳ್ಳಾಲ ಭಾಗಶ: ಜಲಾವೃತ : ಉಳ್ಳಾಲ ನಗರಸಭಾ ವ್ಯಾಪ್ತಿಯ ನೇತ್ರಾವತಿ ನದಿ ತಟದ ಭಾಗಶ: ಪ್ರದೇಶಗಳು ಜಲಾವೃತಗೊಂಡಿದೆ. ಉಳ್ಳಾಲದ ಪ್ರಮುಖ ದ್ವೀಪ ಪ್ರದೇಶವಾಗಿರುವ ಉಳ್ಳಾಲ ಉಳಿಯ ವ್ಯಾಪ್ತಿಯಲ್ಲಿ ಸುಮಾರು 25 ಮನೆಗಳು ಜಲಾವೃತಗೊಂಡಿದ್ದು ಇದರಲ್ಲಿ 10 ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ.
ಉಳ್ಳಾಲ ಹೊೈಗೆ ಪ್ರದೇಶದಲ್ಲಿ 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು ಇಲ್ಲಿಯೂ ಭಾಗಶ ಮನೆಗಳ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ. ಈ ಪ್ರದೇಶದಲ್ಲಿ ಹೆಚ್ಚಿನವರುಸ್ವಂತದೋಣಿಗಳನ್ನು ಹೊಂದಿದ್ದು ಮನೆಯ ಹಿರಿಯರನ್ನು ಮತ್ತು ಮಕ್ಕಳನ್ನು ಸ್ಥಳಾಂತರಗೊಳಿಸಿದರೆ ದೊಡ್ಡವರು ಮನೆಗಳಲ್ಲೇ ಉಳಿದುಕೊಂಡಿದ್ದಾರೆ. ಉಳ್ಳಾಲ ಪಾಂಡೇಲ್ ಪಕ್ಕಾ 30 ಮನೆಗಳು ಜಲಾವೃತಗೊಂಡಿದ್ದು, 12 ಮೆಗಳ ನಿವಾಸಿಗಳು ಸ್ಥಳಾಂತರಗೊಂಡಿದ್ದಾರೆ. ಕಕ್ಕೆತೋಟ, ಬಂಡಿಕೊಟ್ಯದಲ್ಲಿ 20 ಮನೆಗಳು,
ಉಳ್ಳಾಲ ಕೋಡಿಯಲ್ಲಿ 20 ಮನೆಗಳು ಜಲಾವೃತಗೊಂಡಿದೆ. ಪೆರ್ಮನ್ನೂವ್ಯಾಪ್ತಿಯ ಕಲ್ಲಾಪು ಬಳಿ 40 ಮನೆಗಳು, ಕಲ್ಲಾಪುಪಟ್ಲ ಬಳಿ 100 ಮನೆಗಳು ಮಾರ್ಗತಲೆ ಮಂಚಿಲದಲ್ಲಿ 40 ಮನೆಗಳುಜಲಾವೃತಗೊಂಡಿದ್ದು, ಸ್ಥಳೀಯ ಕೌನ್ಸಿಲರ್‍ಗಳಾದ ದಿನಕರ ಉಳ್ಳಾಲ್, ಮುಷ್ತಾಕ್ ಪಟ್ಲ, ಬಾಝಿಲ್ ಡಿ.ಸೋಜ,ವೀಣಾ ಇ.ಸೋಜ, ಇಸ್ಮಾಯಿಲ್ , ಅಬ್ದುಲ್ ಅಅಝೀಝ್ ಕೋಡಿ, ಅಸ್ಗರ್ ಆಲಿ, ತಹಶೀಲ್ದಾರ್ ಗುರುಪ್ರಸಾದ್, ಮುಖ್ಯಾ„ಕಾರಿ ವಾಣಿ ಆಳ್ವ, ವಿ.ಎ. ಪ್ರಮೋದ್ ಕುಮಾರ್, ಶ್ವೇತಾ, ಉಳ್ಳಾಲ ನಗರಸಭಾ ಸಿಬಂದಿಗಳು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡರು.
ಉಳ್ಳಾಲ ವ್ಯಾಪ್ತಿಯಲ್ಲಿ ಉಳ್ಳಾಲ ದರ್ಗಾ, ಧರ್ಮನಗರ ಸರಕಾರಿ ಶಾಲೆ, ಶಾರದನಿಕೇತನ ಉಳ್ಳಾಲ, ಉಳ್ಳಾಲ ನಗರಸಭೆ, ಸಂತ ಸೆಬಾಸ್ತಿಯನ್ನರ ಶಾಲೆಯಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದರೂ ಹೆಚ್ಚಿನವರು ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.
ಜಲಾವೃತವಾದ ಸೋಮನಾಥ ಉಳಿಯ : ಮುನ್ನೂರು ಗ್ರಾಮದ ಸೋಮನಾಥ ಉಳಿಯದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, ಅಪಾಯದಲ್ಲಿರುವ 15ಕ್ಕೂ ಹೆಚ್ಚು ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಯಿತು. ಈ ಪ್ರದೇಶದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಅಗ್ನಿಶಾಮಕ ದಳ, ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಭಂಡಾರಬೈಲು, ವಿ.ಎ.ನಯನ ನೇತೃತ್ವದಲ್ಲಿ ರಕ್ಷಣಾ ಕಾರ್ಯ ನಡೆಯಿತು.ಸ್ಥಳೀಯವಾಗಿ ಎರಡು ದೋಣಿಗಳು ಮತ್ತು ಅಗ್ನಿಶಾಮಕ ದಳದ ಒಂದು ದೋಣಿಯಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗವಹಿಸಿದರು.
ಅಂಬ್ಲಮೊಗರು ಗ್ರಾಮದ ಗಟ್ಟಿಕುದ್ರು 30 ಮನೆಗಳು ಜಲಾವೃತಗೊಂಡಿದ್ದು ಪೆಡ್ಡಿ ಡಿ.ಸೋಜ ಎಂಬವರ ಮನೆ ಸಂಪೂರ್ಣಕುಸಿದಿದೆ. ಹರೇಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಿಗೆದಡಿ, ಬೈತಾರ್ ಬಳಿ 4ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದೆ. ಅಂಬ್ಲಮೊಗರುವಿನ ಮದಕ ಸರಕಾರಿ ಶಾಲೆಯಲ್ಲಿ ಮತ್ತು ಎಲಿಯಾರ್‍ಪದವು ಚರ್ಚ್‍ನಲ್ಲಿ ಗಂಜಿ ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಉಳಿಯ ಸೋಮನಾಥೇಶ್ವರೀ ದೇವಸ್ಥಾನ, ಕೋಟ್ರಗುತ್ತು ಲಕ್ಷ್ಮೀನರಸಿಂಹ ದೇವಸ್ಥಾನ ಜಲಾವೃತಗೊಂಡಿದೆ.
ಬಾಣಂತಿಯರ ರಕ್ಷಣೆ : ಸೋಮನಾಥ ಉಳಿಯದಲ್ಲಿ ಜಲಾವೃತಗೊಂಡಿದ್ದ ಪ್ರದೇಶದಿಂದ ಇಬ್ಬರು ಬಾಣಂತಿಯರನ್ನು ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮಿ ಗಟ್ಟಿ ನೇತೃತ್ವದಲ್ಲಿ ಇಬ್ಬರು ಬಾಣಂತಿಯರನ್ನು ಹಸುಗೂಸುಗಳೊಂದಿಗೆ ರಕ್ಷಿಸಲಾಯಿತು. ಸೋಮನಾಥ ಉಳಿಯ ನಿವಾಸಿ ಮಮತಾ ಅವರ 12 ದಿನದ ಮಗು ಮತ್ತು ರಚನಾ ಅವರ 10 ದಿನದ ಮಗುವಿನೊಂದಿಗೆ ರಕ್ಷಣೆ ಮಾಡಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹರೀಶ್ ಭಂಡಾರಬೈಲ್, ಸ್ಥಳೀಯರಾದ ರಜನೀಶ್, ದಿನೇಶ್, ವಿಶಾಲ್ ಕೊಲ್ಯ ಸೇರಿದಂತೆ ಸ್ಥಳೀಯರು ಇವರ ರಕ್ಷಣೆಯಲ್ಲಿ ತೊಡಗಿಸಿಕೊಂಡರು.


